For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನ ಖ್ಯಾತ ನಟನಿಗೆ ಗೂಗಲ್ ವಿಶೇಷ ಗೌರವ

  |

  ಬಾಲಿವುಡ್ ನ ಖ್ಯಾತ ಲೆಜೆಂಡರಿ ನಟ ಅಮರೀಶ್ ಪುರಿ ಅವರ 87ನೆ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ವಿನಲ್ ಆಗಿ ಅಬ್ಬರಿಸುತ್ತಿದ್ದ ಅಮರೀಶ್ ಪುರಿ ಅಭಿನಯಕ್ಕೆ ಮಾರು ಹೋಗದವರೆ ಇಲ್ಲ. 'ಮಿಸ್ಟರ್ ಇಂಡಿಯಾ' ಸಿನಿಮಾದ ಮೊಗ್ಯಾಂಬೊ ಪಾತ್ರ ಮತ್ತು 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೇ' ಚಿತ್ರದಲ್ಲಿ ನಾಯಕಿ ಸಿಮ್ರಾನ್ ತಂದೆ ಚೌಧರಿ ಬಾಲ್ ದೇವ್ ಸಿಂಗ್ ಪಾತ್ರಗಳು ಇಂದಿಗೂ ಚಿತ್ರಪ್ರಿಯರನ್ನು ಕಾಡುವ ಪಾತ್ರಗಳಾಗಿವೆ.

  ಸುಮಾರು 200ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಚಿತ್ರಾಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿರುವ ಪ್ರಖ್ಯಾತ ವಿಲನ್ ಅಮರೀಶ್ ಪುರಿ ಅವರಿಗೆ ಗೂಗಲ್ ಡೂಡಲ್ ಮೂಲಕ ವಿಶೇಷವಾದ ಗೌರವ ಸಲ್ಲಿಸಿದೆ. ಅಮರೀಶ್ ಪುರಿ ಅವರ ಗಡಸು ಧ್ವನಿ, ದೈತ್ಯ ಆಕಾರ, ವಿಭಿನ್ನ ಮ್ಯಾರಿಸಂ ವಿಲನ್ ಪಾತ್ರಕ್ಕೆ ಹೇಳಿಮಾಡಿಸಿದ ಹಾಗೆ ಇತ್ತು.

  ಅಂದ್ಹಾಗೆ ಅಮರೀಶ್ ಪುರಿ ಹುಟ್ಟಿದ್ದು ಪಂಜಾಬ್ ನಲ್ಲಿ. ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು 39ನೇ ವಯಸ್ಸಿನಲ್ಲಿ. 1951 ರಲ್ಲಿ ಬಾಲಿವುಡ್ ಸಿನಿಮಾವೊಂದಕ್ಕೆ ಆಡಿಶನ್ ಗೆ ಹೋಗಿದ್ದ ಅಮರೀಶ್ ಅವರನ್ನು ರಿಜೆಕ್ಟ್ ಮಾಡಿ ಕೊಳುಹಿಸಲಾಗುತ್ತಂತೆ. ಆ ನಂತರ ಸುಮಾರು 20 ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ 1971ರಲ್ಲಿ 'ರೇಷ್ಮಾ ಔರ್ ಶೇರಾ' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

  ವೃತ್ತಿ ಜೀವನದಲ್ಲಿ ತರಹೇವಾರಿ ಪಾತ್ರಗಳನ್ನು ಮಾಡಿರುವ ಅಮರೀಶ್ ಪುರಿ ಕೇವಲ ಬಾಲಿವುಡ್ ಮಾತ್ರವಲ್ಲದೆ ಭಾರತದ ಸಾಕಷ್ಟು ಭಾಷೆಯಲ್ಲಿ ಅಭಿನಯಿಸಿದ್ದಾರೆ. ಕನ್ನಡ,ತಮಿಳು, ತೆಲುಗು, ಮರಾಠಿ, ಪಂಜಾಬ್, ಮಲಯಾಳಂ ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಅಭಿನಯ ಚಾತುರ್ಯ ಮೆರೆದಿದ್ದಾರೆ.

  ಕನ್ನಡದಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದ 'ಕಾಡು' ಚಿತ್ರದಲ್ಲಿ ಚಂದ್ರೇಗೌಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮರೀಶ್ ಪುರಿ ಅಭಿನಯದ ಪಾತ್ರಗಳಲ್ಲಿ 'ಮಿಸ್ಟರ್ ಇಂಡಿಯಾ' ಚಿತ್ರದ ಮೊಗ್ಯಾಂಬೊ ಪಾತ್ರ ಬಾರಿ ಪ್ರಸಿದ್ಧಿ ಗಳಿಸಿದೆ. 'ಮೊಗ್ಯಾಂಬೊ ಖುಷ್ ಹುವಾ' ಡೈಲಾಗ್ ಅವರ ಸಿಗ್ನೆಚರ್ ಡೈಲಾಗ್ ಆಗಿದೆ. ಹೀಗೆ ಅಭಿಮಾನಿಗಳನ್ನು ಭಿನ್ನ ವಿಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಿದ್ದ ಅಮರೀಶ್ ಪುರಿ ತೀವ್ರ ಅನಾರೋಗ್ಯದ ಹಿನ್ನಲೆ 2005ರಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಇಂದು ಅಮರೀಶ್ ಪುರಿ ನಮ್ಮೊಂದಿಗೆ ಇಲ್ಲ ಅಂದರೂ ಅವರ ಮಾಡಿದ ಅದ್ಭುತ ಪಾತ್ರಗಳು ಜನಮಾನಸದಲ್ಲಿ ಜೀವಂತವಾಗಿವೆ.

  English summary
  Bollywood legendary actor Amrish Puri on his 87th birth anniversary today. Google is commemorating the actor and his contribution to Indian cinema on his 87th birth anniversary on Saturday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X