twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ್ ಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

    By Suneetha
    |

    ಭಾರತೀಯ ಚಿತ್ರರಂಗದ ಜೀವಂತ ದಂತಕಥೆ, ಹಿಂದಿ ಚಿತ್ರರಂಗದ ಎವರ್ ಗ್ರೀನ್ ನಟ ದಿಲೀಪ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಬೆನ್ನಲ್ಲೇ ಇದೀಗ ತಮ್ಮ ಮನೆಯಲ್ಲೇ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ.

    ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರ ಮನೆಗೆ ಹೋಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು (ಡಿಸೆಂಬರ್ 13) ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.[ಅಭಿನೇತೃ ದಿಲೀಪ್ ಕುಮಾರ್ ಬಗೆಗಿನ ಸುದ್ದಿ ನಿಜವೇ?]

    2015ರ ಜನವರಿ 25 ರಂದು ಗಣರಾಜ್ಯೋತ್ಸವದ ಮುನ್ನಾ ದಿನ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್ ಮತ್ತು ಇತರ ಕೆಲವು ಗಣ್ಯರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು.

    Legendary actor Dilip Kumar honoured with Padma Vibhushan

    ಆದರೆ ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪಾಲ್ಗೊಳ್ಳಲು 93 ವರ್ಷ ವಯಸ್ಸಿನ ಹಿರಿಯ ನಟ ದಿಲೀಪ್ ಕುಮಾರ್ ಅವರಿಗೆ ಸಾಧ್ಯವಾಗಿರಲಿಲ್ಲ.[ನಟ ದಿಲೀಪ್ ಕುಮಾರ್ ಗೆ ಲಘು ಹೃದಯಾಘಾತ]

    1944 ರಲ್ಲಿ 'ಜವರ್ ಭತ್ತ' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದಿಲೀಪ್ ಕುಮಾರ್ ಅವರು ಹಿಂದಿ ಚಿತ್ರರಂಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

    ಬಾಲಿವುಡ್ ನ ಹಲವಾರು ನಟರಿಗೆ ಪ್ರೇರಣೆಯಾದ ನಟ ದಿಲೀಪ್ ಕುಮಾರ್ ಅವರು 'ಅಂದಾಜ್ (1949), ಸ್ವಷ್ ಬಕ್ಲಿಂಗ್ ಆನ್ ( 1952), ದೇವದಾಸ್ (1955), ಆಜಾದ್ (1955), ಮುಘಲ್ ಎ ಅಜಮ್ (1960) ಮತ್ತು 'ಗಂಗಾ ಜಮುನಾ' (1961) ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಹಿಟ್ ನಟನಾಗಿ ಹೊರಹೊಮ್ಮಿದ್ದಾರೆ.

    English summary
    Legendary actor Dilip Kumar honoured with Padma Vibhushan; Home Minister Rajnath Singh confers the award on actor at his home in Mumbai.
    Monday, December 14, 2015, 9:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X