For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಲೆಜೆಂಡರಿ ಸಿಂಗರ್ ಭೂಪಿಂದರ್ ಸಿಂಗ್ ನಿಧನ!

  |

  ಬಾಲಿವುಡ್‌ನ ಲೆಜೆಂಡರಿ ಗಾಯಕ ಭೂಪಿಂದರ್ ಸಿಂಗ್ ನಿಧನರಾಗಿರುವ ಸುದ್ದಿ ಹೊರಬಿದ್ದಿದೆ. ಸಂಗೀತಲೋಕದ ದಿಗ್ಗಜನ ಸಾವಿನ ಸುದ್ದಿ ಕೇಳಿ ಬಾಲಿವುಡ್‌ ಮಂದಿ ಶೋಕ ಸಾಗರದಲ್ಲಿದೆ. ಭೂಪಿಂದರ್ ಸಿಂಗ್ ಮುಂಬೈನಲ್ಲಿ ಇಂದು (ಜುಲೈ 18) ಸಂಜೆ 7.45ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

  ಭೂಪಿಂದರ್ ಸಿಂಗ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿಯ ಆರೋಗ್ಯದ ಬಗ್ಗೆ ಪತ್ನಿ ಮಿತಾಲಿ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. " ಭೂಪಿಂದರ್ ಸಿಂಗ್ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅಲ್ಲದೆ ಹಲವು ದಿನಗಳಿಂದ ಮೂತ್ರ ವಿಸರ್ಜನೆಯ ಸಮಸ್ಯೆ ಕೂಡ ಇತ್ತು." ಎಂದು ಮಾಹಿತಿ ನೀಡಿದ್ದಾರೆ.

  10 ದಿನಗಳ ಹಿಂದ ಆಸ್ಪತ್ರೆಗೆ ದಾಖಲು

  ಬಾಲಿವುಡ್‌ನ ಹಿರಿಯ ಗಾಯಕ 10 ದಿನಗಳ ಹಿಂದೆ ಮುಂಬೈನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. " ಭೂಪಿಂದರ್ ಸಿಂಗ್ ಅವರಿಗೆ ಕರುಳಿನ ಸಮಸ್ಯೆಯಿತ್ತು. ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದು, ಪರೀಕ್ಷೆ ಮಾಡುವಾಗ ಅವರಿಗೆ ಕೊರೊನಾ ತಗುಲಿತ್ತು. ನಂತರದ ದಿನಗಳಲ್ಲಿ ಇವರ ಆರೋಗ್ಯ ಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಸಂಜೆ 7.45ರ ಹೊತ್ತಿಗೆ ಹೃದಯ ಸ್ತಂಭನವಾಗಿದೆ. " ಎಂದು ವೈದ್ಯರು ತಿಳಿಸಿದ್ದಾರೆ.

  ಭೂಪಿಂದರ್ ಸಿಂಗ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಹೇವಿ ಬಾಸ್ ಧ್ವನಿಯಿಂದ ಭೂಪಿಂದರ್ ಸಿಂಗ್ ಬಾಲಿವುಡ್‌ನಲ್ಲಿ ಫೇಮಸ್ ಆಗಿದ್ದರು. ಹಲವು ಹಿಟ್ ಹಾಡುಗಳನ್ನು ನೀಡಿರುವ ಲೆಜೆಂಡರಿ ಸಿಂಗರ್ ನಿಧನಕ್ಕೆ ಬಾಲಿವುಡ್ ಮಂದಿ ಕಂಬನಿ ಮಿಡಿದಿದ್ದಾರೆ.

  ಸೂಪರ್ ಹಿಟ್ ಹಾಡುಗಳ ಗಾಯಕ

  ಭೂಪಿಂದರ್ ಸಿಂಗ್ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. 80 ಹಾಗೂ 90ರ ದಶಕದಲ್ಲಿ ಬಂದ ಹಾಡುಗಳು ಬಹಳ ಫೇಮಸ್ ಆಗಿದ್ದವು. 'ಮೌಸಂ', 'ಸತ್ತೆ ಪೆ ಸತ್ತ', 'ಆಹಿಸ್ತಾ ಆಹಿಸ್ತಾ', 'ದೂರಿಯಾ', 'ಹಕೀಖತ್' ಸೇರಿದಂತೆ ಹಲವು ಸಿನಿಮಾಗಳಿಗೆ ಸೂಪರ್ ಹಿಟ್ ಸಾಂಗ್‌ಗಳನ್ನು ನೀಡಿದ್ದಾರೆ.

  Legendary Bollywood Singer Bhupinder Singh Passed Away At The Age Of 82 In Mumbai

  ಮಜ್ಬೂರ್ ಮುಜೆ, ಉಸ್ನೆ ಬುಲ್ಯಾ ಹೋಗ, ದಿಲ್ ಧೂಂಡ್ತಾ ಹೇ, ದುಕಿ ಪೆ ದುಕಿ ಹೊ ಯಾ ಸತ್ತೆ ಪೆ ಸತ್ತ ಸೇರಿದಂತೆ ಭೂಪಿಂದರ್ ಸಿಂಗ್ ಹಾಡಿದ ಹಾಡುಗಳು ಬಾಲಿವುಡ್‌ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾದ ಹಿಟ್ ಲಿಸ್ಟ್ ಸೇರಿದೆ.

  ಭೂಪಿಂದರ್ ಸಿಂಗ್ ಫೆಬ್ರವರಿ 06ರಂದು 1940ರಲ್ಲಿ ಪಂಜಾಬ್‌ನ ಅಮೃತಸರ್ ದಲ್ಲಿ ಜನಿಸಿದ್ದರು. ಇವರ ತಂದೆ ನಥಾ ಸಿಂಗ್‌ಜಿ ಟ್ರೈನ್ಡ್ ಗಾಯಕರಾಗಿದ್ದರು. ಜೊತೆಗೆ ಮ್ಯೂಸಿಕ್ ಟೀಚರ್ ಕೂಡ ಆಗಿದ್ದರು. ಒಂದು ಹಂತದಲ್ಲಿ ಭೂಪಿಂದರ್ ಸಿಂಗ್ ತಂದೆಯ ಸಂಗೀತವನ್ನು ಹೇಟ್ ಮಾಡುತ್ತಿದ್ದರು.

  English summary
  Legendary Bollywood Singer Bhupinder Singh Passed Away At The Age Of 82 In Mumbai, Know More.
  Tuesday, July 19, 2022, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X