ಖ್ಯಾತ ನಟಿ ಇನ್ನಿಲ್ಲ; ತನ್ನ ನಿವಾಸದಲ್ಲೇ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಬಣ್ಣದಲೋಕದಲ್ಲಿ ಮೆರೆಯುವ ಕೆಲ ತಾರೆಯರ ಅಂತ್ಯ ಮಾತ್ರ ಬಹಳ ದುರಂತವಾಗಿರುತ್ತದೆ. ಕೆಲವೊಮ್ಮೆ ಚಿಕಿತ್ಸೆಗೆ ಹಣವಿಲ್ಲದೇ ಜೀವ ಬಿಟ್ಟವರು ಇದ್ದಾರೆ. ಸದ್ಯ ಪಾಕಿಸ್ತಾನಿ ನಟಿ ಆಯೇಷಾ ಖಾನ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಆಕೆಗೆ 76 ವರ್ಷ ವಯಸ್ಸಾಗಿತ್ತು.

ನಟಿ ಆಯೇಷಾ ಅಗಲಿಗೆ ಪಾಕಿಸ್ತಾನದ ಬಣ್ಣದ ಲೋಕಕ್ಕೆ ಆಘಾತ ತಂದಿದೆ. ಅಲ್ಲಿನ ತಾರೆಯರು ಕಬನಿ ಮಿಡಿದಿದ್ದಾರೆ. ಕರಾಚಿಯಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಆಯೇಷಾ ಸಾವನ್ನಪ್ಪಿದ್ದಾರೆ. ಕೆಲ ದಿನಗಳಿಂದ ಆ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿತ್ತು. ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮನೆಯೊಳಗೆ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಆಕೆಯ ಮೃತದೇಹ ಕಂಡಿದೆ. ಶವಪರೀಕ್ಷೆಗಾಗಿ ಮೃತ ದೇಹವನ್ನು ಜಿನ್ನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ವರದಿಯಾಗಿದೆ.

Legendary Pakistani actress Ayesha Khan passes away at the age of 76

ಪಾಕಿಸ್ತಾನದ ಕಿರುತೆರೆ ಕಾರ್ಯಕ್ರಮಗಳಲ್ಲಿ ಆಯೇಷಾ ಖಾನ್ ಅವರದ್ದು ದೊಡ್ಡ ಹೆಸರು. ಸಾಕಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ಅವರು ನಟಿಸಿದ್ದರು. 1981ರಲ್ಲಿ ಬಣ್ಣ ಹಚ್ಚಿದ ಆಯೇಷಾ 40 ವರ್ಷಗಳ ಕಾಲ ಲೈಮ್‌ಲೈಟ್‌ನಲ್ಲಿ ಇದ್ದರು. ಶಾರುಖ್ ಖಾನ್ ನಟನೆಯ 'ರಾಜು ಬನ್ ಗಯಾ ಜಂಟಲ್‌ಮನ್' ಚಿತ್ರದಲ್ಲಿ ಕೂಡ ಆಕೆ ನಟಿಸಿದ್ದರು. ಮಸ್ಕಾ್ ಹಾಗೂ ಫಾತಿಮಾ ಎಂಬ ಎರಡು ಪಾಕಿಸ್ತಾನಿ ಸಿನಿಮಾಗಳಲ್ಲಿ ಮಿಂಚಿದ್ದರು.

ಕಿರುತೆರೆ ಕಾರ್ಯಕ್ರಮ, ಸಿನಿಮಾ ಮಾತ್ರವಲ್ಲದೇ ಸಾಕಷ್ಟು ಟೆಲಿಫಿಲ್ಮ್‌ಗಳಲ್ಲಿ ಆಯೇಷಾ ನಟಿಸಿದ್ದಾರೆ. ಕೆಲ ದಿನಗಳಿಂದ ಹಿರಿಯ ನಟಿ ಒಬ್ಬೊಂಟಿಯಾಗಿ ವಾಸಿಸುತ್ತಿದ್ದರು. ಸದ್ಯ ಆಕೆಯ ಕೊನೆಯ ದಿನಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆಯೇಷಾ ಅವರದ್ದು ಸಹಜ ಸಾವೋ? ಅಥವಾ ಬೇರೆ ಏನಾದರೂ ಕಾರಣ ಇದ್ಯಾ ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಆಯೇಷಾ ಸಹೋದರಿ ಖಾಲಿದಾ ರಿಯಾಸತ್ ಕೂಡ ಪಾಕಿಸ್ತಾನಿ ಕಿರುತೆರೆಯಲ್ಲಿ ಗುರ್ತಿಸಿಕೊಂಡಿದ್ದಾರೆ.

1948, ನವೆಂಬರ್ 22ರಂದು ಆಯೇಷಾ ಕರಾಚಿಯಲ್ಲಿ ಜನಿಸಿದ್ದರು. ಪದವಿ ಪಡೆದು ಬಳಿಕ ಪಾಕಿಸ್ತಾನದ ರೇಡಿಯೋದಲ್ಲಿ ಕೆಲಸ ಮಾಡಲು ಆರಂಭಿಸಿದ್ದರು. ಬಳಿಕ ಪಾಕಿಸ್ತಾನ ಕಿರುತೆರೆ ಕಾರ್ಯಕ್ರಮಗಳಲ್ಲಿ ನಟಿಸೋಕೆ ಆರಂಭಿಸಿದ್ದರು.

More from Filmibeat

English summary
The Pakistani entertainment industry mourns the death of Ayesha Khan at 76
Read more about: actress hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X