ಖ್ಯಾತ ಚಿತ್ರ ಸಾಹಿತಿ, ಕವಿ ರಾಹತ್ ಇಂದೋರಿ ನಿಧನ

ಬಾಲಿವುಡ್ ಚಿತ್ರರಂಗದ ಖ್ಯಾತ ಗೀತರಚನೆಕಾರ ಹಾಗೂ ಉರ್ದು ಕವಿ ರಾಹತ್ ಇಂದೋರಿ (70) ಮಂಗಳವಾರ ಸಂಜೆ 5 ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಂಗಳವಾರ ಬೆಳಗ್ಗೆ ಇಂದೋರ್‌ನ ಅರಬಿಂದೋ ಆಸ್ಪತ್ರೆಗೆ ರಾಹತ್ ಅವರು ದಾಖಲಾಗಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದ ರಾಹತ್ 'ಕೊವಿಡ್ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ಪರೀಕ್ಷೆಗೆ ಒಳಪಟ್ಟಿದ್ದೆ. ಪಾಸಿಟಿವ್ ಬಂದಿತ್ತು. ಹಾಗಾಗಿ, ಅರಬಿಂದೋ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ರೋಗದಿಂದ ನಾನು ಗೆದ್ದು ಬರಲು ಪ್ರಾರ್ಥಿಸಿ'' ಎಂದು ಮನವಿ ಮಾಡಿದ್ದರು.

ದುರಾದೃಷ್ಟವಶಾತ್ ಮಂಗಳವಾರ ಸಂಜೆ ರಾಹತ್ ಇಂದೋರಿ ಅವರಿಗೆ ಹೃದಯಾಘಾತವಾಗಿದೆ. ಸತತವಾಗಿ ಮೂರು ಸಲ ಹೃದಯಾಘಾತ ಸಂಭವಿಸಿತು. ನಿರಂತರ ಪ್ರಯತ್ನಗಳ ಹೊರತಾಗಿಯೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

Legendary Poet And Lyricist Rahat Indori Has Passed Away

ಮುನ್ನಾಭಾಯ್ ಎಂಬಿಬಿಎಸ್, ಘಾತಕ್, ಇಷ್ಕ್, ಖದ್ದರ್, ಮೀನಾಕ್ಷಿ ಎಂಬ ಹಿಟ್ ಚಿತ್ರಗಳು ಸೇರಿದಂತೆ ಅನೇಕ ಹಿಂದಿ ಚಿತ್ರಗಳಿಗೆ ಗೀತೆ ರಚನೆ ಮಾಡಿದ್ದಾರೆ. ಸುಮಾರು 50 ವರ್ಷಗಳ ಕಾಲ ಕಾವ್ಯ ಜೀವನದಲ್ಲಿ ತೊಡಗಿಕೊಂಡಿದ್ದರು ಎನ್ನುವುದು ವಿಶೇಷ.

ಎಆರ್ ರೆಹಮಾನ್, ಅನು ಮಲ್ಲಿಕ್, ಅರಿಜಿತ್ ಸಿಂಗ್, ಅಲ್ಕಾ ಯಾಗ್ನಿಕ್ ಸೇರಿದಂತೆ ಹಲವು ಖ್ಯಾತನಾಮ ಸಂಗೀತ ನಿರ್ದೇಶಕರ ಜೊತೆ ರಾಹತ್ ಇಂದೋರಿ ಕಾರ್ಯನಿರ್ವಹಿಸಿದ್ದರು.

More from Filmibeat

English summary
Legendary poet and Lyricist Rahat Indori has passed away at 5 PM today due to coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X