twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ಕ್ಷೇತ್ರಕ್ಕೆ ತಮ್ಮ ಇಡೀ ಜೀವನವನ್ನೇ ಮುಡುಪಿಟ್ಟಿದ್ದ ಗಾಯಕಿ ಲತಾ ಮಂಗೇಶ್ಕರ್ !

    |

    ತಮ್ಮ ಇಡೀ ಜೀವನವನ್ನೇ ಸಂಗೀತ ಕ್ಷೇತ್ರಕ್ಕೆ ಮುಡುಪಾಗಿಟ್ಟಿರುವ ಅಪ್ರತಿಮ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ನಿಧನರಾಗಿದ್ದಾರೆ. ಕಳೆದ 29 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಮಂಗೇಶ್ಕರ್ 1929ರ ಸೆ. 28ರಂದು ಜನಿಸಿದ್ದರು.ಕೇವಲ ಹಿಂದಿ ಮಾತ್ರವಲ್ಲಿದೇ 36ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಲತಾ ಮಂಗೇಶ್ಕರ್ ಸಾಧನೆ ಮಾಡಿದ್ದರು.

    ಲತಾ ಮಂಗೇಶ್ಕರ್ ಅವರ ಸಾಧನೆ ಪರಿಗಣಿಸಿ ಭಾರತ ರತ್ನ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಲಭ್ಯವಾಗಿವೆ. ಫ್ರಾನ್ಸ್ ದೇಶದ ಅತ್ಯುಚ್ಚ ನಾಗರಿಕ ಪ್ರಶಸ್ತಿಯ ಗರಿಯೂ ಅವರ ಮುಡಿಗೇರಿದೆ. ಭಾರತದ ಅತ್ಯಂತ ಜನಪ್ರಿಯ ಗಾಯಕಿ ಎನಿಸಿರುವ ಲತಾ ಮಂಗೇಶ್ಕರ್ ಅವರು ಬಹುಭಾಷಾ ಗಾಯಕಿಯಾಗಿದ್ದಾರೆ. ಹಿಂದಿ ಭಾಷೆಯೊಂದರಲ್ಲೇ 1 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ. ಇದು ಸಹ ದಾಖಲೆಯಾಗಿದೆ.

    ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ತಮಗೆ 5 ವರ್ಷವಿರುವಾಗಲೇ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟವರು. ಮರಾಠಿ ಚಿತ್ರ ಪೇಲ್ ಮಂಗಳಲಾ-ಗೌರ್ ಚಿತ್ರಕ್ಕೆ ಹಾಡು ಹಾಡುವುದರ ಮೂಲಕ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿ ಅದೇ ಚಿತ್ರದಲ್ಲಿ ಚಿಕ್ಕ ಪಾತ್ರವನ್ನು ಕೂಡ ಮಾಡಿದ್ದರು. 1942ರಲ್ಲಿ ಲತಾ ಮಂಗೇಶ್ಕರ್ ಅವರಿಗೆ 13 ವರ್ಷವಿದ್ದಾಗ ಅವರ ತಂದೆ ದೀನಾನಾಥ್​ ಮಂಗೇಶ್ವರ್ ನಿಧನ ಹೊಂದಿದ್ದರು. ಈ ಸಮಯದಲ್ಲಿ ನವಯುಗ ಚತ್ರಪತಿ ಸಿನಿಮಾ ಕಂಪನಿ ನಷ್ಟದಲ್ಲಿತ್ತು ಆ ಸಮಯದಲ್ಲಿ ಚಲನಚಿತ್ರಗಳಲ್ಲಿ ನಟನೆ ಹಾಗೂ ಗಾಯಕಿಯಾಗಿ ಕಂಪನಿಗೆ ಸಹಾಯ ಮಾಡಲಾರಂಭಿಸಿದರು ಲತಾ ಮಂಗೇಶ್ಕರ್.

    Legendary Singer Lata Mangeshkar Passes Away at 92
    ಲತಾ ಮಂಗೇಶ್ಕರ್​ ಸುಮ್ಮನೆ ಹಾಗೆಯೇ ಗಾಯಕಿಯಾಗಲಿಲ್ಲ ಅದಕ್ಕು ಮುಂಚೆ ಲತಾ ಅವರು ಪಟ್ಟಿರುವ ಶ್ರಮ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇಡೀ ದಿನ ಗಾಯನದ ಅಭ್ಯಾಸ ಮಾಡುತ್ತಿದ್ದರಂತೆ. ತಂತ್ರಜ್ಞಾನ ಇನ್ನೂ ಮುಂದುವರೆಯದ ಸಮಯದಲ್ಲಿ ಲತಾ ಅವರು ಹಾಡಿರುವ ಹಾಡನ್ನು ನೋಡಿದರೆ, ಅವರು ಎಂಥಾ ಪ್ರತಿಭೆ ಅನ್ನೋದು ತಿಳಿಯುತ್ತದೆ. ಈಗ ಇರುವ ತಂತ್ರಜ್ಞಾನದಿಂದ ಏರಿಳಿತಗಳನ್ನು ಎಡಿಟ್​ ಮಾಬಹುದು, ಆದರೆ ಆಗ ಅಂತಹ ಯಾವುದೇ ಸೌಲಭ್ಯ ಇರಲಿಲ್ಲ. ಅದಕ್ಕೆ ಉದಾಹರಣೆ ಲತಾ ಅವರು ಹಾಡಿರುವ ಈ ಆಯೆಗಾ ಆನೆವಾಲಾ ಹಾಡು...! ಈ ಹಾಡು ಮಹಲ್ ಸಿನಿಮಾದ್ದು.

    ಇನ್ನು ಲತಾ ಮಂಗೇಶ್ಕರ್ ಅವರು ನಿತ್ಯ ಸಂಗೀತಾಭ್ಯಾಸವನ್ನು ಮಾತ್ರ ಬಿಡದೆ ಮಾಡುತ್ತಿದ್ದರಂತೆ. ಅಲ್ಲದೆ ಇಡೀ ದಿನ ಹಾಡುಗಳ ರೆರ್ಕಾಡಿಂಗ್​ನಲ್ಲೇ ಕಳೆಯುತ್ತಿದ್ದರಂತೆ. ಇನ್ನು ಲತಾ ಮಂಗೇಶ್ಕರ್ ಅಂದರೆ ಎಷ್ಟರ ಮಟ್ಟಿಗೆ ಬಾಲಿವುಡ್​ನಲ್ಲಿ ಹೆಸರು ಇತ್ತು ಅಂದರೆ, ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಗಾಯಕಿಯಾಗಿದ್ದರು. ಜೊತೆಗೆ ಖ್ಯಾತ ಗಾಯಕ ಹಾಗೂ ನಟ ಕಿಶೋರ್​ ಕುಮಾರ್ ಸಹ ಲತಾ ಅವರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿರಲಿಲ್ಲವಂತೆ. ಇಂತಹ ಒಬ್ಬ ಅಪ್ರತಿಮ ಗಾಯಕಿಯನ್ನು ಕಳೆದುಕೊಂಡು ಇಡೀ ದೇಶವೆ ದುಃಖತಪ್ತವಾಗಿದೆ. ಗಣ್ಯಾತಿ ಗಣ್ಯರೆ ಲತಾ ಮಂಗೇರ್ಶಕರ್ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

    English summary
    Legendary singer Lata Mangeshkar passed away today. She was admitted to Mumbai’s Breach Candy Hospital on January 8 after she tested positive for Covid-19. She was under treatment.
    Sunday, February 6, 2022, 10:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X