ಸಲ್ಮಾನ್ ಹಾಗೂ ತಂದೆ ಸಲೀಂಗೆ ಜೀವ ಬೆದರಿಕೆ: ಎಫ್‌ಐಆರ್ ದಾಖಲು

ಸಲ್ಮಾನ್ ಖಾನ್ ಹಾಗೂ ಅವರ ತಂದೆ ಖ್ಯಾತ ಚಿತ್ರಕತೆ ರಚನೆಕಾರ ಸಲೀಂ ಅವರಿಗೆ ಜೀವ ಬೆದರಿಕೆ ಪತ್ರ ಬರೆಯಲಾಗಿದ್ದು, ಈ ಸಂಬಂಧ ಮುಂಬೈನಲ್ಲಿ ದೂರು ದಾಖಲಾಗಿದೆ.

ಸಲೀಂ ಖಾನ್ ಹಾಗೂ ಸಲ್ಮಾನ್ ಖಾನ್ ಅನ್ನು ಕೊಲ್ಲುತ್ತೇವೆಂದು ಬರೆಯಲಾದ ಪತ್ರ ಭಾನುವಾರ ದೊರಕಿದೆ. 'ಗ್ಯಾಂಗ್' ಒಂದು ಈ ಕೃತ್ಯ ಎಸಗುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಲ್ಮಾನ್ ಖಾನ್‌ ತಂದೆ ಸಲೀಂ ಖಾನ್‌ಗೆ ಈ ಪತ್ರ ಬ್ಯಾಂಡ್ರಾ ಸ್ಟಾಂಡ್‌ ಬಳಿಕ ಪಾರ್ಕ್‌ನಲ್ಲಿ ದೊರಕಿದೆ. ಸಲೀಂ ಖಾನ್, ತಾವು ಪ್ರತಿದಿನವೂ ಬ್ಯಾಂಡ್ರಾ ಸ್ಟ್ಯಾಂಡ್ ಬಳಿ ಜಾಗಿಂಗ್ ಮಾಡಿ ಒಂದು ಕಲ್ಲು ಬೇಂಚಿನ ಬಳಿ ಕೂರುತ್ತಾರೆ. ಭಾನುವಾರ ಜಾಗಿಂಗ್ ಮುಗಿಸಿ ಅದೇ ಕಲ್ಲು ಬೇಂಚಿನ ಮೇಲೆ ಕೂತಾದ ಪಕ್ಕದಲ್ಲಿಯೇ ಇದ್ದ ಈ ಪತ್ರ ಸಿಕ್ಕಿದೆ. ಪತ್ರದ ಮೇಲೆ ಸಲ್ಮಾನ್ ಖಾನ್ ಎಂದು ಬರೆದಿದ್ದ ಕಾರಣ ಸಲೀಂ ಖಾನ್ ಆ ಪತ್ರವನ್ನು ತೆಗೆದು ಓದಿದ್ದಾರೆ.

Life Threat Letter To Salman Khan And Saleem Khan, FIR Registered

ಪತ್ರದಲ್ಲಿ ಹೆಸರು ನಮೂದಿಸದ 'ಗ್ಯಾಂಗ್' ಒಂದು ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಅನ್ನು ಕೊಲ್ಲವುದಾಗಿ ಹೇಳಿದೆ. ಪೊಲೀಸರು ಐಪಿಸಿ ಸೆಕ್ಷನ್ 506 ಅಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

ಸಲೀಮ್‌ ಖಾನ್‌ರರ ದಿನಚರಿಯನ್ನು ಗಮನಿಸಿಯೇ ಈ ಗುಂಪು ಬೆದರಿಕೆ ಹಾಕಿರುವ ಕಾರಣ ಈ ಬೆದರಿಕೆ ಪತ್ರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಸಲ್ಮಾನ್ ಖಾನ್‌ಗೆ ಬೆದರಿಕೆ ಕರೆಗಳು, ಪತ್ರಗಳು ಬಂದಿವೆ. 2018 ರಲ್ಲಿಯೂ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಲಾಗಿತ್ತು. 1998 ರಲ್ಲಿ ಲಾರೆನ್ಸ್ ಬಿಷ್ಣೋಯಿ ಎಂಬಾತನೂ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ. ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಹಾಕಲಾಗಿತ್ತು. ಸಲ್ಮಾನ್ ಖಾನ್ ಕೃಷ್ಣ ಮೃಗವನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಸಲ್ಮಾನ್ ಖಾನ್ ಅನ್ನು ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯಿ ಎಂಬಾತ ಬೆದರಿಕೆ ಹಾಕಿದ್ದ.

ಕೆಲವು ದಿನಗಳ ಹಿಂದೆಯಷ್ಟೆ ಪಂಜಾಬ್ ಗಾಯಕ ಸಿಧು ಮೂಸೆಯ ಭೀಕರ ಹತ್ಯೆ ನಡೆದಿದೆ. ಗ್ಯಾಂಗ್ ಒಂದು ಸಿಧು ಮೂಸೆಯನ್ನು ಅಡ್ಡಗಟ್ಟಿ ಮಷಿನ್ ಗನ್ ಬಳಸಿ ಗುಂಡಿನ ಮಳೆ ಗರೆದು ಸಿಧು ಅವರನ್ನು ಹತ್ಯೆ ಮಾಡಿತ್ತು. ಈ ಘಟನೆ ನಂತರ ಸೆಲೆಬ್ರಿಟಿಗಳ ಭಧ್ರತೆ ಹೆಚ್ಚಿಸಲಾಗಿದೆ.

ಇದೀಗ ಸಲ್ಮಾನ್ ಖಾನ್‌ಗೂ ಜೀವ ಬೆದರಿಕೆ ಬಂದಿರುವುದು ಇನ್ನಷ್ಟು ಆತಂಕ ತಂದಿದ್ದು, ಪೊಲೀಸರು ಸಲ್ಮಾನ್ ಖಾನ್ ಹಾಗೂ ಸಲೀಂ ಖಾನ್‌ರಿಗೆ ಭದ್ರತೆ ಹೆಚ್ಚು ಮಾಡಿದೆ.

More from Filmibeat

English summary
A letter received threatening Saleem Khan and Salman Khan in Mumbai Bandra Stand. Police registered FIR. Salman Khan father found the letter near Bandra Stand where he every day go for jogging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X