ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ: ಗ್ಯಾಂಗ್‌ಸ್ಟರ್ ಲಾರೆನ್ಸ್ ವಿಚಾರಣೆ

ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸಲ್ಮಾನ್ ಖಾನ್‌ ತಂದೆ ಸಲೀಂ ಖಾನ್‌ಗೆ ಈ ಪತ್ರ ಮುಂಬೈನ ಬ್ಯಾಂಡ್ರಾ ಸ್ಟಾಂಡ್‌ ಬಳಿಯ ಪಾರ್ಕ್‌ನಲ್ಲಿ ದೊರಕಿದೆ. ಸಲೀಂ ಖಾನ್, ಪ್ರತಿದಿನವೂ ಬ್ಯಾಂಡ್ರಾ ಸ್ಟ್ಯಾಂಡ್ ಬಳಿ ಜಾಗಿಂಗ್ ಮಾಡಿ ಒಂದು ಕಲ್ಲು ಬೇಂಚಿನ ಮೇಲೆ ಕೂರುತ್ತಾರೆ. ಭಾನುವಾರ ಜಾಗಿಂಗ್ ಮುಗಿಸಿ ಅದೇ ಕಲ್ಲು ಬೇಂಚಿನ ಮೇಲೆ ಕೂತಾದ ಪಕ್ಕದಲ್ಲಿಯೇ ಇದ್ದ ಈ ಪತ್ರ ಸಿಕ್ಕಿದೆ. ಪತ್ರದ ಮೇಲೆ ಸಲ್ಮಾನ್ ಖಾನ್ ಎಂದು ಬರೆದಿದ್ದ ಕಾರಣ ಸಲೀಂ ಖಾನ್ ಆ ಪತ್ರವನ್ನು ತೆಗೆದು ಓದಿದ್ದಾರೆ.

ಪತ್ರದಲ್ಲಿ, ''ಸಲೀಂ ಖಾನ್, ಸಲ್ಮಾನ್ ಖಾನ್‌ಗೆ ಆದಷ್ಟು ಬೇಗ ಮೂಸೆವಾಲಾಗೆ ಆದ ಗತಿಯೇ ಆಗುತ್ತದೆ'' ಎಂದು ಬರೆದಿತ್ತು. ಪತ್ರದಲ್ಲಿ 'ಎಲ್‌.ಬಿ' ಹಾಗೂ 'ಜಿ.ಬಿ' ಎಂಬ ಅಕ್ಷರಗಳನ್ನು ಸಹ ಬರೆಯಲಾಗಿತ್ತು. ಎಲ್‌.ಬಿ ಎಂದರೆ ಲಾರೆನ್ಸ್ ಬಿಷ್ಣೋಯಿ ಹಾಗೂ ಜಿಬಿ ಎಂದರೆ ಗೋಲ್ಡಿ ಬ್ರಾರ್ ಎಂದು ಹೇಳಲಾಗುತ್ತಿದೆ. ಇಬ್ಬರೂ ಗ್ಯಾಂಗ್‌ಸ್ಟರ್‌ಗಳಾಗಿದ್ದಾರೆ.

ಸಲ್ಮಾನ್ ಖಾನ್‌ಗೆ ಬಂದಿರುವ ಈ ಜೀವ ಬೆದರಿಕೆ ಪತ್ರವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಪತ್ರದ ಮೇಲೆ ಎಲ್‌.ಬಿ ಎಂದಿದ್ದ ಕಾರಣ ಈಗಾಗಲೇ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಪತ್ರ ಮೊದಲು ಓದಿದ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಲಾಗಿದೆ.

ಸಿಧು ಹತ್ಯೆ ಮಾಡಿಸಿದ್ದ ಗೋಲ್ಡಿ ಬ್ರಾರ್!

ಸಿಧು ಹತ್ಯೆ ಮಾಡಿಸಿದ್ದ ಗೋಲ್ಡಿ ಬ್ರಾರ್!

ಗೋಲ್ಡಿ ಬ್ರಾರ್ ಕೆನಡಾದಲ್ಲಿ ತಲೆಮರೆಸಿಕೊಂಡಿದ್ದು, ಕೆಲವು ದಿನಗಳ ಹಿಂದೆ ಅಗಂತುಕರ ಗುಂಡಿಗೆ ಬಲಿಯಾದ ಪಂಜಾಬಿ ಗಾಯಕ ಸಿಧು ಮೂಸೆಯ ಹತ್ಯೆ ಮಾಡಿಸಿದಾತನಾಗಿದ್ದಾನೆ. ತಾನೇ ಈ ಹತ್ಯೆ ಮಾಡಿಸಿದ್ದಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾನೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಸಿಧು ಮೂಸೆ ಹತ್ಯೆ ಮಾಡಲಾಗಿತ್ತು. ಸಿಧು ಹತ್ಯೆ ನಡೆದ ದಿನದಿಂದಲೂ ಸಲ್ಮಾನ್ ಖಾನ್‌ ಸೇರಿದಂತೆ ಇನ್ನೂ ಕೆಲವು ನಟರಿಗೆ ಭದ್ರತೆ ಹೆಚ್ಚಿಸಲಾಗಿದೆ.

ಹನ್ನೆರಡು ವರ್ಷದಿಂದ ಕೊಲ್ಲಲು ಯತ್ನಿಸುತ್ತಿರುವ ಲಾರೆನ್ಸ್

ಹನ್ನೆರಡು ವರ್ಷದಿಂದ ಕೊಲ್ಲಲು ಯತ್ನಿಸುತ್ತಿರುವ ಲಾರೆನ್ಸ್

ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಕಳೆದ 12 ವರ್ಷದಿಂದಲೂ ಸಲ್ಮಾನ್ ಖಾನ್ ಮೇಲೆ ಕಣ್ಣಿಟ್ಟಿದ್ದಾನೆ. ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಆರೋಪಿ ಆದಾಗಲೇ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್‌ಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ್ದ. ಆಗಿನಿಂದಲೂ ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿಯ ಹಿಟ್‌ ಲಿಸ್ಟ್‌ನಲ್ಲಿದ್ದಾರೆ.

ಕೆನಡಾದಲ್ಲಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್

ಕೆನಡಾದಲ್ಲಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್

ಇನ್ನು ಗೋಲ್ಡಿ ಬ್ರಾರ್, ಕೆನಡಾದಲ್ಲಿ ವಾಸವಿದ್ದು, ತನ್ನ ವೈಯಕ್ತಿಕ ದ್ವೇಷದ ಕಾರಣ ಕೆಲವು ದಿನಗಳ ಹಿಂದೆಯಷ್ಟೆ ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆಯನ್ನು ಹತ್ಯೆ ಮಾಡಿಸಿದ್ದಾನೆ. ಈಗ ಈತನ ಕಣ್ಣು ಸಲ್ಮಾನ್ ಖಾನ್ ಮೇಲೆ ಬಿದ್ದಿರಬಹುದು ಎನ್ನಲಾಗುತ್ತಿದೆ. ಸಿಧು ಮೂಸೆ ಹತ್ಯೆ ನಡೆದ ದಿನವೇ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸಲಾಗಿತ್ತು. ಹಾಗಿದ್ದರೂ ಬೆದರಿಕೆ ಪತ್ರ ದೊರೆತಿರುವುದು ಪೊಲೀಸರ ಆತಂಕ ಹೆಚ್ಚಿಸಿದೆ.

ಗ್ಯಾಲೆಕ್ಸಿಯಲ್ಲಿ ಆರಾಮವಾಗಿದ್ದಾರೆ ಸಲ್ಮಾನ್

ಗ್ಯಾಲೆಕ್ಸಿಯಲ್ಲಿ ಆರಾಮವಾಗಿದ್ದಾರೆ ಸಲ್ಮಾನ್

ಬೆದರಿಕೆ ಪತ್ರ ಬಂದರೂ ಸಹ ಸಲ್ಮಾನ್ ಖಾನ್‌ ಹೆಚ್ಚಿನ ಆತಂಕಕ್ಕೆ ಒಳಗಾದಂತೆ ಕಾಣುತ್ತಿಲ್ಲ. ಐಫಾ ಪ್ರಶಸ್ತಿ ಸಮಾರಂಭಕ್ಕಾಗಿ ಕಳೆದ ವಾರ ದುಬೈಗೆ ಭೇಟಿ ನೀಡಿದ್ದ ಸಲ್ಮಾನ್ ಖಾನ್, ಮುಂಬೈಗೆ ವಾಪಸ್ಸಾಗಿದ್ದು, ಆರಾಮವಾಗಿ ತಮ್ಮ ದಿನಚರಿಗಳಲ್ಲಿ ತೊಡಗಿಕೊಂಡಿದ್ದಾರೆ. ಗಂಭೀರ ಬೆದರಿಕೆಯೇ ಬಂದಿರುವ ಕಾರಣ ಕುಟುಂಬದೊಂದಿಗೆ ವಿದೇಶಕ್ಕೆ ಸಲ್ಮಾನ್ ತೆರಳಲಿದ್ದಾರೆ ಎನ್ನಲಾಗಿತ್ತು. ಆದರೆ ಅದರ ಬದಲಿಗೆ ತಮ್ಮ ಮುಂಬೈ ನಿವಾಸ ಗ್ಯಾಲಕ್ಸಿಯಲ್ಲಿ ಆರಾಮವಾಗಿ ಓಡಾಡುತ್ತಿದ್ದಾರೆ ಸಲ್ಮಾನ್ ಖಾನ್.

More from Filmibeat

English summary
Life threat letter to Salman Khan, Mumbai police interrogated gangster Lawrence Bishnoi who earlier threatened to kill Salman Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X