ಈ ಲೈಫ್ ಬಾಯ್‌ ಹ್ಯಾಂಡ್‌ವಾಶ್ ಜಾಹೀರಾತು ನೆನೆಪಿದೆಯೇ? ಈ ಬಾಲಕಿ ಈಗ ಹೀಗಾಗಿದ್ದಾಳೆ ನೋಡಿ!

By ಫಿಲ್ಮಿಬೀಟ್ ಡೆಸ್ಕ್

ದಶಕಗಳ ಹಿಂದೆ ಬಂದ ಜನಪ್ರಿಯ ಸಿನಿಮಾಗಳು, ಜಾಹೀರಾತುಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಇಂದಿಗೂ ನಮಗೆ ನೆನಪಾಗುತ್ತಲೇ ಇರುತ್ತೆ. ಇದರಲ್ಲಿ ನಟಿಸಿದ ಬಾಲ ಕಲಾವಿದರು ಈಗ ನಾಯಕ, ನಾಯಕಿಯರಾಗಿ ಜನಪ್ರಿಯರಾಗಿದ್ದಾರೆ. ಅದೇ ಇನ್ನೊಂದು ಕಡೆ ಸಂಪೂರ್ಣವಾಗಿ ಗುರುತೇ ಸಿಗದ ಹಾಗಾಗಿದ್ದಾರೆ. ಅಂತಹದ್ದೇ ಒಬ್ಬ ನಟಿಯೀಗ ಗುರುತೇ ಸಿಗದ ಹಾಗೆ ಕಾಣಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಜಮಾನದಲ್ಲಿ ಅದೆಂತಹದ್ದೇ ವಿಷಯಗಳಿದ್ದರೂ, ಹುಡುಕಿ ತೆಗೆದು ವೈರಲ್ ಮಾಡುತ್ತಾರೆ. ಹಾಗೇ ವೈರಲ್ ಇಲ್ಲೊಬ್ಬ ನಟಿ ಕೂಡ ವೈರಲ್ ಆಗುತ್ತಿದ್ದಾರೆ. ಆ ನಟಿಯನ್ನು ಪ್ರತಿ ದಿನ ಟಿವಿ ವೀಕ್ಷಿಸುವಾಗ ನೋಡಿರುವ ಸಾಧ್ಯತೆಯಿದೆ. ಸೀರಿಯಲ್ ನೋಡುವಾಗಲೋ, ಸಿನಿಮಾ ನೋಡುವಾಗಲೋ ಮಧ್ಯೆ ಪ್ರಸಾರ ಆಗುವ ಜಾಹೀರಾತಿನಲ್ಲಿ ಒಂದಿಷ್ಟು ದಿನ ಕಂಡಿದ್ದರು.

Lifebuoy commercial ad girl Avneet Kaur is now looking like wow

ಅಂದ್ಹಾಗೆ ನಾವು ಈಗ ಹೇಳುತ್ತಿರೋದು ಲೈಫ್‌ ಬಾಯ್ ಹ್ಯಾಂಡ್‌ವಾಶ್‌ನ ಜಾಹೀರಾತು. ಈ ಜಾಹೀರಾತಿನಲ್ಲಿ ಬಾಲಕಿಯೊಬ್ಬಳು ನಟಿಸಿದ್ದಳು. ಈ ಜಾಹೀರಾತಿನಲ್ಲಿ "ಬಂಟಿ ನಿಮ್ಮ ಸೋಪು ಸ್ಲೋನಾ" ಅಂತ ಡೈಲಾಗ್ ಹೊಡೆದಿದ್ದಳು. ಆ ನಟಿಯೀಗ ಈಗ ಹೇಗಿದ್ದಾಳೆ ಗೊತ್ತಾ? ನೀವು ಎಲ್ಲಾದರೂ ನೋಡಿದ್ದೀರಾ? ತಿಳಿಯುವುದಕ್ಕೆ ಮುಂದೆ ಓದಿ..

ಲೈಫ್‌ಬಾಯ್ ಹ್ಯಾಂಡ್‌ವಾಶ್‌ನ ಈ ಹುಡುಗಿ ಈಗ ದಂತದ ಬೊಂಬೆಯಂತಾಗಿದ್ದಾಳೆ. ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಹಾಟ್ ಲುಕ್ ಕೊಟ್ಟ ಈ ನಟಿ ತನ್ನ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ನಟಿಯ ಮುಖ ನೆನಪಿರಬಹುದು ಆದರೆ, ಹೆಸರೇನು ಗೊತ್ತಾ? ಈ ನಟಿಯರ ಹೆಸರು ಅವನೀತ್ ಕೌರ್. ಈಗ ಸಖತ್ ಸೂಪರ್ ಹಾಟ್ ನಟಿಯಾಗಿದ್ದಾಳೆ.

ಲೈಫ್ ಬಾಯ್‌ ಹ್ಯಾಂಡ್ ವಾಶ್‌ ಜಾಹೀರಾತಿನಲ್ಲಿ ಪುಟ್ಟ ಹುಡುಗಿ ಕಂಡಿದ್ದ ಅವಿನೀತ್ ಕೌರ್‌ಗೆ ಈಗ 22 ವರ್ಷ. ಬಾಲ ನಟಿಯಾಗಿ ಹಲವು ಜಾಹೀರಾತುಗಳಲ್ಲಿ ನಟಿಸಿ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಳು. ಈಗ ಯುವತಿಯಾಗಿರೋ ಈ ನಟಿ ಟಿವಿ ಶೋಗಳಲ್ಲಿ, ಧಾರಾವಾಹಿಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾಳೆ. ಅಷ್ಟೇ ಯಾಕೆ ಸಿನಿಮಾಗಳಲ್ಲಿಯೂ ನಟಿಸಿದ್ದಾಳೆ.

Lifebuoy commercial ad girl Avneet Kaur is now looking like wow

ಅವನೀತ್ ಕೌರ್ ಬಾಲಿವುಡ್‌ನ 'ಮರ್ದಾನಿ' ಸಿನಿಮಾದಲ್ಲಿ ನಟಿಸಿದ್ದಾಳೆ. ಈ ಸಿನಿಮಾದಲ್ಲಿ ಮೀರಾ ಅನ್ನುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. 'ಟಿಕು ವೆಡ್ಸ್ ಶೇರು', 'ಖರೀಬ್ ಖರೀಬ್ ಸಿಂಗಲೇ', 'ಮರ್ದಾನಿ 2' ಅಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೆಬ್‌ ಸೀರಿಯಸ್ ಹಾಗೂ ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣಿಸಿಕೊಂಡಿದ್ದಾಳೆ.

ಸಿನಿಮಾ, ಧಾರಾವಾಹಿ ಅದರಲ್ಲೂ ಟಿವಿ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾಳೆ. ಹಿಂದಿ ಕಿರುತೆರೆ ವೀಕ್ಷಕರಿಗೆ ಈ ಬ್ಯೂಟಿ ಬಗ್ಗೆ ಪರಿಚಯವಿದೆ. ಅವನೀತ್ ಕೌರ್ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ನಟಿ ಗ್ಲಾಮರಸ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಶೇರ್ ಮಾಡಿದ ಫೋಟೊಗಳಿಗೆ ಲಕ್ಷ ಲೆಕ್ಕದಲ್ಲಿ ಲೈಕ್ಸ್ ಹಾಗೂ ಕಾಮೆಂಟ್‌ಗಳು ಬರುತ್ತಿವೆ.

More from Filmibeat

English summary
Avneet Kaur of Lifebuoy commercial ad now looking like super model:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X