twitter
    For Quick Alerts
    ALLOW NOTIFICATIONS  
    For Daily Alerts

    'ಹುಚ್ಚಾ ವೆಂಕಟ್' ಎದುರು ವಿಚಿತ್ರ ದಾಖಲೆ ಬರೆದ 'ಲೈಗರ್' ? ಐಎಂಡಿಬಿ ರೇಟಿಂಗ್ 'ಸಾಲಾ ಫ್ಲಾಪ್ ಬ್ರೀಡ್'!

    |

    'ಲೈಗರ್' ಸಿನಿಮಾ ಕಥೆ ನೋಡಿದರೆ ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು ಅನ್ನುವಂತಾಗಿದೆ. ಶುಕ್ರವಾರ ತೆರೆಗಪ್ಪಳಿಸಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾ ಮುಗ್ಗರಿಸಿದೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ನಟನೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಂಪೂರ್ಣವಾಗಿ ಸೋತಿದೆ. ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ನಿರಾಸೆ ಮೂಡಿಸುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ಇದೀಗ ಐಎಂಡಿಬಿ ರೇಟಿಂಗ್‌ನಲ್ಲೂ 'ಲೈಗರ್' ವಿಚಿತ್ರ ದಾಖಲೆ ಬರೆದಿದೆ.

    ಗಟ್ಟಿ ಕಥೆ, ಚಿತ್ರಕಥೆ ಇಲ್ಲದ ಹೊರತು ಎಷ್ಟೇ ಸರ್ಕಸ್ ಮಾಡಿದರೂ ಸಿನಿಮಾ ಗೆಲ್ಲಲ್ಲ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ 'ಲೈಗರ್' ಸಿನಿಮಾ ರಿಲೀಸ್‌ಗೂ ಮೊದಲು ದೇಶ್ಯಾದ್ಯಂತ ಸದ್ದು ಮಾಡಿತ್ತು. ದೇಶದ ಪ್ರಮುಖ ನಗರಗಳಲ್ಲಿ ವಿಜಯ್ ದೇವರಕೊಂಡ ಅಂಡ್ ಟೀಮ್ ಭರ್ಜರಿ ಪ್ರಚಾರ ನಡೆಸಿತ್ತು. ರಮ್ಯಾ ಕೃಷ್ಣ, ಮೈಕ್‌ ಟೈಸನ್ ಕೂಡ ಚಿತ್ರದಲ್ಲಿ ನಟಿಸಿದ್ದು, ನಿರೀಕ್ಷೆ ಹೆಚ್ಚುವಂತೆ ಮಾಡಿತ್ತು. ಬಾಲಿವುಡ್‌ನ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿತ್ತು. ಇಷ್ಟೆಲ್ಲ ಇದ್ದರೂ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಲೇಯಿಲ್ಲ. ದೇವರಕೊಂಡ ಪರ್ಫಾರ್ಮೆನ್ಸ್ ಬಿಟ್ಟು ಚಿತ್ರದಲ್ಲಿ ಏನೇನು ಇಲ್ಲ ಎಂದು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

    ಎರಡನೇ ದಿನಕ್ಕೆ ಮಕಾಡೆ ಮಲಗಿದ 'ಲೈಗರ್' ಶುಕ್ರವಾರ ಗಳಿಸಿದ್ದೆಷ್ಟು?ಎರಡನೇ ದಿನಕ್ಕೆ ಮಕಾಡೆ ಮಲಗಿದ 'ಲೈಗರ್' ಶುಕ್ರವಾರ ಗಳಿಸಿದ್ದೆಷ್ಟು?

    ಐಎಂಡಿಬಿ ರೇಟಿಂಗ್‌ನಲ್ಲೂ 'ಲೈಗರ್' ಚಿತ್ರಕ್ಕೆ ಹಿನ್ನೆಡೆಯಾಗಿದೆ. ಚಿತ್ರಕ್ಕೆ ದಿ ಇಂಟರ್‌ನೆಟ್ ಮೂವಿ ಡೇಟಾಬೇಸ್‌(IMDB) ವೆಬ್‌ಸೈಟ್‌ನಲ್ಲಿ 1.7/10 ರೇಟಿಂಗ್ ಸಿಕ್ಕಿದ್ದು, ಇದು 'ಹುಚ್ಚಾ ವೆಂಕಟ್‌' ಸಿನಿಮಾಗಿಂತಲೂ ಕಮ್ಮಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ವರ್ಷ ರಿಲೀಸ್ ಆದ 'ಲಾಲ್‌ಸಿಂಗ್ ಚಡ್ಡ', 'ರಕ್ಷಾ ಬಂಧನ್' ಹಾಗೂ 'ದೊಬಾರಾ'ಗಿಂತಲೂ 'ಲೈಗರ್' ಕಳಪೆ ಸಿನಿಮಾ ಎನ್ನುವ ಹಣೆಪಟ್ಟಿ ಸಿಕ್ಕಿದೆ. ಇದೇ ಕಾರಣಕ್ಕೆ 'ಲೈಗರ್': 'ಸಾಲಾ ಫ್ಲಾಪ್ ಬ್ರೀಡ್' ಎಂದು ಟ್ಯಾಗ್‌ಲೈನ್ ಬದಲಿಸಿ ಟ್ರೋಲ್ ಮಾಡುತ್ತಿದ್ದಾರೆ.

     'ಹುಚ್ಚ ವೆಂಕಟ್‌'ಗಿಂತಲೂ ಕಳಪೆ 'ಲೈಗರ್'?

    'ಹುಚ್ಚ ವೆಂಕಟ್‌'ಗಿಂತಲೂ ಕಳಪೆ 'ಲೈಗರ್'?

    ಐಎಂಡಿಬಿ ವೆಬ್‌ಸೈಟ್‌ನಲ್ಲಿ ಪ್ರೇಕ್ಷಕರೇ ಸಿನಿಮಾ ನೋಡಿ ರೇಂಟಿಂಗ್ ನೀಡುತ್ತಾರೆ. ಐಎಂಡಿಬಿಗೆ ಸಿನಿಮಾ ವಲಯದಲ್ಲಿ ಪ್ರಮುಖ ಸ್ಥಾನವಿದೆ. ಸದ್ಯ 22 ಸಾವಿರಕ್ಕೂ ಹೆಚ್ಚು ಜನ 'ಲೈಗರ್' ಸಿನಿಮಾ ನೋಡಿ ರೇಟಿಂಗ್ ನೀಡಿದ್ದು, ಈ ಪೈಕಿ ಒಟ್ಟು 1.6 ರೇಟಿಂಗ್ ಸಿಕ್ಕಿದಂತಾಗಿದೆ. ಹುಚ್ಚ ವೆಂಕಟ್ ನಿರ್ದೇಶಿಸಿ ನಟಿಸಿದ್ದ ಚಿತ್ರಗಳಿಗೆ 4.5 ರೇಟಿಂಗ್ ಸಿಕ್ಕಿತ್ತು. ಹಾಗಾಗಿ ಹುಚ್ಚ ವೆಂಕಟ್ ಸಿನಿಮಾಗಳಿಗಿಂತಲೂ 'ಲೈಗರ್' ಕೆಟ್ಟದಾಗಿದೆ ಎಂದು ಕೆಲವರು ಅಣಕವಾಡುತ್ತಿದ್ದಾರೆ.

    'ಲೈಗರ್' ಸಿನಿಮಾ ಸೋಲಿಗೆ ಕಾರಣಗಳು: ಪುರಿ- ವಿಜಯ್ ಎಡವಿದ್ದೆಲ್ಲಿ?'ಲೈಗರ್' ಸಿನಿಮಾ ಸೋಲಿಗೆ ಕಾರಣಗಳು: ಪುರಿ- ವಿಜಯ್ ಎಡವಿದ್ದೆಲ್ಲಿ?

     ಐಎಂಡಿಬಿಯಲ್ಲಿ 'ಲೈಗರ್' ಕಳಪೆ ದಾಖಲೆ

    ಐಎಂಡಿಬಿಯಲ್ಲಿ 'ಲೈಗರ್' ಕಳಪೆ ದಾಖಲೆ

    ಈ ವರ್ಷ ಬಾಲಿವುಡ್‌ನಲ್ಲಿ ಬಿಡುಗಡೆಯಾದ 'ಲಾಲ್‌ ಸಿಂಗ್ ಚಡ್ಡ', 'ರಕ್ಷಾಬಂಧನ್', 'ದೊಬಾರಾ' ಚಿತ್ರಗಳಿಗೂ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಆದರೆ ಐಎಂಡಿಬಿ ರೇಟಿಂಗ್‌ನಲ್ಲಿ ಆಮಿರ್ ಚಿತ್ರಕ್ಕೆ 5, ಅಕ್ಷಯ್ ಕುಮಾರ್ ನಟನೆಯ ಚಿತ್ರಕ್ಕೆ 4.6, ತಾಪ್ಸಿ ಲೀಡ್‌ ರೋಲ್‌ನಲ್ಲಿ ನಟಿಸುವ ಚಿತ್ರಕ್ಕೆ 2.8 ದೊರಕಿದೆ. ಆದರೆ 'ಲೈಗರ್' ಚಿತ್ರಕ್ಕೆ ಮಾತ್ರ ಕೇವಲ 1.6 ರೇಟಿಂಗ್ ಸಿಕ್ಕಿದ್ದು, ತುಂಬಾ ಕಳಪೆ ಸಿನಿಮಾ ಎನಿಸಿಕೊಂಡಿದೆ.

     3ನೇ ದಿನದ ಕಲೆಕ್ಷನ್ 7.5 ಕೋಟಿ?

    3ನೇ ದಿನದ ಕಲೆಕ್ಷನ್ 7.5 ಕೋಟಿ?

    ಬಾಕ್ಸಾಫೀಸ್‌ನಲ್ಲಿ 'ಲೈಗರ್' ಸಿನಿಮಾ ಕಲೆಕ್ಷನ್ ದಿಢೀರ್ ಕುಸಿತ ಕಂಡಿದೆ. ಮೊದಲ ದಿನ 33 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ ಎರಡನೇ ದಿನ 27 ಕೋಟಿ ರೂ. ಅಷ್ಟೇ ಕಲೆಕ್ಷನ್ ಮಾಡಿತ್ತು. ಆದರೆ ಮೂರನೇ ಕೇವಲ 7.5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಮಾಹಿತಿ ಸಿಗುತ್ತಿದೆ. ಚಿತ್ರಕ್ಕೆ ನೆಗೆಟಿವ್ ಟಾಕ್ ಜಾಸ್ತಿಯಾದ ಬೆನ್ನಲ್ಲೇ ಪ್ರೇಕ್ಷಕರು ಸಿನಿಮಾ ನೋಡಲು ಹಿಂದೇಟು ಹಾಕುತ್ತಿದ್ದಾರೆ. ಬಾಲಿವುಡ್‌ನಲ್ಲಿ ಕೊಂಚಮಟ್ಟಿಗೆ 'ಲೈಗರ್' ಸದ್ದು ಮಾಡುತ್ತಿದ್ದಾನೆ.

     'ಲೈಗರ್' ಗೆಲುವು ಕಷ್ಟ!

    'ಲೈಗರ್' ಗೆಲುವು ಕಷ್ಟ!

    ಬಹುಕೋಟಿ ವೆಚ್ಚದ ಲೈಗರ್ ಸಿನಿಮಾ ಗೆಲ್ಲುವುದು ಭಾರೀ ಕಷ್ಟ ಎನ್ನುವಂತಾಗಿದೆ. ಇಂದು ಭಾನುವಾರ ಮತ್ತು ನಾಳೆ ಸೋಮವಾರ ಚಿತ್ರಕ್ಕೆ ಬಹಳ ನಿರ್ಣಾಯಕವಾಗಿದೆ. ಭಾನುವಾರ ರಜಾ ಕಾರಣ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಬರಬೇಕು. ಮೊದಲ ವೀಕೆಂಡ್‌ ನಂತರ ಸೋಮವಾರ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿರುತ್ತೆ ಅನ್ನುವುದು ಸಿನಿಮಾ ಸೋಲು ಗೆಲುವು ನಿರ್ಧರಿಸಲಿದೆ. ಆದರೆ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ನೆಗೆಟಿವ್ ಟಾಕ್ ಇರುವುದರಿಂದ ಸಿನಿಮಾ ಚೇತರಿಸಿಕೊಳ್ಳುವುದು ಕಷ್ಟ ಅಂತಲೇ ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ.

    English summary
    Liger Emerges As IMDb's Lowest Rated Movie Beats Kannada Movie huccha venkat
    Sunday, August 28, 2022, 13:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X