ಲೈಗರ್ ಸಿನಿಮಾ ರಿಲೀಸ್‌ ಬಗ್ಗೆ ಚಿತ್ರತಂಡದಿಂದ ಬಂತು ಗುಡ್ ನ್ಯೂಸ್!

ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ. ಲೈಗರ್ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ವಿಜಯ್ ದೇವರಕೊಂಡ ಸದ್ಯ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿದ್ದು, ಅದರಲ್ಲಿ ಒಂದು ಕಿಂಗ್ ಆಫ್ ದಿ ರಿಂಗ್, ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಲೈಗರ್ ಸಿನಿಮಾದಲ್ಲಿ ಒಂದು ಗೆಸ್ಟ್ ರೋಲ್ ಪ್ಲೇ ಮಾಡುತ್ತಿರೋದು. ಪ್ರಥಮ ಬಾರಿಗೆ ಇಂಡಿಯನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರೋ ಟೈಸನ್ ಪಾತ್ರ ಚಿಕ್ಕದ್ದೇ ಆದರು ಅದರ ತೂಕ ತುಂಬಾ ಹೆಚ್ಚಿದೆ. ಇಷ್ಟೆಲ್ಲ ಕುತೂಹಲ ಇಟ್ಟುಕೊಂಡು ಸಿದ್ಧವಾಗುತ್ತಿರುವ ಲೈಗರ್ ಸಿನಿಮಾದ ಬಗ್ಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ

ವಿಜಯ್ ದೇವರಕೊಂಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಲೈಗರು ಸಿನಿಮಾ ಬಹು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ. ಕೋರೊನಾ ಹಾವಾಳಿಯಿಂದ ಶೂಟಿಂಗ್‌ಗೆ ಆಗಾಗ ಬ್ರೇಕ್ ನೀಡಲಾಗುತ್ತಿತ್ತು. ಅಷ್ಟೇ ಅಲ್ಲದೇ ವಿದೇಶದಲ್ಲಿ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದ ಚಿತ್ರತಂಡಕ್ಕೆ ಸಾಕಷ್ಟು ಅಡೆತಡೆಗಳು ಉಂಟಾಗಿದ್ದವು. ಇದೀಗ ಅವೆಲ್ಲವನ್ನೂ ದಾಟಿಕೊಂಡು ಬಂದು ಸಿನಿಮಾ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಲೈಗರ್ ಚಿತ್ರದ ಸಹ-ನಿರ್ಮಾಪಕಿ ಚಾರ್ಮಿ ಕೌರ್, ಸೆಟ್‌ನಿಂದ ಫೋಟೋ ಒಂದನ್ನು ತೆಗೆದು ಅದನ್ನು ಶೇರ್ ಮಾಡಿಒಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು "ಕೊನೆಯ ಹಂತದ ಚಿತ್ರೀಕರಣ'' ಎಂದು ಬರೆದುಕೊಂಡಿದ್ದಾರೆ.

ಲೈಗರ್ ಸಿನಿಮಾ 5 ಭಾಷೆಗಳಲ್ಲಿ ತೆರೆ ಕಾಣಲಿದ್ದು, ಸೆಪ್ಟೆಂಬರ್ ವೇಳೆಗೆ ಸಿನಿಮಾ ಬಿಡುಗಡೆಗೊಳ್ಳಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಬಾಲಿವುಡ್ ನಟಿ ಅನನ್ಯ ಪಾಂಡೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಹಿಂದಿ ಹಾಗೂ ತೆಲುಗಿನ ಜೊತೆಗೆ ಭಾರತದ ಇತರೆ ಪ್ರಮುಖ ಭಾಷೆಗಳಲ್ಲೂ ತೆರೆ ಕಾಣಲಿದೆ. ವಿಜಯ್​ ದೇವರಕೊಂಡ ಅಭಿನಯದ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ ಇದಾಗಿದೆ. ಪೂರಿ ಜಗನ್ನಾಥ್, ಚಾರ್ಮಿ ಮತ್ತು ಧರ್ಮಾ ಪ್ರೋಡಕ್ಷನ್ಸ್‌ ನಿರ್ಮಿಸುತ್ತಿರುವ ಚಿತ್ರ ಇದು. ಲೈಗರ್ ಸಿನಿಮಾಗೆ ಮೊದಲು ಫೈಟರ್ ಎಂದು ಟೈಟಲ್ ಇಡಲಾಗಿತ್ತು. ಆದರೆ ಹೃತಿಕ್ ರೋಷನ್ ಅಭಿನಯದ ಚಿತ್ರಕ್ಕೆ ಈ ಹೆಸರನ್ನು ತೆಗೆದುಕೊಂಡ ಕಾರಣ ಪೂರಿ ಜಗನ್ನಾಥ್ ಈ ಸಿನಿಮಾಗೆ ಲೈಗರ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿತ್ತು.

Liger film makers are ready to roll the last schedule for the film

ಲೈಗರ್ ಚಿತ್ರತಂಡ ಆರಂಭವಾದಾಗಿನಿಂದಲೂ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿದೆ. ಹಾಗೇ ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ಕೂಡ ಆಗಿರೋದರಿಂದ ನಿರೀಕ್ಷೆ ಇನ್ನೂ ಹೆಚ್ಚಿದೆ. ಜೊತೆಗೆ ಚಿತ್ರದಲ್ಲಿ ದೊಡ್ಡ ದೊಡ್ಡ ತಾರಾಗಣವೇ ಇದ್ದು ಮೈಕ್ ಟೈಸನ್ ಇದೇ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರೋದು ವಿಶೇಷ. ದೀಪಾವಳಿ ಸಂಭ್ರಮದಲ್ಲಿ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಟೈಸನ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಕೈನಲ್ಲಿ ಬೆಂಕಿ ಚೆಂಡು, ಕಪ್ಪು ಸೂಟ್ ಧರಿಸಿಕೊಂಡಿರುವ ಮೈಕ್ ಟೈಸನ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಬಾಕ್ಸಿಂಗ್ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮತ್ತು ಹೆಸರು ಸಂಪಾದಿಸಿರುವ ಮೈಕ್ ಟೈಸನ್ ಲೈಗರ್ ಚಿತ್ರದ ಕ್ಲೈಮ್ಯಾಕ್ಸ್ ಸೀನ್‌ನಲ್ಲಷ್ಟೆ ಕಾಣಿಸಿಕೊಳ್ಳಲಿದ್ದಾರೆ. ಒಂದೆರಡು ನಿಮಿಷ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ಮೈಕ್ ಟೈಸನ್ ದೊಡ್ಡ ಮೊತ್ತವನ್ನೆ ಜೇಬಿಗೇರಿಸಿಕೊಂಡಿದ್ದಾರೆ.

Liger film makers are ready to roll the last schedule for the film

ಲೈಗರ್ ಸಿನಿಮಾದ ಚಿತ್ರೀಕರಣ ಮುಂಬೈ ಸೇರಿದಂತೆ ವಿದೇಶಗಳಲ್ಲಿ ನಡೆದಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸುನೀಲ್​ ಶೆಟ್ಟಿ ಸಹ ನಟಿಸಿದ್ದಾರಂತೆ. ಡಾನ್​ ಪಾತ್ರದಲ್ಲಿ ಸುನೀಲ್​ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಅವರದ್ದು ಕೇವಲ 15 ನಿಮಿಷಗಳು ಬಂದು ಹೋಗುವ ಪಾತ್ರವೆಂದು ಹೇಳಲಾಗುತ್ತಿದೆ. ಬಾಕ್ಸಿಂಗ್​ ದೃಶ್ಯಗಳ ಚಿತ್ರೀಕರಣಕ್ಕಾಗಿ ಪ್ರತ್ಯೇಕ ಸೆಟ್ ನಿರ್ಮಿಸಲಾಗಿತ್ತು, ಇದರಲ್ಲಿ ಬಾಕ್ಸಿಂಗ್​ ಫೈಟ್​ ನಡೆಸಿ ಚಿತ್ರೀಕರಣ ಕೂಡ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇದೇ ವರ್ಷ ಈ ಸಿನಿಮಾ ತೆರೆಗೆ ಬರಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ದಿನಾಂಕವನ್ನು ಇನ್ನಷ್ಟೆ ಚಿತ್ರತಂಡ ನಿಗದಿ ಮಾಡಬೇಕಿದೆ.

More from Filmibeat

English summary
Vijay Deverakonda has been working hard for his upcoming sports drama Liger and now the project has almost reached the end. The makers are ready to roll the last schedule for the film and they could not be more excited.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X