twitter
    For Quick Alerts
    ALLOW NOTIFICATIONS  
    For Daily Alerts

    ಗುರುಗ್ರಾಮದಲ್ಲಿ 'ಜೋಶ್' ಆಯೋಜಿಸಿದೆ ಅತಿದೊಡ್ಡ ಮೀಟ್‌ಅಪ್

    By ಫಿಲ್ಮಿಬೀಟ್ ಡೆಸ್ಕ್
    |

    ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವ ಭಾರತದ ಅತ್ಯುತ್ತಮ ಕಿರು ವಿಡಿಯೋ ಅಪ್ಲಿಕೇಶನ್ 'ಜೋಶ್', 'ಲೈಟ್ಸ್ ಕ್ಯಾಮೆರಾ ಜೋಶ್' ಹೆಸರಿನ ಅಭಿಯಾನ ಆರಂಭಿಸಿದ್ದು, ಜೋಶ್ ಅಪ್ಲಿಕೇಶನ್‌ನ ಟಾಪ್ ವಿಡಿಯೋ ಕ್ರಿಯೇಟರ್‌ಗಳನ್ನೆಲ್ಲ ಒಂದೆಡೆ ಸೇರಿಸುತ್ತಿದೆ.

    2020 ರಲ್ಲಿ ಲಾಂಚ್ ಆದ 'ಜೋಶ್' ಕಿರು ಅಪ್ಲಿಕೇಶನ್ ಕೇವಲ ಒಂದೇ ವರ್ಷದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದು, ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕಿರು ವಿಡಿಯೋ ಅಪ್ಲಿಕೇಶನ್ ಎನಿಸಿಕೊಂಡಿದೆ.

    ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳನ್ನು ಹೊಂದಿರುವ ಜೋಶ್ ಅಪ್ಲಿಕೇಶನ್, ಉದಯೋನ್ಮುಖ ಕಂಟೆಂಟ್ ಕ್ರಿಯೇಟರ್‌ಗಳಿಗೆ ತರಬೇತಿ, ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ದೊಡ್ಡ ವೇದಿಕೆಯನ್ನು ಒದಗಿಸುತ್ತಿದೆ.

    Lights Camera Josh: Top Josh Infruencers Meeting Up In Gurugram

    ಇದೇ ವರ್ಷ ಮಾರ್ಚ್‌ 27 ಜೋಶ್ ಅಪ್ಲಿಕೇಶನ್ 'ಲೈಟ್ಸ್ ಕ್ಯಾಮೆರಾ ಜೋಶ್' ಹೆಸರಿನ ಅಭಿಯಾನವನ್ನು ಹೈದರಾಬಾದ್‌ನಲ್ಲಿ ಆರಂಭಿಸಿತ್ತು. ಎಲ್ಲ ವಿಧವಾದ ಕಂಟೆಂಟ್ ಕ್ರಿಯೇಟರ್‌ಗಳನ್ನು, ಕಿರು ವಿಡಿಯೋ ಕ್ರಿಯೇಟರ್‌ಗಳನ್ನು ಒಂದು ವೇದಿಕೆಯನ್ನು ತರುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿತ್ತು. ಜೊತೆಗೆ ಸ್ಟಾರ್ ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಉದಯೋನ್ಮುಖ ಕಂಟೆಂಟ್ ಕ್ರಿಯೇಟರ್‌ಗಳ ನಡುವಿನ ಅಂತರ ಕಡಿಮೆ ಮಾಡುವುದು ಸಹ ಇದರ ಉದ್ದೇಶವಾಗಿತ್ತು. ಹೈದರಾಬಾದ್‌ನಲ್ಲಿ ಮಾಡಿದ ಇವೆಂಟ್ ದೊಡ್ಡ ಯಶಸ್ಸನ್ನು ಪಡೆದುಕೊಂಡಿತು.

    ಹೈದರಾಬಾದ್‌ನಲ್ಲಿ ದೊರೆತ ಯಶಸ್ಸಿನಿಂದ ಸ್ಪೂರ್ತಿಗೊಂಡು ಈಗ 500ಕ್ಕೂ ಹೆಚ್ಚು ಹಿಂದಿ ಭಾಷಿಕ ಕಂಟೆಂಟ್ ಕ್ರಿಯೇಟರ್‌ಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವನ್ನು ಜೋಶ್ ಮಾಡುತ್ತಿದ್ದು, ಈ ಕಾರ್ಯಕ್ರಮವು ಅಕ್ಟೋಬರ್ 09ರಂದು ಗುರುಗ್ರಾಮ‌ನಲ್ಲಿ ಆಯೋಜಿತಗೊಂಡಿದೆ.

    ಗುರುಗ್ರಾಮ‌ನಲ್ಲಿ ನಡೆಯಲಿರುವ ಜೋಶ್‌ ಮೀಟ್‌ಅಪ್ ಬಗ್ಗೆ ಕಂಟೆಂಟ್‌ ಕ್ರಿಯೇಟರ್‌ಗಳು ಹಂಚಿಕೊಂಡಿರುವ ಅಭಿಪ್ರಾಯಗಳು ಇಲ್ಲಿವೆ.

    ಅಬ್ಲು ರಾಜೇಶ್ ಕುಮಾರ್

    https://share.myjosh.in/profile/d9128e86-26f1-4078-b98a-28e274389bcc

    ''ನಾನು ಈ ಮೀಟ್‌ಅಪ್‌ಗಾಗಿ ಉತ್ಸಾಹದಿಂದ ಕಾಯುತ್ತಿದ್ದೇನೆ. ಇದು ನಾನು ಅಟೆಂಡ್ ಮಾಡುತ್ತಿರುವ ಮೊದಲ 'ಜೋಶ್‌' ಮೀಟ್‌ಅಪ್. ಕಂಟೆಂಟ್ ಕ್ರಿಯೇಟರ್ಸ್ ತಂಡವನ್ನು ಭೇಟಿ ಮಾಡಲು ನಾನು ಉತ್ಸುಕನಾಗಿದ್ದೇನೆ''

    ನೇಹಾ ಗುಲಿಯಾ

    https://share.myjosh.in/profile/b6d8dfb2-bd3f-4cd7-ba01-a3a3cb4fb6fa

    ''ಈ ಆಫ್‌ಲೈನ್ ಮೀಟ್‌ಅಪ್‌ಗಾಗಿ ನಾನು ಕಾತರಳಾಗಿದ್ದೇನೆ. ನಾನು ಚಂಡೀಘಡದವಳಾಗಿದ್ದು, 'ಜೋಶ್‌' ಅಪ್ಲಿಕೇಶನ್ ಆಡಳಿತವು ನನಗೆ ಪ್ರಯಾಣದ ವ್ಯವಸ್ಥೆಯನ್ನು ಸಹ ಮಾಡಿದೆ. ಜೋಶ್‌ ಹೇಗೆ ತನ್ನ ಕಂಟೆಂಟ್ ಕ್ರಿಯೇಟರ್‌ಗಳ ಬಗ್ಗೆ ಕಾಳಜಿವಹಿಸುತ್ತದೆ ಎಂಬುದಕ್ಕೆ ಇದು ಉದಾಹರಣೆ. 'ಜೋಶ್' ಟೀಂ ಅನ್ನು ಭೇಟಿಯಾಗಲು ಹಾಗೂ ಇತರ ಕಂಟೆಂಟ್ ಕ್ರಿಯೇಟರ್‌ಗಳನ್ನು ಭೇಟಿಯಾಗಲು ನಾನು ಉತ್ಸುಕಳಾಗಿದ್ದೇನೆ''

    ಶನಾಯಾ ಐನನಿ

    https://share.myjosh.in/profile/1ce0ee2e-5713-4608-a806-b15a26d4335a

    ''ಚೈನಾದಲ್ಲಿ ನಾನು ಚೈಲ್ಡ್ ಮಾಡೆಲ್ ಆಗಿದ್ದೆ. ಕೊರೊನಾ ನಂತರ ಭಾರತಕ್ಕೆ ಬಂದು ಇಲ್ಲೇ ಸೆಟಲ್ ಆಗಿದ್ದೀವಿ. ಇಲ್ಲಿ ನಾನು ನನ್ನ ಕರಿಯರ್‌ ಅನ್ನು ಹೇಗೆ ಮರಳಿ ಪ್ರಾರಂಭಿಸಬೇಕು ಎಂಬುದು ಗೊತ್ತಾಗಿರಲಿಲ್ಲ. ಆಗಲೇ ನಾನು ಜೋಶ್ ಅಪ್ಲಿಕೇಶನ್‌ಗೆ ಜಾಯಿನ್ ಆದೆ. ಈ ಅಪ್ಲಿಕೇಶನ್ ಬಹಳ ಆಸಕ್ತಿಕರ ಎನಿಸಿತು. ನನ್ನ ಪ್ರತಿಭೆಯನ್ನು 'ಜೋಶ್' ಕುಟುಂಬ ಮೆಚ್ಚಿ ಬೆಂಬಲಿಸಿತು. ಈಗ ಈ ಹಿಂದಿ ಮೀಟಪ್‌ನಲ್ಲಿ ಭಾಗವಹಿಸಲು ಉತ್ಸುಕಳಾಗಿದ್ದೇನೆ''

    ದೀಪ್ತಿ ಶರ್ಮಾ

    https://share.myjosh.in/profile/e14cdf22-31bb-49e7-a9c0-498bd8905589

    'ಜೋಶ್' ತಂಡವು ಬಹಳ ಬೆಂಬಲ ನೀಡುತ್ತಿದೆ. ನನ್ನ ಕಂಟೆಂಟ್ ಅನ್ನು ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ತಲುಪುವಂತೆ ಮಾಡಿದೆ. 2.5 ಮಿಲಿಯನ್ ಜನರನ್ನು ನನ್ನ ಕಂಟೆಂಟ್ ಬಹಳ ಕಡಿಮೆ ಸಮಯದಲ್ಲಿ ರೀಚ್ ಆಗಿದೆ. 'ಜೋಶ್' ಜೊತೆಗಿನ ಪಯಣದ ಅವಧಿಯಲ್ಲಿಯೇ ನಾನು ಫ್ಲಿಪ್‌ಕಾರ್ಟ್, ಏಷಿಯನ್ ಪೇಯಿಂಟ್ಸ್, ಬಿಗ್‌ಬಾಸ್, ಆಲ್ಟ್ ಬಾಲಾಜಿ ಇನ್ನೂ ಕೆಲವು ಸಂಸ್ಥೆಗಳೊಂದಿಗೆ ಕೊಲ್ಯಾಬರೇಷನ್ ಮಾಡಿದೆ. 'ಲೈಟ್ಸ್ ಕ್ಯಾಮೆರಾ ಜೋಶ್' ಮೀಟ್‌ಅಪ್‌ಗಾಗಿ ನಾನು ಕಾಯುತ್ತಿದ್ದೇನೆ. ಬೇರೆ ಕ್ರಿಯೇಟರ್ಸ್‌ಗಳ ಜೊತೆಗೂ ನಾನು ವಿಡಿಯೋಗಳನ್ನು ಮಾಡಲಿದ್ದೇನೆ''

    ಲೋವ್‌ಲೇಶ್ ಕನೇಜಾ

    https://share.myjosh.in/profile/e26403c4-0078-4596-80c0-f2d03ea8124d

    ''ಈ ರೀತಿಯ ಮೀಟ್‌ಅಪ್‌ಗಳನ್ನು ಆಯೋಜಿಸುತ್ತಿರುವುದಕ್ಕೆ ನಾನು ಜೋಶ್‌ಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಈ ರೀತಿಯ ಮೀಟ್‌ಅಪ್‌ಗಳು ಬಹಳ ಮುಖ್ಯ. ಇಂಥಹಾ ಮೀಟ್‌ಅಪ್‌ಗಳು ಸೃಜನಶೀಲತೆಯನ್ನು ಹೆಚ್ಚು ಮಾಡುತ್ತವೆ ಮತ್ತು ಹೊಸ ಕಂಟೆಂಟ್ ಕ್ರಿಯೇಟರ್‌ಗಳಿಗೆ ಪ್ರೋತ್ಸಾಹ ನೀಡುತ್ತವೆ. ಇಂಥಹಾ ಮೀಟ್‌ಅಪ್‌ಗಳು ನಮ್ಮ ಪ್ರತಿಭೆಗೆ ವೇದಿಕೆ ಒದಗಿಸುತ್ತವೆ''

    ದೀಪಕ್ ವಾದವ್

    https://share.myjosh.in/profile/69ae59b9-2539-4374-80a2-997827e6cee8

    ''ಮೊದಲ ಆಫ್‌ಲೈನ್ ಮೀಟ್‌ಅಪ್‌ಗಾಗಿ ನಾನು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ. ಅದೆಷ್ಟು ಕಾತರನಾಗಿದ್ಧೇನೆಂದರೆ, ಮಾರ್ಟಿನ್ ಕಾಯಿಲ್ ಇಲ್ಲದ ಮನೆಯನ್ನು ಸೊಳ್ಳೆಗಳು ಹೊಕ್ಕುವಾಗ ಅವಕ್ಕಿರುತ್ತದಲ್ಲ ಉತ್ಸಾಹ, ಕಾತರ ಅಂಥಹದೇ ಉತ್ಸಾಹ ನನಗೂ ಇದೆ''

    ಪ್ರಿಯಾಂಕಾ

    https://share.myjosh.in/profile/372642ba-17d6-4c55-82dc-a6c8f4d7285a

    ''ಈ ಇವೆಂಟ್ ಬಹಳ ದೊಡ್ಡದಾಗಿರಲಿದೆ. ನಾನು ಇತರ ಕ್ರಿಯೇಟರ್‌ಗಳನ್ನು ಮುಖತಃ ಭೇಟಿಯಾಗಲಿದ್ದೇನೆ. ಕ್ರಿಯೇಟರ್‌ಗಳಿಗೆ ಇಂಥಹಾ ಮೀಟ್‌ಅಪ್‌ಗಳಿಂದ ಇನ್ನು ಹೆಚ್ಚಿನ ಗುರುತು ಸಿಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಮೀಟ್‌ಅಪ್‌ನಲ್ಲಿ ನಾವು ಸಾಕಷ್ಟು ಫನ್ ಮಾಡಲಿದ್ದೇವೆ''

    ಜಿಯಾ

    https://share.myjosh.in/profile/962f0055-74f5-4280-9841-922fd9356dca

    ''ಜೋಶ್' ಅಪ್ಲಿಕೇಶನ್ ಜೊತೆ ಕೆಲಸ ಮಾಡುವುದು ಸಾಕಷ್ಟು ಖುಷಿ ತಂದಿದೆ. 'ಲೈಟ್ಸ್‌ ಕ್ಯಾಮೆರಾ ಜೋಶ್‌'ಗಾಗಿ ನಾನು ಬಹಳ ಕಾತರಳಾಗಿದ್ದೇನೆ. ಇತರೆ ಕ್ರಿಯೇಟರ್‌ಗಳನ್ನು, ಜೋಶ್ ಟೀಮ್‌ ಅನ್ನು ಭೇಟಿಯಾಗಲು ನಾನು ಕಾಯುತ್ತಿದ್ದೇನೆ. ಇದನ್ನೆಲ್ಲ ಸಾಧ್ಯವಾಗಿಸುತ್ತಿರುವ ಜೋಶ್‌ಗೆ ಧನ್ಯವಾದ''

    ರೀನಾ ಕೆ

    https://share.myjosh.in/profile/962f0055-74f5-4280-9841-922fd9356dca

    ''ಕಂಟೆಂಟ್ ಕ್ರಿಯೇಟರ್ ಆಗಿ ಜೋಶ್‌' ಜೊತೆಗೆ ನನ್ನ ಪಯಣ ಬಹಳ ಅದ್ಭುತವಾಗಿತ್ತು. ಕೇವಲ ತಾಯಿ ಮತ್ತು ಗೃಹಿಣಿಯಾಗಿದ್ದ ನನಗೆ 'ಜೋಶ್' ಅಪ್ಲಿಕೇಶನ್ ಒಂದು ಪ್ರತ್ಯೇಕ ಗುರುತು ನೀಡಿದೆ. ನಾನೀಗ ಹೆಮ್ಮೆಯ ಕಂಟೆಂಟ್ ಕ್ರಿಯೇಟರ್, 'ಜೋಶ್‌' ನೀಡಿದ ಅಪರಿಮಿತ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ''

    ಆರ್ವಿಕಾ ಗುಪ್ತಾ

    https://share.myjosh.in/profile/a672586f-6636-4b6e-b2d1-8c0436cc480c

    ''ಲೈಟ್ಸ್ ಕ್ಯಾಮೆರಾ ಜೋಶ್‌' ಮೀಟ್‌ಅಪ್‌ಗೆ ನಾನು ಕಾತರಳಾಗಿ ಕಾಯುತ್ತಿದ್ದೇನೆ. 'ಜೋಶ್' ಅಪ್ಲಿಕೇಶನ್ ನನಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿತು. ಅಲ್ಲದೆ ಇತರೆ ವ್ಯವಸ್ಥೆಗಳನ್ನು ಮಾಡಿ ನಾನು ಕಂಫರ್ಟೆಬಲ್ ಆಗಿ ಪ್ರಯಾಣ ಮಾಡುವಂತೆ ನೋಡಿಕೊಳ್ಳುತ್ತಿದೆ. ಈ ಇವೆಂಟ್ ಬಹಳ ಅದ್ಧೂರಿಯಾಗಿ ನಡೆಯಲಿದೆ. ಇತರೆ ಕ್ರಿಯೇಟರ್‌ಗಳನ್ನು ಭೇಟಿಯಾಗಿ ಅವರೊಟ್ಟಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತೇವೆ. ಜೋಶ್‌ಗೆ ನಾನು ಧನ್ಯವಾದ ಹೇಳುತ್ತೇನೆ''

    ತರಣ್‌ಜೀತ್ ಸಿಂಗ್

    https://share.myjosh.in/profile/1b78076a-456e-4039-a253-f534f398d29e

    ''ನನ್ನ ಮೆಚ್ಚಿನ ಕ್ರಿಯೇಟರ್‌ಗಳನ್ನು ಭೇಟಿಯಾಗಲು ನಾನು ಕಾತರದಿಂದ ಕಾಯುತ್ತಿದ್ದೇನೆ. 'ಲೈಟ್ಸ್ ಕ್ಯಾಮೆರಾ ಜೋಶ್' ಅದ್ಧೂರಿ ಇವೆಂಟ್ ಆಗಲಿದೆ. ಹಲವು ಕ್ರಿಯೇಟರ್‌ಗಳನ್ನು ನಾನು ಭೇಟಿಯಾಗಲಿದ್ದೇನೆ''

    ಅಕ್ಟೋಬರ್ 09ರಂದು ಗುರುಗ್ರಾಮದಲ್ಲಿ 'ಲೈಟ್ಸ್ ಕ್ಯಾಮೆರಾ ಜೋಶ್'ನ ಇವೆಂಟ್ ನಡೆಯಲಿದೆ. ವಿಳಾಸ: ರಿವೇರಾ ಬೈ ಎಫ್‌ಎನ್‌ಪಿ ಗಾರ್ಡನ್ಸ್. ಎನ್‌ಎಚ್‌ 8, ಗಾಲ್ಫ್‌ ಡಿಆರ್, ಲೀಲಾ ಹೋಟೆಲ್ ಆಂಬಿಯನ್ಸ್ ಹಿಂದೆ, ಡಿಎಲ್‌ಎಫ್ ಫೇಸ್‌ 3, ಗುರುಗ್ರಾಮ- 122002

    English summary
    #LightsCameraJosh: Top Josh Influencers Gear Up For The Biggest Meetup At Gurugram.
    Thursday, October 7, 2021, 13:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X