ಲೈಟ್ಸ್‌ಕ್ಯಾಮೆರಾಜೋಶ್: ಹೊಳಪು ತಂದ ಹೊಸ ಪ್ರತಿಭೆಗಳು
ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕಿರು ವಿಡಿಯೋ ಅಪ್ಲಿಕೇಶನ್ ಜೋಶ್ ತನ್ನ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಕಿರು ವಿಡಿಯೋ ಕಂಟೆಂಟ್ ನೀಡುತ್ತಿದೆ.
ಅತ್ಯುತ್ತಮ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್ಸ್ ತಂಡದೊಂದಿಗೆ ಹೊಸ ರೀತಿಯ, ವೀಕ್ಷಕರು ಮೆಚ್ಚುವ ರೀತಿಯಲ್ಲಿ, ಉಪಯೋಗಕಾರಿ ಹಾಗೂ ಮನೋರಂಜನಕಾರಿ ವಿಡಿಯೋಗಳನ್ನು ಜೋಶ್ ನೀಡುತ್ತಾ ಬಂದಿದೆ.
ಅತ್ಯುತ್ತಮ ಅಪ್ಲಿಕೇಶನ್ ಜೋಶ್ ಇತರ ಕಿರು ವಿಡಿಯೋ ಆಪ್‌ಗಳಿಗಿಂತ ಬಹಳ ಭಿನ್ನವಾಗಿದ್ದು, ವೀಕ್ಷಕರಿಗೆ ಭಿನ್ನ ಕಂಟೆಂಟ್ ತಲುಪಿಸುವ ಜೊತೆಗೆ ಹೊಸ ಕಂಟೆಂಟ್ ಕ್ರಿಯೇಟರ್‌ಗಳ ನಿರ್ಮಾಣ ಮಾಡುತ್ತಿದೆ. ಹಲವು ಉತ್ಸಾಹಿ ವಿಡಿಯೋ ಕಂಟೆಂಟ್ ಕ್ರಿಯೇಟರ್‌ಗಳಿಗೆ ತರಬೇತಿ ನೀಡುತ್ತಿದೆ. ಕಂಟೆಂಟ್ ಕ್ರಿಯೇಷನ್ ಮಾಡುವ ಆಸಕ್ತಿ ಇರುವವರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ. ಅದರ ಭಾಗವಾಗಿಯೇ ಕೆಲವು ದಿನಗಳ ಹಿಂದೆ 'ಲೈಟ್ಸ್ ಕ್ಯಾಮೆರಾ ಜೋಶ್' ಅಭಿಯಾನ ಆರಂಭಿಸಿತ್ತು. ಕೆಲ ದಿನಗಳ ಹಿಂದೆಯಷ್ಟೆ ಗುರುಗ್ರಾಮದಲ್ಲಿ ಜೋಶ್ ಅತಿ ದೊಡ್ಡ ಮೀಟ್ ಅಪ್ ಅನ್ನು ಆಯೋಜಿಸಿತ್ತು, ಈ ಮೀಟ್ ಅಪ್ ದೊಡ್ಡ ಮಟ್ಟಿಗೆ ಯಶಸ್ವಿಯಾಗಿದೆ.

'ಲೈಟ್ಸ್ ಕ್ಯಾಮೆರಾ ಜೋಶ್' ಮೀಟ್ ಅನ್ನು ಮೊದಲಿಗೆ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಅಕ್ಟೋಬರ್ 9 ರಂದು ಗುರುಗ್ರಾಮದಲ್ಲಿ ಹಿಂದಿ ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ವಿಶೇಷ ಮೀಟ್ ಅಪ್ ಆಯೋಜಿಸಲಾಯ್ತು. ಬಹಳ ಐಶಾರಾಮಿಯಾಗಿ, ದೊಡ್ಡ ಮಟ್ಟದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು ಸೆಲೆಬ್ರಿಟಿ ಕಂಟೆಂಟ್ ಕ್ರಿಯೇಟರ್‌ಗಳು ಪಾಲ್ಗೊಂಡಿದ್ದರು.
#LightsCameraJosh: Top Josh Influencers Gear Up For The Biggest Meetup At Gurugram

ಅದ್ಭುತ ಮನೊರಂಜನೆ ನೀಡಿದ ಇವೆಂಟ್‌ನಲ್ಲಿ ಪ್ರೇಕ್ಷಕರಿಗೆ ಒಂದಾದ ಮೇಲೊಂದರಂತೆ ವಿಸ್ಮಯಕಾರಿ ಪ್ರದರ್ಶನಗಳನ್ನು ತಂಡಗಳು ನೀಡಿದವು. ಡ್ಯಾನ್ಸ್, ಲುಕ್ಸ್, ಹಿಪ್-ಹಾಪ್‌ಗಳಿಂದ ದೇಶದ ಜನಪ್ರಿಯ ಡ್ಯಾನ್ಸ್ ತಂಡ ಎನಿಸಿಕೊಂಡಿರುವ ಎಂಜೆ5 ಜೋಶ್ ಮೀಟ್ ಅಪ್ ಸಮಾರಂಭವನ್ನು ತಮ್ಮ ಅದ್ಭುತ ನೃತ್ಯದಿಂದ ರಂಗೇರಿಸಿದರು. ಜೋಶ್‌ನ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಮತ್ತು ಸಿಂಗರ್ ಆಗಿರುವ ಶಿರ್ಲೆ ಸಿಟಿಯಾ ಹಾಗೂ ಪಂಜಾಬಿನ ಜನಪ್ರಿಯ ಗೀತ ರಚನೆಕಾರ ಮತ್ತು ಗಾಯಕ ಗುರುಜನರ್ ಚಟ್ಟಾ ಅವರುಗಳು ಲೈವ್ ಗಾಯನ ಶೋ ನಡೆಸಿ ಪ್ರೇಕ್ಷಕರು ನಿಂತಲ್ಲೆ ಕುಣಿಯುವಂತೆ ಮಾಡಿದರು. ಕಂಟೆಂಟ್ ಕ್ರಿಯೇಟರ್‌ಗಳಾದ ಸ್ವಾತಿ ತಿವಾರಿ, ಲವ್ಲೇಶ್ ಕನೇಜಾ, ಶನಾಯಾ ರವಿ, ರಿತೇಶ್ ಪಾಲ್, ವಿಪಿನ್ ಶರ್ಮಾ ಇನ್ನೂ ಕೆಲವರು ವೇದಿಕೆ ಮೇಲೆ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

ಎಲ್‌ಇಡಿ ಲೈಟ್‌ಗಳನ್ನು ಬಳಸಿ ಮಾಡಿದ ಪಂಜಾಬಿ ನೃತ್ಯವಂತೂ ಪ್ರೇಕ್ಷಕರಿಂದ ಬಲು ಮೆಚ್ಚುಗೆ ಗಳಿಸಿತು. ಟ್ರೋನ್ ಬಾಂಗ್ಡಾ ಎಂಬ ಈ ನೃತ್ಯ ಪ್ರಕಾರಕ್ಕೆ ವೀಕ್ಷಕರು ಮನಸೋತು, 'ಒನ್ಸ್ ಮೋರ್-ಒನ್ಸ್ ಮೋರ್' ಎಂದು ಕಿರುಚಿದರು. ಜೋಶ್‌ನ ಟಾಪ್ ಕ್ರಿಯೇಟರ್‌ಗಳಾದ ವಿಜೇತ ಮತ್ತು ಅಬ್ಲು ಅವರುಗಳು ತಮ್ಮ ಅದ್ಭುತ ಪ್ರದರ್ಶನದಿಂದ ಕಾರ್ಯಕ್ರಮದಲ್ಲಿ ನಗುವಿನ ಹೊನಲು ಹರಿಸಿದರು. ನಂತರ ಕಾರ್ಯಕ್ರಮಕ್ಕೆ ಇನ್ನಷ್ಟು ನಗು ತುಂಬಿದ ಜೋಶ್, '360 ಡಿಗ್ರಿ ಫೋನ್ ಬೂತ್', 'ಮ್ಯಾಜಿಕ್ ಮಿರರ್', 'ಪಾಪಾರಾಟ್ಜಿ ಮೂಮೆಂಟ್' ಇನ್ನೂ ಕೆಲವು ಫನ್ ಭರಿತ ಆಟಗಳನ್ನು ಆಡಿಸಲಾಯಿತು. ಡಿಜೆ ಪ್ರಾರಂಭವಾದ ಮೇಲಂತೂ ಎಲ್ಲರೂ ಕುಣಿದದ್ದೇ ಕುಣಿದದ್ದು. ನಾಳೆ ಎಂಬುದೇ ಇಲ್ಲವೇನೋ ಎಂಬಂತೆ ಮೈಮರೆತು ಪ್ರೇಕ್ಷಕರು, ಕಂಟೆಂಟ್ ಕ್ರಿಯೇಟರ್‌ಗಳು ನರ್ತಿಸಿದರು.


ಜೋಶ್‌ನ ಟಾಪ್ ಕ್ರಿಯೇಟರ್‌ಗಳಾದ ಸ್ವಾತಿ ತಿವಾರಿ, ಆಸ್ತಾ ಅಸೀಜಾ, ರಿಡಾ ಜಾವೇದ್, ವಿಜೇತಾ, ನೂರಿನ್ ಶಾ ಇನ್ನೂ ಕೆಲವರು ತಮ್ಮ ವಿಡಿಯೋ ಕಂಟೆಂಟ್ ಕ್ರಿಯೇಷನ್ ಬಗ್ಗೆ ಮಾತನಾಡಿದರು. ಅಲ್ಲಿಯೇ ಕೆಲವು ವಿಡಿಯೋಗಳನ್ನು ಸಹ ಮಾಡಿದರು. ಈ ಮನರಂಜನೆಯ ಹೊರತಾಗಿ ಹಲವು ಹೊಸ ಐಡಿಯಾಗಳ ವಿನಿಮಯ, ಪ್ರತಿಭೆಗಳ ವಿನಿಮಯ, ಚರ್ಚೆ, ಯೋಜನೆಗಳಿಗೆ 'ಲೈಟ್ಸ್ ಕ್ಯಾಮೆರಾ ಜೋಶ್' ವೇದಿಕೆ ಕಲ್ಪಿಸಿತು. ಹಲವು ಹೊಸ ಕಂಟೆಂಟ್ ಕ್ರಿಯೇಟರ್‌ಗಳು ಸ್ಟಾರ್ ಕಂಟೆಂಟ್ ಕ್ರಿಯೇಟರ್‌ಗಳನ್ನು ಮುಖತಃ ಭೇಟಿ ಮಾಡಿ ಸಲಹೆಗಳನ್ನು ಪಡೆದರು, ಸ್ಪೂರ್ತಿ ಪಡೆದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಕೆಲವು ಅದ್ಭುತ ನೆನಪುಗಳೊಂದಿಗೆ, ಅನುಭವದೊಂದಿಗೆ, ಒಳ್ಳೆಯ ನಗುಮುಖದೊಂದಿಗೆ ತಮ್ಮ ಮನೆಗಳಿಗೆ ಹಿಂದಿರುಗಿದರು.

Josh To Organise Biggest Meet-Up With Its Top Creators For #LightsCameraJosh
ಇಂಥಹಾ ಫನ್ ತುಂಬಿದ ಇವೆಂಟ್‌ಗಳಲ್ಲಿ ಪಾಲ್ಗೊಳ್ಳಲು ಜೋಶ್ ಅಪ್ಲಿಕೇಶನ್ ಅನ್ನು ಕೂಡಲೇ ಡೌನ್‌ಲೋಡ್ ಮಾಡಿಕೊಳ್ಳಿ, ಜೋಶ್ ಕುಟುಂಬ ಸೇರಿಕೊಳ್ಳಿ. ಇನ್ನೂ ಏಕೆ ಕಾಯುತ್ತಿದ್ದೀರಿ. ಒಂದು ಕ್ಲಿಕ್ ಮಾಡಿ ಜೋಶ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.


Click it and Unblock the Notifications











