For Quick Alerts
  ALLOW NOTIFICATIONS  
  For Daily Alerts

  ಸುಕೇಶ್ ಬಲೆಗೆ ಬಿದ್ದಿರುವ ನಟಿಯರ್ಯಾರು? ಪಡೆದ ದುಬಾರಿ ಉಡುಗೊರೆಗಳ್ಯಾವುವು?

  |

  ವಂಚಕ, ಸುಲಿಗೆಕೋರ ಸುಕೇಶ್ ಚಂದ್ರಶೇಖರ್ ಪ್ರಕರಣದ ತನಿಖೆಯಲ್ಲಿ ಬಾಲಿವುಡ್‌ನ ಖ್ಯಾತ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನೋರಾ ಫತೇಹಿ ಹೆಸರುಗಳು ಈಗಾಗಲೇ ಹೊರ ಬಿದ್ದಿವೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಕೆಲವು ನಟಿಯರ ಹೆಸರು ಕೇಳಿಬಂದಿವೆ.

  ನೂರಾರು ಕೋಟಿ ಹಣ ವಂಚನೆ ಮಾಡಿರುವ ಸುಕೇಶ್ ಚಂದ್ರಶೇಖರ್, ತನ್ನ ಅಕ್ರಮ ಸಂಪಾದನೆಯಿಂದ ಬಾಲಿವುಡ್‌ನ ಕೆಲವು ನಟಿಯರಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾನೆ. ಇಡಿ ಹಾಗೂ ದೆಹಲಿ ಪೊಲೀಸ್ ಇಲಾಖೆಯ ಹಣಕಾಸು ಅಪರಾಧ ವಿಭಾಗದ ತನಿಖೆಯಿಂದ ಈ ಸಂಗತಿ ಹೊರಬಿದ್ದಿದೆ.

  ಸುಕೇಶ್‌ ಚಂದ್ರಶೇಖರ್‌ಗೆ ಬಾಲಿವುಡ್‌ ನಟಿಯರ ಸಂಪರ್ಕ ಮಾಡಿಕೊಡುತ್ತಿದ್ದ ಪಿಂಕಿ ಇರಾನಿ ತಾವು ಸುಕೇಶ್‌ಗೆ ಪರಿಚಯಿಸಿಕೊಟ್ಟಿದ್ದ ಕೆಲವು ನಟಿಯರ ಹೆಸರನ್ನು ಪೊಲೀಸರ ಮುಂದೆ ಹೇಳಿದ್ದು, ಸುಕೇಶ್ ಚಂದ್ರಶೇಖರ್ ಯಾವ ನಟಿಯರೊಟ್ಟಿಗೆ ಸಂಬಂಧ ಇರಿಸಿಕೊಂಡಿದ್ದ, ಯಾರಿಗೆ ಏನು ಉಡುಗೊರೆ ನೀಡಿದ್ದ ಎಂಬುದರ ಪಟ್ಟಿ ಇಲ್ಲಿದೆ...

  ನಿಕ್ಕಿ ತಾಂಬೋಲಿಗೆ ದುಬಾರಿ ಉಡುಗೊರೆ

  ನಿಕ್ಕಿ ತಾಂಬೋಲಿಗೆ ದುಬಾರಿ ಉಡುಗೊರೆ

  ನಟಿ ನಿಕ್ಕಿ ತಾಂಬೋಲಿಯನ್ನು ಇರಾನಿಯೇ ಸುಕೇಶ್‌ಗೆ ಪರಿಚಯಿಸಿದ್ದರಂತೆ. ನಿಕ್ಕಿ ತಾಂಬೋಲಿಗೆ ಸುಕೇಶ್ ಲಕ್ಷಾಂತರ ಮೌಲ್ಯದ ಗುಚ್ಚಿ ಬ್ಯಾಗ್ ನೀಡಿದ್ದಲ್ಲದೆ ಅದರ ತುಂಬ ಹಣವನ್ನು ಸಹ ನೀಡಿದ್ದನಂತೆ. ಸುಕೇಶ್ ಅನ್ನು ಭೇಟಿ ಮಾಡಲು ನಿಕ್ಕಿ ತಾಂಬೋಲಿಗೆ 1.5 ಲಕ್ಷ ರುಪಾಯಿ ಹಣ ಸಹ ನೀಡಿದ್ದಾಗಿ ಪಿಂಕಿ ಇರಾನಿ ಹೇಳಿದ್ದಾರೆ. ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ನಿಕ್ಕಿ ತಾಂಬೋಲಿ, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ನಟಿ ಚಾಹತ್ ಖನ್ನಾ

  ನಟಿ ಚಾಹತ್ ಖನ್ನಾ

  ನಟಿ ಚಾಹತ್ ಖನ್ನಾಗೆ ಸಹ ಸುಕೇಶ್ ದುಬಾರಿ ಉಡುಗೊರೆಗಳನ್ನು ನೀಡಿದ್ದ. ಚಾಹತ್ ಖನ್ನಾಗೆ ಕೆಲವು ದುಬಾರಿ ಉಡುಗೊರೆಗಳ ಜೊತೆಗೆ ಲೂಯಿ ವೆಟಾನ್‌ನ ಲಕ್ಷಾಂತರ ಮೌಲ್ಯದ ಬ್ಯಾಗು ಹಾಗೂ ನಗದು ಹಣ ನೀಡಲಾಗಿತ್ತು. ನಿಕ್ಕಿ ತಾಂಬೋಲಿ ಹಾಗೂ ಚಾಹತ್ ಖನ್ನ ಅವರುಗಳು ಸುಕೇಶ್ ಅನ್ನು ಭೇಟಿ ಸಹ ಆಗಿದ್ದರಂತೆ. ಆಗ ಸುಕೇಶ್‌, ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಿರ್ಮಾಪಕ ಎಂದು ಪಿಂಕಿ ಇರಾನಿ, ಈ ಇಬ್ಬರು ನಟಿಯರಿಗೆ ಹೇಳಿದ್ದಾಗಿಯೂ ಬಹಿರಂಗವಾಗಿದೆ.

  ಸೋಫಿಯಾ ಸಿಂಗ್, ಆರುಷಾ ಪಾಟಿಲ್

  ಸೋಫಿಯಾ ಸಿಂಗ್, ಆರುಷಾ ಪಾಟಿಲ್

  ಮಿಸ್ ದಿವಾ, ಮಿಸ್ ಇಕೊ ಇಂಟರ್ನ್ಯಾಷನಲ್ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ನಟಿ, ಮಾಡೆಲ್ ಸೋಫಿಯಾ ಸಿಂಗ್‌ಗೂ ಸುಕೇಶ್ ಚಂದ್ರಶೇಖರ್ ದುಬಾರಿ ಉಡುಗೊರೆಗಳನ್ನು ನೀಡಿದ್ದನಂತೆ. ಈಕೆ ಸಹ ಸುಕೇಶ್ ಚಂದ್ರಶೇಖರ್ ಅನ್ನು ತಿಹಾರ್ ಜೈಲಿನಲ್ಲಿ ಭೇಟಿ ಆಗಿದ್ದಾಗಿ ಪಿಂಕಿ ಇರಾನಿ ಪೊಲೀಸರಿಗೆ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈಕೆ 'ಸಿನೆಕತಾ' ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ, ಮಾಡೆಲ್ ಆರುಷಾ ಪಾಟಿಲ್ ಸಹ ಸುಕೇಶ್‌ನಿಂದ ದುಬಾರಿ ಉಡುಗೊರೆಗಳನ್ನು ಪಡೆದುಕೊಂಡಿದ್ದರು. ಈ ನಾಲ್ವರು ನಟಿಯರಿಗೆ ದೆಹಲಿ ಪೊಲೀಸರು ಸಮನ್ಸ್ ನೀಡಿದ್ದಾರೆ.

  ಸಾರಾ ಅಲಿ ಖಾನ್‌ಗೂ ಉಡುಗೊರೆ!

  ಸಾರಾ ಅಲಿ ಖಾನ್‌ಗೂ ಉಡುಗೊರೆ!

  ಬಾಲಿವುಡ್‌ನ ಖ್ಯಾತ ನಟಿ ಸಾರಾ ಅಲಿ ಖಾನ್‌ಗೂ ದುಬಾರಿ ಉಡುಗೊರೆಯ ಆಫರ್‌ ಅನ್ನು ಸುಕೇಶ್ ಚಂದ್ರಶೇಖರ್ ಮಾಡಿದ್ದನಂತೆ. ಆದರೆ ಆ ಯುವ ನಟಿ ಉಡುಗೊರೆಯನ್ನು ಸ್ವೀಕರಿಸಿಲ್ಲ ಮಾತ್ರವಲ್ಲದೆ ಸುಕೇಶ್ ಭೇಟಿಯನ್ನು ನಿರಾಕರಿಸಿದ್ದರಂತೆ. ನಟಿ ಜಾನ್ವವಿ ಕಪೂರ್‌ಗೂ ದುಬಾರಿ ಉಡುಗೊರೆಯನ್ನು ಸುಕೇಶ್ ಕಳಿಸಿದ್ದ ಆದರೆ ಆಕೆಯೂ ಸಹ ಉಡುಗೊರೆ ಸ್ವೀಕರಿಸಿಲ್ಲ ಹಾಗೂ ಸುಕೇಶ್ ಅನ್ನು ಭೇಟಿಯಾಗಲು ಒಲ್ಲೆ ಎಂದಿದ್ದಾರೆ.

  English summary
  List of actress who met Sukesh Chandrashekhar in Tihar Jail. Sukesh gave expensive gifts to four other actresses other than Nora Fatehi and Jacqueline Fernandez.
  Monday, September 19, 2022, 13:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X