ಗಣೇಶ ಹಬ್ಬ ಆಚರಿಸುವ ಬಾಲಿವುಡ್ ಖಾನ್‌ಗಳಿವರು!

ಗಣಪತಿ ಹಬ್ಬದ ಎಲ್ಲೆಡೆ ಭರದಿಂದ ನಡೆಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ, ಭಾರತದಲ್ಲಿ ಕೊರೊನಾ ವೈರಸ್‌ನಿಂದ ಗಣೇಶ ಹಬ್ಬದ ರಂಗು ಕಳೆಗುಂದಿತ್ತು, ಆದರೆ ಈ ಬಾರಿ ಎಲ್ಲರೂ ಗಣೇಶ ಹಬ್ಬವನ್ನು ಉತ್ಸುಕರಾಗಿ ಆಚರಿಸುತ್ತಾ ಇದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಷ್ಟೇ ಅಲ್ಲ, ಹಿಂದೂ ಅಲ್ಲದೆ ಮುಸ್ಲಿಂ ನಟ, ನಟಿಯರು ಸಹ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇದರಲ್ಲಿ ಸಲ್ಮಾನ್ ಖಾನ್ ಪ್ರಮುಖರು.

ಸಲ್ಮಾನ್ ಖಾನ್ ಕುಟುಂಬ ಪ್ರತಿ ವರ್ಷ ಗಣಪತಿ ಹಬ್ಬ ಆಚರಿಸುತ್ತಾರೆ. ಸಲ್ಲು ಮನೆಯಲ್ಲಿ ಮಾಡುವ ಗಣಪತಿ ಹಬ್ಬಕ್ಕಾಗಿ ಎಲ್ಲರೂ ಎದುರು ನೋಡುತ್ತಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ, ಸಲ್ಮಾನ್ ಸಹೋದರಿ ಅರ್ಪಿತಾ ಪತಿಯ ಮನೆಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಖಾನ್ ಕುಟುಂಬ ಮಾತ್ರವಲ್ಲ, ಬಾಲಿವುಡ್ ಇಂಡಸ್ಟ್ರಿಗೆ ಸಂಬಂಧಿಸಿದ ಅನೇಕ ಸೆಲೆಬ್ರಿಟಿಗಳು ಕೂಡ ಸಲ್ಮಾನ್ ಖಾನ್ ಮನೆಯಲ್ಲಿ ಇಡುವ ಗಣಪತಿಯ ದರ್ಶನಕ್ಕೆ ಬರುತ್ತಾರೆ.

List Of Bollywood Muslim Celebraties Who Celebrate Ganesha Festival

ಗೌರಿಯನ್ನು ಮದುವೆಯಾಗಿರುವ ಶಾರುಖ್ ಖಾನ್ ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಆಚರಿಸುತ್ತಾರೆ. ಶಾರುಖ್ ಖಾನ್ ಮನೆಯಲ್ಲೂ ಕೂಡ ಗಣೇಶ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮನೆಗೆ ಗಣಪತಿ ಮೂರ್ತಿಯನ್ನು ತಂದು ಕೂರಿಸುತ್ತಾರೆ. ಮಕ್ಕಳೊಂದಿಗೆ ಸೇರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.

ಇನ್ನು ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್ ಮದುವೆಯಾದ ನಂತರ ಹೃತಿಕ್ ಮನೆಯಲ್ಲಿ ಪ್ರತಿವರ್ಷ ಗಣಪತಿ ಹಬ್ಬದ ಸಮಾರಂಭದಲ್ಲಿ ಭಾಗವಹಿಸುತ್ತಿದ್ದರು. ವಿಚ್ಛೇದನದ ನಂತರವೂ ಹೃತಿಕ್ ಅವರ ಕುಟುಂಬ ಸದಸ್ಯರೊಂದಿಗೆ ಗಣಪತಿ ಸಮಾರಂಭದಲ್ಲಿ ಭಾಗವಹಿಸುತ್ತಾರೆ.

ಪತಿ ಕುನಾಲ್ ಖೇಮು ಮತ್ತು ಮಗಳು ಇನಾಯಾ ಜೊತೆಗೆ ಸೋಹಾ ಅಲಿ ಖಾನ್ ಕೂಡ ಗಣೇಶ ಚತುರ್ಥಿಯ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಸೋಹಾ ಅಲಿ ಖಾನ್ ಗಣೇಶ ಹಬ್ಬಕ್ಕಾಗಿ ವಿಶೇಷ ತಯಾರಿಯನ್ನೂ ಮಾಡಿಕೊಳ್ಳುತ್ತಾರೆ.

ಇನ್ನು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ತಮ್ಮ ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜೇಹ್ ಅಲಿ ಖಾನ್ ಜೊತೆಗೆ ಸೇರಿ ಗಣೇಶ ಉತ್ಸವವನ್ನು ಆಚರಿಸುತ್ತಾರೆ. ಕಳೆದ ವರ್ಷ, ಕರೀನಾ ಸೈಫ್ ಮತ್ತು ತೈಮೂರ್ ಗಣಪತಿಯನ್ನು ಪೂಜಿಸುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಸಾರಾ ಅಲಿ ಖಾನ್ ಕೂಡ ಪ್ರತಿ ವರ್ಷವೂ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

More from Filmibeat

English summary
List Of Bollywood Muslim Celebraties Who Celebrate Ganesha Festival, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X