For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ ತಾರೆಯರಿಗೆ ನಕಲಿ ಅಭಿಮಾನಿಗಳೇ ಹೆಚ್ಚು: ಆಘಾತಕಾರಿ ಸತ್ಯ ಬಯಲು.!

  By Harshitha
  |

  ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆ ಅದರ ದುರ್ಬಳಕೆ ಕೂಡ ಜಾಸ್ತಿ ಆಗುತ್ತಿದೆ.

  ಹಿಂದೆಲ್ಲ ಸ್ಟಾರ್ ಗಳನ್ನ ಅಥವಾ ರಾಜಕಾರಣಿಗಳನ್ನ ಭೇಟಿ ಆಗಬೇಕು, ಅವರ ಜೊತೆ ಮಾತನಾಡಬೇಕು ಅಂದ್ರೆ ಅವರುಗಳ ಮನೆ ಮುಂದೆ ಗಂಟೆಗಟ್ಟಲೆ ಕಾಯಬೇಕಿತ್ತು. ಆದ್ರೀಗ ಪರಿಸ್ಥಿತಿ ಹಾಗಿಲ್ಲ. ಒಂದು ಟ್ವೀಟ್ ಮಾಡಿದ್ರೆ ಸಾಕು, ತಾರೆಯರು ಪ್ರತಿಕ್ರಿಯೆ ಕೊಡ್ತಾರೆ. ರಾಜಕಾರಣಿಗಳು ಥಟ್ ಅಂತ ಉತ್ತರ ಕೊಡ್ತಾರೆ.

  ಟ್ವಿಟ್ಟರ್ ನಲ್ಲಿ ತಾರೆಯರಿಗೆ ಇರುವ ಅಭಿಮಾನಿಗಳ ಸಂಖ್ಯೆಯೇ ಅವರ ಜನಪ್ರಿಯತೆಗೆ ಮಾನದಂಡ. ಯಾರು ಎಷ್ಟು ಫೇಮಸ್ ಅಂತ ತಿಳಿದುಕೊಳ್ಳೋಕೆ ಟ್ವಿಟ್ಟರ್ ನಲ್ಲಿ ನಂಬರ್ ಗೇಮ್ ಸಾಕು ಎಂಬುದು ಹಲವರ ನಂಬಿಕೆ. ಆದ್ರೆ, ಅದೇ ಟ್ವಿಟ್ಟರ್ ನಲ್ಲಿ ನಕಲಿ ಖಾತೆಗಳ ಸಂಖ್ಯೆ ಕಮ್ಮಿ ಇಲ್ಲ ಅನ್ನೋದು ಅಷ್ಟಾಗಿ ಅನೇಕರಿಗೆ ಗೊತ್ತಿಲ್ಲ.

  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟ್ಟರ್ ನಲ್ಲಿ ನಕಲಿ ಫಾಲೋವರ್ಸ್ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿ ಇದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ, ಬಾಲಿವುಡ್ ತಾರೆಯರ ಅಸಲಿ ಬಂಡವಾಳ ಕೂಡ ಬಯಲಾಗಿದೆ. ಬಾಲಿವುಡ್ ನ ಹಲವು ಸ್ಟಾರ್ ಗಳ ಟ್ವಿಟ್ಟರ್ ಅಕೌಂಟ್ ನಲ್ಲಿ ಫೇಕ್ ಫಾಲೋವರ್ಸ್ ತುಂಬಿ ತುಳುಕುತ್ತಿದ್ದಾರೆ.

  ಹಾಗಾದ್ರೆ, ಯಾವ್ಯಾವ ತಾರೆಯರಿಗೆ ನಕಲಿ ಅಭಿಮಾನಿಗಳ ಬೆಂಬಲ ಹೆಚ್ಚು ಇದೆ.? ಉತ್ತರ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

  ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರು ಅಮಿತಾಬ್ ಬಚ್ಚನ್

  ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರು ಅಮಿತಾಬ್ ಬಚ್ಚನ್

  ಬಾಲಿವುಡ್ ಸ್ಟಾರ್ ನಟ-ನಟಿಯರ ಪೈಕಿ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರು ಬಿಗ್ ಬಿ ಅಮಿತಾಬ್ ಬಚ್ಚನ್. ಆದ್ರೆ, ಅವರ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಪೈಕಿ 62% ಮಾತ್ರ ರಿಯಲ್. ಉಳಿದವು ನಕಲಿ. !

  ಅಮಿತಾಬ್ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗದಿರಲು ಕಾರಣವೇನು.?ಅಮಿತಾಬ್ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗದಿರಲು ಕಾರಣವೇನು.?

  ಶಾರುಖ್ ಖಾನ್ ಗೆ ನಕಲಿ ಫಾಲೋವರ್ಸ್ ಹೆಚ್ಚು.!

  ಶಾರುಖ್ ಖಾನ್ ಗೆ ನಕಲಿ ಫಾಲೋವರ್ಸ್ ಹೆಚ್ಚು.!

  ಆಘಾತಕಾರಿ ಸಂಗತಿ ಅಂದ್ರೆ ಇದೇ.! ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಗೆ ಟ್ವಿಟ್ಟರ್ ನಲ್ಲಿ ರಿಯಲ್ ಫಾಲೋವರ್ಸ್ ಗಿಂತ ಫೇಕ್ ಫಾಲೋವರ್ಸ್ ಸಂಖ್ಯೆ ಹೆಚ್ಚು.! ತಮ್ಮ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಪೈಕಿ 48% ಮಾತ್ರ ನಿಜವಾದವರನ್ನ ಶಾರುಖ್ ಖಾನ್ ಹೊಂದಿದ್ದಾರೆ.

  ತಂದೆ-ತಾಯಿ ಜೊತೆಗಿರುವುದು ಹೆಮ್ಮೆ ವಿಷಯ: ಟ್ವೀಟಿಗರಿಗೆ ಗುಂಡ್ ಪಿನ್ ಚುಚ್ಚಿದ ಅಭಿಶೇಕ್!ತಂದೆ-ತಾಯಿ ಜೊತೆಗಿರುವುದು ಹೆಮ್ಮೆ ವಿಷಯ: ಟ್ವೀಟಿಗರಿಗೆ ಗುಂಡ್ ಪಿನ್ ಚುಚ್ಚಿದ ಅಭಿಶೇಕ್!

  ಸಲ್ಮಾನ್ ಖಾನ್ 50-50

  ಸಲ್ಮಾನ್ ಖಾನ್ 50-50

  ಟ್ವಿಟ್ಟರ್ ನಲ್ಲಿ ಸಲ್ಮಾನ್ ಖಾನ್ ಹೊಂದಿರುವ ಫಾಲೋವರ್ಸ್ ಪೈಕಿ 50% ರಿಯಲ್. ಉಳಿದ 50% ಫೇಕ್. ಖತರೋಕಿ ಕಿಲಾಡಿ ಅಕ್ಷಯ್ ಕುಮಾರ್ ರದ್ದೂ ಅದೇ ಕಥೆ.

  ಮಿಂಚಿನ ವೇಗದಲ್ಲಿ ಬೆಳೆಯುತ್ತಿದೆ ಕಿಚ್ಚ ಸುದೀಪ್ ಫಾಲೋವರ್ಸ್ ಸಂಖ್ಯೆ!ಮಿಂಚಿನ ವೇಗದಲ್ಲಿ ಬೆಳೆಯುತ್ತಿದೆ ಕಿಚ್ಚ ಸುದೀಪ್ ಫಾಲೋವರ್ಸ್ ಸಂಖ್ಯೆ!

  ನಟಿಯರಿಗೂ ಫೇಕ್ ಫಾಲೋವರ್ಸ್ ಜಾಸ್ತಿ

  ನಟಿಯರಿಗೂ ಫೇಕ್ ಫಾಲೋವರ್ಸ್ ಜಾಸ್ತಿ

  ತಮ್ಮ ಟ್ವಿಟ್ಟರ್ ಅಕೌಂಟ್ ಗಳ ಪೈಕಿ 67% ರಿಯಲ್ ಫಾಲೋವರ್ಸ್ ನ ದೀಪಿಕಾ ಪಡುಕೋಣೆ ಹೊಂದಿದ್ದರೆ, 61% ನಿಜವಾದ ಅಭಿಮಾನಿಗಳನ್ನು ಆಲಿಯಾ ಭಟ್ ಪಡೆದುಕೊಂಡಿದ್ದಾರೆ.

  ಹೃತಿಕ್-ಆಮೀರ್ ಕಥೆ ಏನು.?

  ಹೃತಿಕ್-ಆಮೀರ್ ಕಥೆ ಏನು.?

  56% ರಿಯಲ್ ಫಾಲೋವರ್ಸ್ ನ ಹೃತಿಕ್ ರೋಷನ್ ಹೊಂದಿದ್ದಾರೆ. ಇನ್ನೂ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಟ್ವಿಟ್ಟರ್ ಫಾಲೋವರ್ಸ್ ಪೈಕಿ 68% ರಿಯಲ್.

  ಇದ್ದಿದ್ರಲ್ಲಿ ಪ್ರಿಯಾಂಕಾ ಉತ್ತಮ.!

  ಇದ್ದಿದ್ರಲ್ಲಿ ಪ್ರಿಯಾಂಕಾ ಉತ್ತಮ.!

  ಬಾಲಿವುಡ್ ನಟ-ನಟಿಯರ ಪೈಕಿ ಅತಿ ಹೆಚ್ಚು ರಿಯಲ್ ಫಾಲೋವರ್ಸ್ ಹೊಂದಿರುವವರು ಪ್ರಿಯಾಂಕಾ ಛೋಪ್ರಾ. ತಮ್ಮ ಟ್ವಿಟ್ಟರ್ ಫಾಲೋವರ್ಸ್ ಪೈಕಿ 71% ನಿಜವಾದ ಫಾಲೋವರ್ಸ್ ಪಡೆದಿದ್ದಾರೆ ಪ್ರಿಯಾಂಕಾ ಛೋಪ್ರಾ. ಈಗ ಹೇಳಿ, ಸೋಷಿಯಲ್ ಮೀಡಿಯಾದಲ್ಲಿ ಯಾರು ಹೆಚ್ಚು ಜನಪ್ರಿಯರು.?

  English summary
  Here is the List of Bollywood Stars who have highest number of Fake Twitter followers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X