For Quick Alerts
  ALLOW NOTIFICATIONS  
  For Daily Alerts

  ಮದುವೆ ಆಗುವುದಕ್ಕೂ ಮೊದಲು ಗರ್ಭಿಣಿಯಾದ ಸೆಲೆಬ್ರಿಟಿಗಳು

  |

  ಸಿನಿಮಾ ರಂಗ ಅಂದ್ರೆನೇ ಹೀಗೆ...ಗಾಸಿಪ್, ಲವ್ವು, ಅಫೇರ್, ಸಕ್ಸಸ್, ಫೆಲ್ಯೂರ್, ಬ್ರೇಕ್ ಎಲ್ಲವೂ ಇದೆ. ಬಾಲಿವುಡ್‌ ಇಂಡಸ್ಟ್ರಿಯಲ್ಲಿ ಇದೆಲ್ಲವೂ ಸ್ವಲ್ಪ ಹೆಚ್ಚಾಗಿಯೇ ಕಾಣಬಹುದು. ತಾರಾ ಜೋಡಿಗಳು ವಿವಾಹ ಅಂತ ನೋಡುದ್ರು ಬಿಟೌನ್‌ನಲ್ಲಿ ಹೆಚ್ಚು ಮಂದಿ ಕಣ್ಣಿಗೆ ಬೀಳ್ತಾರೆ.

  ಈ ವಿಷ್ಯ ಏನಪ್ಪಾ ಅಂದ್ರೆ ಮದುವೆ ಆಗುವುದಕ್ಕೂ ಮುಂಚೆನೇ ಕೆಲವು ಸೆಲೆಬ್ರಿಟಿಗಳು ಗರ್ಭಿಣಿಯಾಗಿದ್ದಾರೆ. ಪ್ರಗ್ನೆಂಟ್ ಆದ್ಮೇಲೆ ಮದುವೆಯಾಗಿರುವ ಅಥವಾ ಜೊತೆಯಾಗಿ ಜೀವನ ನಡೆಸುತ್ತಿರುವ ಕೆಲವು ಮಂದಿ ಇದ್ದಾರೆ. ವಿವಾಹವಾಗುವುದಕ್ಕೂ ಮುಂಚೆಯೇ ತಾಯಿಯಾದವರ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ಸ್ ಹೆಚ್ಚು. ಹಾಗಾದ್ರೆ, ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ? ಮುಂದೆ ಓದಿ...

  ಈ ವರ್ಷ ಅತಿ ಹೆಚ್ಚು ಟ್ರೋಲ್ ಆದ ಸಿನಿಮಾಗಳು ಯಾವುವು ಗೊತ್ತೆ!?ಈ ವರ್ಷ ಅತಿ ಹೆಚ್ಚು ಟ್ರೋಲ್ ಆದ ಸಿನಿಮಾಗಳು ಯಾವುವು ಗೊತ್ತೆ!?

  ನೇಹಾ ಕಕ್ಕರ್

  ನೇಹಾ ಕಕ್ಕರ್

  ಬಾಲಿವುಡ್‌ನ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಇತ್ತೀಚಿಗಷ್ಟೆ ರೋಹನ್ ಪ್ರೀತ್ ಸಿಂಗ್ ಜೊತೆ ವೈವಾಹಿಕ ಜೀವನ ಆರಂಭಿಸಿದ್ದರು. ಮದುವೆಗೆ ಕೆಲವೇ ವಾರಗಳ ನಂತರ ತಾನು ಗರ್ಭಿಣಿ ಎಂದು ದೃಢಪಡಿಸಿದ್ದಾರೆ. ನೇಹಾ ಕಕ್ಕರ್ ಅವರ ಪ್ರಗ್ನೆನ್ಸಿ ವಿಚಾರ ಬಹಿರಂಗವಾಗುತ್ತಿದ್ದಂತೆ ಮದುವೆಗೂ ಮುಂಚೆ ಗರ್ಭ ಧರಿಸಿದ ಸೆಲೆಬ್ರಿಟಿಗಳ ಹೆಸರು ಚರ್ಚೆಯಾಗ್ತಿದೆ.

  ನೀನಾ ಗುಪ್ತಾ

  ನೀನಾ ಗುಪ್ತಾ

  ಮದ್ವೆಗೆ ಮುಂಚೆ ಗರ್ಭಿಣಿಯಾದವರು ಎಂಬ ವಿಚಾರ ಚರ್ಚೆಯಾಗುತ್ತಿದ್ದಂತೆ ಮೊದಲು ಬರು ಹೆಸರು ನೀನಾ ಗುಪ್ತಾ. ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಜೊತೆ ಡೇಟಿಂಗ್‌ನಲ್ಲಿದ್ದ ನೀನಾ ಗುಪ್ತಾ ಗರ್ಭಿಣಿಯಾಗಿದ್ದರು. ಆದ್ರೆ, ಮೊದಲ ಪತ್ನಿ ಜೊತೆಗೆ ಮುಂದುವರಿಯಲು ನಿರ್ಧರಿಸಿ ರಿಚರ್ಡ್ಸ್ ಮದುವೆಗೆ ನಿರಾಕರಿಸಿದ್ದರು. ಬಳಿಕ, ತನ್ನ ಮಗುವನ್ನು ತಾನೇ ಬೆಳೆಸುವ ನೀನಾ ನಿರ್ಧಾರಕ್ಕೆ ಬಂದರು.

  2020: ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ನಟ-ನಟಿಯರು2020: ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ನಟ-ನಟಿಯರು

  ಕಲ್ಕಿ ಕೋಚ್ಲಿನ್

  ಕಲ್ಕಿ ಕೋಚ್ಲಿನ್

  ನಟಿ ಕಲ್ಕಿ ಕೋಚ್ಲಿನ್ ತನ್ನ ಪ್ರಗ್ನೆನ್ಸಿ ಸುದ್ದಿಯನ್ನು ಘೋಷಿಸಿದಾಗ ಗೆಳೆಯ ಗೈ ಹರ್ಷ್‌ಬರ್ಗ್‌ ಜೊತೆ ಸಂಬಂಧದಲ್ಲಿದ್ದಳು. ಗರ್ಭಿಣಿ ಎಂದು ತಿಳಿದ ತಕ್ಷಣ ತನ್ನ ಪ್ರಗ್ನೆನ್ಸಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

  ನೇಹಾ ಧೂಪಿಯಾ

  ನೇಹಾ ಧೂಪಿಯಾ

  ಗೆಳೆಯ ಅಂಗದ್ ಬೇಡಿ ಜೊತೆ ವಿವಾಹವಾದ ಸಂದರ್ಭದಲ್ಲಿ ನಟಿ ನೇಹಾ ಧೂಪಿಯಾ ಮೂರು ತಿಂಗಳು ಗರ್ಭಿಣಿ ಎಂದು ಹೇಳಲಾಗಿದೆ. ಈ ದಂಪತಿಗೆ ಈಗ ಮಂಚ್ಕಿನ್ ಮೆಹರ್ ಎಂಬ ಪುಟ್ಟ ಮಗು ಇದೆ.

  ಕೊಂಕನಾ ಸೇನ್ ಶರ್ಮಾ

  ಕೊಂಕನಾ ಸೇನ್ ಶರ್ಮಾ

  ಕೊಂಕನಾ ಸೇನ್ ಶರ್ಮಾ ಸಹ ರಣವೀರ್ ಶೋರೆ ಅವರನ್ನು ಮದುವೆಯಾದ ಕೆಲವು ತಿಂಗಳ ನಂತರ ತನ್ನ ಗರ್ಭಧಾರಣೆಯನ್ನು ಘೋಷಿಸಿದರು. ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ಕೊಂಕನಾ ನಂತರ ಮಗುವಿಗೆ ಜನ್ಮ ನೀಡಿದರು ಎಂದು ವರದಿಯಾಗಿದೆ.

  ನತಾಶಾ ಸ್ಟಾಂಕೋವಿಕ್

  ನತಾಶಾ ಸ್ಟಾಂಕೋವಿಕ್

  ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ವರ್ಷದ ಆರಂಭದಲ್ಲಿ ನಟಿ ನತಾಶಾ ಸ್ಟಾಂಕೋವಿಕ್ ನಿಶ್ಚಿತಾರ್ಥ ಮಾಡಿಕೊಂಡರು. ಆ ಬಳಿಕ ಜುಲೈ ತಿಂಗಳಲ್ಲಿ ಮಗು ಜನಿಸಿತು. ಮದುವೆಗೆ ಮುನ್ನವೇ ನತಾಶಾ ಗರ್ಭ ಧರಿಸಿದ್ದರು ಎಂದು ನಂಬಲಾಗಿದೆ.

  ಅಮಿ ಜಾಕ್ಸನ್

  ಅಮಿ ಜಾಕ್ಸನ್

  ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಜಾರ್ಜ್ ಪನಾಯೊಟೊಗೆ ನಿಶ್ಚಿತಾರ್ಥ ಮಾಡಿಕೊಂಡರು. ಆ ನಂತರ ಗರ್ಭಿಣಿ ಎಂದು ಘೋಷಿಸಿದರು. ಈಗ ಮುಗುವಿಗೆ ಜನ್ಮ ಸಹ ನೀಡಿದ್ದಾರೆ. ಅಧಿಕೃತವಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ.

  ಅಮೃತಾ ಆರೋರ

  ಅಮೃತಾ ಆರೋರ

  ಶಕೀಲ್ ಆರೋರ ಅವರೊಂದಿಗೆ ಅಮೃತಾ ಆರೋರ ಮದುವೆಯಾದಾಗ ಎಲ್ಲರಿಗೂ ಅಚ್ಚರಿ ತಂದಿತ್ತು. ಯಾವುದೇ ಸುಳಿವು ನೀಡದೆ ದಿಢೀರ್ ಅಂತ ಮದುವೆ ಘೋಷಿಸಿದರು. ನಂತರ ತಿಳಿದ್ದೇನಂದರೆ ಮದುವೆಗೆ ಮುಂಚೆ ಆಕೆ ಗರ್ಭಿಣಿಯಾಗಿದ್ದರು ಎಂದು.

  ಡ್ರಗ್ಸ್ ಪ್ರಕರಣದ ಬಗ್ಗೆ ಮತ್ತೆ ಮಾತನಾಡಿದ ಇಂದ್ರಜಿತ್ ಲಂಕೇಶ್ | Fillmibeat Kannada
  ಶ್ರೀದೇವಿ

  ಶ್ರೀದೇವಿ

  ಬಾಲಿವುಡ್ ಎವರ್‌ಗ್ರೀನ್ ನಟಿ ಶ್ರೀದೇವಿ ಸಹ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾದವಾದ ಸಂದರ್ಭದಲ್ಲಿ ಏಳು ತಿಂಗಳ ಗರ್ಭಿಣಿ. ಪ್ರಗ್ನೆನ್ಸಿ ಘೋಷಿಸಿದ ನಂತರವೇ ವಿವಾಹವಾಗಿದ್ದರು.

  English summary
  Kalki Koechlin, Neha Dhupia, Konkona Sen Sharma and some other Celebrities Who Got Pregnant before Marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X