ಮದುವೆಯಾಗಿದ್ದರೂ ಚಪಲ ; ಮನೆಗೆ ಬಂದು ನನ್ನ ತಾಯಿಯ ಎದುರೇ ಆ ನಿರ್ಮಾಪಕ ನನ್ನ ಮಲಗಲು ಕರೆದಿದ್ದ- ಸುರಭಿ ರೇಣುಕಾ ಶಹಾನೆ

ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಆರಂಭ ಮಾಡಲಾಗಿದ್ದ ಅಭಿಯಾನ ಮೀಟೂ. ಆರೇಳು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಮೀಟೂ ಅಭಿಯಾನದಡಿ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದರು.

ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಇತ್ಯಾದಿ ಇತ್ಯಾದಿ ಆರೋಪಗಳೆಲ್ಲವೂ ಬಣ್ಣದ ಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಆದರೆ ಆ ನಂತರ ಆ ವಿಷಯ ಹಾಗೇ ತಣ್ಣಗಾಯಿತು.

Live With Me For A Stipend Renuka Shahane Exposes Married Producer s Audacious Casting Couch Offer

ಆದರೆ ಕಳೆದ ವರ್ಷ ಮಲಯಾಳಂ ಚಿತ್ರರಂಗದ ಕುರಿತು ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಮೀಟೂ ಬಿರುಗಾಳಿ ಮತ್ತೆ ಎದ್ದಿತ್ತು. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾ‍ಷೆಯಲ್ಲಿ ಕೂಡ ಕಾಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬಂದಿತ್ತು.

ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದರು. ಈಗಲೂ ಹಂಚಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ರೇಣುಕಾ ಶಹಾನೆ ಕೂಡ ಸೇರಿಕೊಂಡಿದ್ಧಾರೆ.

ಹೌದು, ರೇಣುಕಾ ಶಹಾನೆ.. 90ರ ದಶಕದಲ್ಲಿ ಇವರ ಸಾರಥ್ಯದಲ್ಲಿ ಬರುತ್ತಿದ್ದ ''ಸುರಭಿ'' ಕಾರ್ಯಕ್ರಮವನ್ನು ಯಾರು ತಾನೇ ಮರೆಯಲು ಸಾಧ್ಯ. ಇನ್ನೂ ಶಾರುಖ್ ಖಾನ್ ಜೊತೆ ಆ ಕಾಲದಲ್ಲಿಯೇ ''ಸರ್ಕಸ್'' ಧಾರಾವಾಹಿಯಲ್ಲಿ ಇವರು ತೆರೆ ಹಂಚಿಕೊಂಡಿದ್ದರು.

ಕೇವಲ ಕಿರುತೆರೆ ಮಾತ್ರವಲ್ಲದೇ ''ಹಮ್ ಆಪ್ಕೇ ಹೈ ಕೌನ್''.. ''ಮಾಸೂಮ್''.. ''ತ್ರಿಭಂಗಾ''.. ''ರೀತಾ''.. ಹೀಗೆ ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನ ಮನ ಗೆದ್ದರು.

Live With Me For A Stipend Renuka Shahane Exposes Married Producer s Audacious Casting Couch Offer

ಇಂಥಾ ರೇಣುಕಾ ಶಹಾನೆ ತಮ್ಮ ಕಹಿ ಅನುಭವ ಹಂಚಿಕೊಂಡಿದ್ಧಾರೆ. ನಿರ್ಮಾಪಕ ನೀಡಿದ್ದ ಆಫರ್ ಕೇಳಿ ನಾನು ಮತ್ತು ನನ್ನ ತಾಯಿ ಬೆಚ್ಚಿ ಬಿದ್ದಿದ್ದೇವು ಎಂದಿದ್ದಾರೆ.

ಈ ಕುರಿತು ''ಜೂಮ್‌''ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರೇಣುಕಾ ಶಹಾನೆ ಇದು ತುಂಬಾ ವರ್ಷಗಳ ಹಿಂದಿನ ಮಾತು. ಆಗ ನಮ್ಮ ಮನೆಗೆ ನಿರ್ಮಾಪಕರು ಒಬ್ಬರು ಬಂದಿದ್ದರು ಎಂದು ಹೇಳಿದ್ದಾರೆ. ಕೆಲಸದ ಪ್ರಯುಕ್ತ ನಮ್ಮ ಮನೆಗೆ ಬಂದಿದ್ದ ಆ ನಿರ್ಮಾಪಕರಿಗೆ ಅದಾಗಲೇ ಮದುವೆಯಾಗಿತ್ತು ಎಂದು ಹೇಳಿರುವ ರೇಣುಕಾ ಶಹಾನೆ, ನಮ್ಮ ಮನೆಗೆ ಬಂದ ಅವರು ಸೀರೆ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ನನ್ನನ್ನು ಕೇಳಿದರು ಎಂದು ಹೇಳಿದ್ದಾರೆ.

ಬ್ರ್ಯಾಂಡ್ ಅಂಬಾಸಿಡರ್ ಎಂದರೆ ನಾನು ಒಪ್ಪಬಹುದಿತ್ತು ಎಂದು ಹೇಳಿರುವ ರೇಣುಕಾ ಶಹಾನೆ, ಇದೇ ಸಮಯದಲ್ಲಿ ಆ ನಿರ್ಮಾಪಕ ನನಗೆ ಮದುವೆಯಾಗಿದೆ, ಆದರೂ ಕೂಡ ನೀವು ನನ್ನ ಜೊತೆ ಇರಬೇಕು.. ನನ್ನ ಜೊತೆ ವಾಸ ಮಾಡಬೇಕು.. ನಾನು ನಿಮಗೆ ಈ ಕೆಲಸಕ್ಕೆ ಪ್ರತಿ ತಿಂಗಳು ಇಂತಿಷ್ಟು ಅಂತ ಹಣವನ್ನು ಸ್ಟೈಫಂಡ್‌ನಂತೆ ಕೊಡುತ್ತೇನೆ ಎಂದು ಹೇಳಿದರು ಎಂದು ಹೇಳಿದ್ಧಾರೆ. ನಿರ್ಮಾಪಕನ ಈ ಮಾತು ಕೇಳಿ ನಾನು ಮತ್ತು ನನ್ನ ಅಮ್ಮ ಇಬ್ಬರು ತಬ್ಬಿಬ್ಬಾಗಿದ್ದೆವು ಎಂದಿದ್ಧಾರೆ.

ನಾನು ಅವರ ಈ ಆಫರ್ ಒಪ್ಪಿಕೊಳ್ಳಲಿಲ್ಲ. ಆ ನಂತರ ಅವರು ಬೇರೆಯವರನ್ನು ಆಯ್ಕೆ ಮಾಡಿಕೊಂಡರಾ..? ಗೊತ್ತಿಲ್ಲ ಎಂದು ಹೇಳಿರುವ ರೇಣುಕಾ ಶಹಾನೆ ಈ ತರಹದ ಘಟನೆಗಳು ನಟಿಯರ ವ್ಯೆಯಕ್ತಿಕ ಜೀವನದ ಮೇಲೆ ಮತ್ತು ವೃತ್ತಿ ಜೀವನದ ಮೇಲೆ ತುಂಬಾನೇ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.

ಮಲಗಲು ಅಥವಾ ಅವರ ಜೊತೆ ಇರಲು ಒಪ್ಪದಿದ್ದಾಗ ಅವರ ಪ್ರಭಾವಳಿಯನ್ನು ಉಪಯೋಗಿಸಿಕೊಂಡು ಅವರು ನಮ್ಮನ್ನು ಬೇರೆ ಚಿತ್ರಗಳಿಂದ ಕಿತ್ತು ಹಾಕಬಹುದು, ಅವಕಾಶ ಸಿಗದಂತೆ ಮಾಡಬಹುದು, ಮಾಡಿದ ಕೆಲಸಕ್ಕೆ ಆ ನಂತರ ಹಣ ಸಿಗದಂತೆ ಕೂಡ ನೋಡಿಕೊಳ್ಳಬಹುದು.. ಒಂದು ರೀತಿಯಲ್ಲಿ ಇಲ್ಲಿ ಇವ್ರದ್ದೇ ಒಂದು ಗುಂಪು ಇರುತ್ತೆ. ಆ ಗುಂಪು ನಟಿಯರ ಬದುಕನ್ನೇ ಆ ನಂತರ ಸರ್ವನಾಶ ಮಾಡುತ್ತೆ. ಬಲಿಪಶುವನ್ನಾಗಿ ಮಾಡುತ್ತೆ ಎಂದು ಕೂಡ ರೇಣುಕಾ ಶಹಾನೆ ಹೇಳಿದ್ಧಾರೆ.

ಮುಂದುವರೆದು... ನಮ್ಮ ಜನರಿಗೆ ಮರೆವು ಜಾಸ್ತಿ. ವರ್ಷಗಳ ಹಿಂದೆ ಶುರುವಾಗಿದ್ದ #MeToo ಚಳುವಳಿ ಕಾಲಾನಂತರದಲ್ಲಿ ಮಂಕಾಯ್ತು ಎಂದು ಹೇಳಿರುವ ರೇಣುಕಾ ಶಹಾನೆ ಅಂದು ಲೈಂ*ಗಿಕ ಪ್ರಕರಣದಲ್ಲಿ ಸಿಲುಕಿದ್ದ ಹಲವು ಖ್ಯಾತ ನಾಮರು ಇಂದು ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಚಿತ್ರರಂಗದಲ್ಲಿ ಮತ್ತೆ ಕೆಲಸ ಮಾಡುತ್ತಿದ್ಧಾರೆ.

ಹಾಗಂಥ ಇವರೆಲ್ಲರ ಮೇಲೆ ಮಾಡಿದ್ದ ಆರೋಪಗಳೆಲ್ಲವೂ ಸುಳ್ಳು ಅಂತಲ್ಲ. ಆರೋಪ ಮಾಡಿದ್ದ ನಾಯಕಿಯರು ವ್ಯೆಯಕ್ತಿಕ ದ್ವೇಷದಿಂದ ಮಾತನಾಡಿದ್ದರು ಎಂದು ಕೂಡ ಅಲ್ಲ ಎಂದು ಹೇಳಿರುವ ರೇಣುಕಾ ಶಹಾನೆ, ಆರೋಪ ಮಾಡಿದ್ದ ನಾಯಕಿಯರನ್ನೇ ಅನುಮಾನದ ದೃಷ್ಟಿಯಿಂದ ಈಗಲೂ ನೋಡುತ್ತಾರೆ ಎಂದು ಹೇಳಿದ್ದಾರೆ.

More from Filmibeat

English summary
In a candid revelation, Renuka Shahane shares the shocking moment a married producer gave her an uncomfortable proposition: live-in arrangement for payment. She speaks out
Read more about: casting couch me too
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X