ಕೊಹ್ಲಿ ಹೆಸರಿಗೆ ಧಕ್ಕೆ ತರಲು ಸಂಚು ; ಸುಳ್ಳು ಆರೋಪ ಮಾಡಲು ಹಣದ ಆಮಿಷ - ಸ್ಪೋಟಕ ವಿಷ್ಯ ಹೇಳಿದ ಜರ್ಮನ್ ಮಾಡೆಲ್

ಗೆದ್ದವರ ಹಿಂದೆ ಕೇವಲ ಹಿಂಬಾಲಕರು ಮಾತ್ರ ಇರುವುದಿಲ್ಲ. ಅಭಿಮಾನಿಗಳು ಮಾತ್ರ ಇರುವುದಿಲ್ಲ. ಬದಲಿಗೆ ಕಾಲೆಳೆಯುವರು ಕೂಡ ಇರ್ತಾರೆ. ಸಾಮಾನ್ಯ ವ್ಯಕ್ತಿಯ ಸಾಧನೆಯನ್ನು ಹಲವರು ಕೊಂಡಾಡುತ್ತಿದ್ದರೆ ಈ ಗುಂಪು ಉತ್ತುಂಗಕ್ಕೇರಿದ ವ್ಯಕ್ತಿಯನ್ನು ಕೆಳಕ್ಕೆ ಎಳೆಯುವ ಹೊಂಚು ಹಾಕುತ್ತಿರುತ್ತೆ. ಇದು ಮನುಷ್ಯನ ಸಹಜ ಗುಣನಾ ..? ಅಸೂಯೆನಾ ..? ಗೊತ್ತಿಲ್ಲ.

ಆದರೆ ಒಬ್ಬ ವ್ಯಕ್ತಿ ಎಷ್ಟು ಎತ್ತರಕ್ಕೆ ಬೆಳೆಯುತ್ತಾನೋ ಅಷ್ಟೇ ಕಾಲೆಳೆಯುವರ ಸಂಖ್ಯೆ ಹೆಚ್ಚಾಗುತ್ತೆ. ತಾವು ಸಾಧಿಸಲು ಸಾಧ್ಯವಾಗದಿದ್ದಾಗ ಸಾಧಿಸಿದವರನ್ನು ಕೆಳಗೆಡವಲು ಹವಣಿಸುವ ಈ ಚಿಕ್ಕದೊಂದು ತಪ್ಪನ್ನು ಮಾಡಲಿ ಎಂದು ಜಾತಕ ಪಕ್ಷಿಯಂತೆ ಕಾಯುತ್ತೆ. ಇನ್ನೂ ಕೆಲ ಒಮ್ಮೆ ಹೇಗಾದರೂ ಚಾರಿತ್ಯ್ರವಧೆ ಮಾಡಲೇಬೇಕೆಂದು ಸುಳ್ಳು ಸುದ್ದಿಯನ್ನು ಕೂಡ ಈ ಕಾಲೆಳೆಯುವ ಗುಂಪು ಹಬ್ಬಿಸುತ್ತೆ.

Paid Plot German Influencer LizLaz Exposes Offers to Tarnish Virat Kohli

ಇನ್ನು ಇದು 5G ಯುಗ. ಕೀರ್ತಿಯ ಶಿಖರಕ್ಕೇರಿದ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವುದು ಈಗ ತುಂಬಾನೇ ಸುಲಭ. ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಈ ಕಾಲದಲ್ಲಿ ಯಾರಿಂದಾದರೂ ಇಲ್ಲ ಸಲ್ಲದ ಆರೋಪ ಮಾಡಿಸಬಹುದು ಎನ್ನುವ ಲೆಕ್ಕಾಚಾರ ಹಲವರು ಹಾಕುತ್ತಾರೆ. ಆದರೆ ಎಲ್ಲರೂ ಹಣಕ್ಕೋಸ್ಕರ ಸ್ವಾಭಿಮಾನ ಅಡ ಇಡಬೇಕಲ್ಲ. ಉದಾಹರಣೆಗೆ ಲಿಜ್ ಲಾಜ್.

ಹೌದು, ಲಿಜ್ ಲಾಜ್.. ಜರ್ಮನ್ ಚೆಲುವೆ. ಇವರ ನಿಜನಾಮಧೇಯ ಜೆನ್ನಿಫರ್. ''ಸಮೋಸಾ..ಸಮೋಸಾ'' ಎಂಬ ಇವರ ಹಾಡೊಂದು ವ್ಯಾಪಕವಾಗಿ ಜನಪ್ರಿಯವಾಗಿತ್ತು. ವೃತ್ತಿಯಲ್ಲಿ ಮಾಡೆಲ್ ಆಗಿರುವ ಲಿಜ್ ಲಾಜ್ ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ಕೂಡ ಹೌದು. ಪ್ರಯಾಣ.. ಆಹಾರ.. ಜೀವನ ಶೈಲಿಯ ಕುರಿತು ಇವರು ವ್ಲಾಗ್ ಮಾಡುತ್ತಿರುತ್ತಾರೆ. ಇನ್ನು ಜರ್ಮನ್‌ದವರಾದರು ಕೂಡ ಲಿಜ್ ಲಾಜ್‌ಗೆ ಭಾರತ ಅಂದರೆ ಪಂಚಪ್ರಾಣ. ಭಾರತದ ಸಂಸ್ಕ್ರತಿ ಮತ್ತು ಆಹಾರ ಇವರಿಗೆ ತುಂಬಾನೇ ಅಚ್ಚು ಮೆಚ್ಚು.

Paid Plot German Influencer LizLaz Exposes Offers to Tarnish Virat Kohli

ಇಂಥಾ ಲಿಜ್ ಲಾಜ್ ಅವರ ಫೋಟೊವೊಂದನ್ನು ಕೆಲ ದಿನಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಸೂಪರ್ ಸ್ಟಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೀವನಾಡಿ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಮೆಚ್ಚಿದ್ದರು. ಈ ವಿಷಯ ತುಂಬಾನೇ ಸದ್ದು ಮಾಡಿತ್ತು. ಆಘಾತಕಾರಿ ವಿಚಾರ ಅಂದರೆ ಈ ಚಿಕ್ಕ ವಿಚಾರವನ್ನೇ ಅಸ್ತ್ರವನ್ನಾಗಿಸಿಕೊಂಡು ವಿರಾಟ್ ಕೊಹ್ಲಿ ಜನಪ್ರಿಯತೆಗೆ ಧಕ್ಕೆ ತರಬೇಕೆಂಬ ಕೆಲಸವನ್ನು ಗುಂಪೊಂದು ವ್ಯವಸ್ಥಿತವಾಗಿ ಮಾಡುವ ಪ್ರಯತ್ನ ಮಾಡಿತ್ತು. ಈ ವಿಚಾರವನ್ನು ಖುದ್ದು ಲಿಜ್ ಲಾಜ್ ಈಗ ಹೇಳಿದ್ಧಾರೆ.

ಹೌದು, ''ಫಿಲ್ಮಿಮಂತ್ರ ಮೀಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಲಿಜ್ ಲಾಜ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಲಿಜ್‌ಲಾಜ್ ನನ್ನ ಫೋಟೊವನ್ನು ವಿರಾಟ್ ಕೊಹ್ಲಿ ಮೆಚ್ಚಿಕೊಂಡಿದ್ದೇ ತಡ, ಮಾಧ್ಯಮದ ಹಲವರು ನನಗೆ ಸಂಪರ್ಕ ಮಾಡಲು ಶುರು ಮಾಡಿದರು, ನಿರಂತರವಾಗಿ ಕರೆ ಮಾಡತೊಡಗಿದರು ಎಂದು ಹೇಳಿದ್ದಾರೆ.

ಹೀಗೆ ಕರೆ ಮಾಡಿದವರಲ್ಲಿ ಕೆಲವರು, ಕೊಹ್ಲಿ ಮಾಡದ ಇರುವ ತಪ್ಪುಗಳನ್ನು ಮಾಡಿದ್ದಾರೆ ಎಂದು ಆರೋಪ ಮಾಡುವಂತೆ ಒತ್ತಡ ಹೇರಿದರು, ಸುಳ್ಳು ಹೇಳಿಕೆ ನೀಡುವಂತೆ ದುಂಬಾಲು ಬಿದ್ದಿದ್ದರು ಎಂದು ಹೇಳಿರುವ ಲಿಜ್ ಲಾಜ್, ವಿರಾಟ್ ಕೊಹ್ಲಿ ವಿರುದ್ಧ ಸುಳ್ಳು ಆರೋಪ ಮಾಡಿದರೆ ಹಣ ಕೊಡುವುದಾಗಿ ಕೂಡ ಹೇಳಿದರು ಎಂದು ಹೇಳಿದ್ದಾರೆ.

ಅವರ ಹಣದ ಆಮಿಷಕ್ಕೆ ನಾನು ಒಳಗಾಗಲಿಲ್ಲ ಎಂದು ಹೇಳಿರುವ ಲಿಜ್‌ಲಾಜ್, ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟ್ ಆಟಗಾರ ಎಂದು ನಾನೇ ಹೇಳಿಕೊಂಡಿದ್ದೇನೆ, ಹೀಗಿರುವಾಗ ಹಣಕ್ಕಾಗಿ ನಾನ್ಯಾಕೇ ಕೊಹ್ಲಿ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡಲಿ ಎಂದು ಹೇಳಿದ್ದಾರೆ. ಹಣಕ್ಕಾಗಿ ನಾನು ಅಷ್ಟೊಂದು ಕೀಳು ಮಟ್ಟಕ್ಕೆ ಇಳಿಯುವ ವ್ಯಕ್ತಿಯಲ್ಲ ಎಂದಿದ್ಧಾರೆ.

Paid Plot German Influencer LizLaz Exposes Offers to Tarnish Virat Kohli

ಮುಂದುವರೆದು ನನ್ನ ಇಷ್ಟದ ಆಟಗಾರ ನನ್ನ ಪೋಸ್ಟ್ ಲೈಕ್ ಮಾಡಿದ್ದಕ್ಕೆ ನನಗೆ ತುಂಬಾ ಖುಷಿಯಾಗಿತ್ತು, ಇದೇ ವೇಳೆ ಚೂರು ನಾನು ಭಾವುಕಳಾಗಿದ್ದೆ ಎಂದು ಹೇಳಿರುವ ಲಿಜ್‌ಲಾಜ್, ಆದರೆ ಈ ರೀತಿ ಕರೆಗಳು ಬರುತ್ತವೆ, ಹಣದ ಆಮಿಷ ಒಡ್ಡುತ್ತಾರೆ ಎಂದು ನಾನು ಕನಸು ಮನಸಿನಲ್ಲಿಯೂ ಯೋಚನೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

English summary
"He's the Messi of Asia!" German star LizLaz shuts down attempts to buy her silence against Virat Kohli. Discover the truth behind the explosive allegations and why she chose integrity over a massive payday.
Read more about: cricket virat kohli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X