ಲಿಮಿಟ್ ಮೀರಿದ 'ಪಾರ್ವತಿ' ಪಾತ್ರ ಮಾಡಿದ್ದ ನಟಿ ; ಅರೆಬೆತ್ತಲಾದ 'ಲೊಡ್ಡೆ' ಚಿತ್ರದ ನಾಯಕಿ..!

ಇದು ''ರಂಗೀನ್'' ಲೋಕ. ಇಲ್ಲಿ ಎಲ್ಲವೂ ''ಕಲರ್ ಫುಲ್'' . ಈ ''ಕಲರ್ ಫುಲ್'' ಪ್ರಪಂಚದಲ್ಲಿ ಭದ್ರವಾಗಿ ''ಕಾಲೂರಬೇಕು'' ಅಂದರೆ, ಸಾಧ್ಯವಾದಷ್ಟು ''ಕಡಿಮೆ ಬಟ್ಟೆ''ಯನ್ನ ಧರಿಸಬೇಕು, ''ಮೈಮಾಟ''ವನ್ನ ''ಪ್ರದರ್ಶನ''ಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ''ನಾಯಕಿ''ಯರಲ್ಲಿದೆ.

ಇನ್ನೂ ಇದು ''ಸೊಶಿಯಲ್ ಮೀಡಿಯಾ'' ಕಾಲ. ಈ ''5G'' ಕಾಲ ಘಟ್ಟದಲ್ಲಿ ಬಟ್ಟೆ ಬಿಚ್ಚುವುದು, ಫೋಟೊಗೆ ಪೋಸು ಕೊಡುವುದು, ಈಗೀಗ ತೀರಾ ''ಕಾಮನ್'' ಆಗಿ ಬಿಟ್ಟಿದೆ. ಎಲ್ಲವೂ ಶೀಘ್ರವಾಗಿಯೇ ಆಗಬೇಕೆಂಬ ''ಹುಂಬತನ''ದಲ್ಲಿ ಜನ ಕೂಡ ತಮ್ಮ ''ಬೆತ್ತಲೆ'' ರೂಪ ನೋಡಲು ಬಯಸುತ್ತಾರೆ ಎಂದು ''ತಪ್ಪು'' ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ''ಕುಕೃತ್ಯ''ಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ. ಇದಕ್ಕೆ ''ಆಕಾಂಕ್ಷಾ ಪುರಿ'' ಮತ್ತೊಂದು ಉದಾಹರಣೆ.

Lodde fame Akanksha Puri Shared Topless Photo

ಹೌದು, ಚಿತ್ರರಂಗಕ್ಕೆ ಬಂದು ''ಹತ್ತು'' ವರ್ಷವಾದರೂ, ಆರಕ್ಕೇರದ ಮೂರಕ್ಕಿಳಿಯದ ''ಆಕಾಂಕ್ಷಾ ಪುರಿ'', ''ಹೋಳಿ ಹಬ್ಬ''ದ ನೆಪದಲ್ಲಿ ''ಟಾಪ್ ಲೆಸ್'' ಪೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೈ ತುಂಬಾ ''ಕೆಂಪು'' ಬಣ್ಣವನ್ನ ಮೆತ್ತಿಕೊಂಡಿದ್ದಾರೆ. ಕೈಯಿಂದ ತನ್ನ ''ಖಾಸಗಿ ಅಂಗ''ಗಳನ್ನ ಮುಚ್ಚಿಕೊಂಡಿದ್ದಾರೆ.

ಆಕಾಂಕ್ಷಾ ಪುರಿಯ ಈ ''ಅವತಾರ'' ಸದ್ಯಕ್ಕೆ ಅನೇಕರನ್ನ ಕೆರಳಿಸಿದೆ. ಯಾಕೆಂದರೆ ಕಿರುತೆರೆಯಲ್ಲಿ ''ಪಾರ್ವತಿ''ಯ ಪಾತ್ರವನ್ನ ಮಾಡಿದವರು ಇವರು. ಅಂತಹ ''ಪವಿತ್ರ''ವಾದ ಪಾತ್ರವನ್ನ ಮಾಡಿದ ಆಕಾಂಕ್ಷಾ ಈಗ ಬಹುತೇಕ ''ಬೆತ್ತಲಾಗಿದ್ದಾರೆ''. ಹೀಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕಾಂಕ್ಷಾಗೆ ''ತಪರಾಕಿ''ಯನ್ನ ಹಾಕುತ್ತಿದ್ದಾರೆ. ನಿಮಗೇನಾದರೂ ''ನಾಚಿಕೆ ಮಾನ ಮರ್ಯಾದೆ'' ಇದೆಯಾ, ಇಲ್ಲವಾ ಎಂದು ಪ್ರಶ್ನೆಯನ್ನ ಕೇಳುತ್ತಿದ್ದಾರೆ. ನಿಮ್ಮಿಂದ ಇಂಥಹ ''ಚೀಪ್'' ಕೆಲಸವನ್ನ ನಿರೀಕ್ಷೆ ಮಾಡಿರಲಿಲ್ಲ ಎನ್ನುತ್ತಿದ್ದಾರೆ.

Lodde fame Akanksha Puri Shared Topless Photo

ಇನ್ನೂ ಸದ್ಯಕ್ಕೆ ಬೆತ್ತಲಾಗಿರುವ ಆಕಾಂಕ್ಷಾ, ಈ ಹಿಂದೆ ಅಂದರೆ ಬಿಗ್ ಬಾಸ್ ಸೀಸನ್ 13ರಲ್ಲಿ ''ಪರಾಸ್ ಛಾಬ್ರಾ'' ಜೊತೆ ಪ್ರೀತಿ ಪ್ರೇಮ ಪ್ರಣಯದ ವಿಚಾರಕ್ಕೆ ಸುದ್ದಿಯಾಗಿದ್ದರು. ಕೆಲ ಹೊತ್ತು ತಿರುಗಾಡಿದ ಇಬ್ಬರೂ ಆ ನಂತರ ದೂರವಾಗಿದ್ದರು. ಇನ್ನೂ ಗಾಯಕ ''ಮಿಕಾ ಸಿಂಗ್'' ಜೊತೆ ಇವರ ಹೆಸರು ಥಳುಕು ಹಾಕಿಕೊಂಡಿತ್ತು. ಆ ನಂತರ ಆ ''ಸಂಬಂಧ'' ಕೂಡ ''ಎಕ್ಕುಟ್ಟಿ'' ಹೋಯಿತು. ತನ್ನ ವ್ಯೆಯಕ್ತಿಕ ಬದುಕಿನಲ್ಲಾದ ಈ ''ಲವ್ ಫೇಲ್ಯೂರ್'' ಗಳಿಂದ ಆಕಾಂಕ್ಷಾ ''ಮಾನಸಿಕ ಸ್ಥಿಮಿತ'' ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯೇ ಈ ಫೋಟೋಗಳು ಎನ್ನುವ ಅಭಿಪ್ರಾಯವನ್ನ ಕೂಡ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೇ ''ಟಾಪ್ ಲೆಸ್'' ಆಗುವ ಮೂಲಕ, ''ಟಾಕ್ ಆಪ್ ದಿ ಟೌನ್'' ಆಗಿರುವ ಈ ಆಕಾಂಕ್ಷಾ ಒಂದು ದಶಕದ ಹಿಂದೆ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ''ಕೋಮಲ್ ಕುಮಾರ್'' ಅಭಿನಯದ ''ಲೊಡ್ಡೆ'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನ ನಿರ್ವಹಿಸಿದ್ದರು. ಅದೇ ಕೊನೆ, ''ಕನ್ನಡ ಚಿತ್ರರಂಗಕ್ಕೆ'' ಆಕಾಂಕ್ಷಾ ಮತ್ತೆ ''ಮರಳಿ'' ಬರಲೇ ಇಲ್ಲ.

ಇಂಥಹ ಆಕಾಂಕ್ಷಾ ಸದ್ಯಕ್ಕೆ ''ಆಲ್ಬಂ'' ಹಾಡುಗಳಿಗೆ ''ಸೊಂಟ'' ಬಳುಕಿಸುವುದನ್ನೇ ''ಫುಲ್ ಟೈಮ್'' ಕೆಲಸವನ್ನಾಗಿಸಿಕೊಂಡಿದ್ದಾರೆ. 07 ವರ್ಷಗಳಲ್ಲಿ 15 ಹಾಡುಗಳಿಗೆ ಹೆಜ್ಜೆಯನ್ನ ಹಾಕಿದ್ದಾರೆ. ಒಟ್ನಲ್ಲಿ ಸೆಲೆಬ್ರೆಟಿಗಳು ಏನ್ ಮಾಡಿದ್ರೂ ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ತೊಟ್ಟರೂ ಸುದ್ದಿ, ಬಿಟ್ಟರೂ ಸುದ್ದಿ. ಇದಕ್ಕೆ ಆಕಾಂಕ್ಷಾ ಪುರಿ ಮತ್ತೊಂದು ಉದಾಹರಣೆ.

More from Filmibeat

English summary
Lodde Fame Actress Akanksha Puri Shared Topless Photo. We didn't expected this from you Says Angry Users
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X