twitter
    For Quick Alerts
    ALLOW NOTIFICATIONS  
    For Daily Alerts

    'ರಾಕೆಟ್ರಿ' ಸಿನಿಮಾ ವೀಕ್ಷಿಸಿ ವಿಜ್ಞಾನಿ ನಂಬಿ ನಾರಾಯಣನ್‌ಗೆ ಗೌರವ ಸಲ್ಲಿಸಿದ ಸಂಸದರು

    |

    ದೇಶ ಹೆಮ್ಮೆಪಡಬೇಕಾಗಿದ್ದ ವಿಜ್ಞಾನಿಯೊಬ್ಬರನ್ನು ದೇಶದ್ರೋಹಿ ಎಂದು ಆರೋಪಿಸಿ ಹಲವು ವರ್ಷ ಚಿತ್ರಹಿಂಸೆ ನೀಡಲಾದ ಘಟನೆಯನ್ನು ಆಧರಿಸಿ ಆರ್.ಮಾಧವನ್ ನಿರ್ಮಿಸಿರುವ 'ರಾಕೆಟ್ರಿ' ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿ ಚರ್ಚೆ ಹುಟ್ಟುಹಾಕಿತ್ತು.

    ಇಸ್ರೊ ವಿಜ್ಞಾನಿ ನಂಬಿ ನಾರಾಯಣ್ ಅವರನ್ನು ನ್ಯಾಯಾಲಯ ನಿರ್ದೋಷಿಯೆಂದು ತೀರ್ಪು ನೀಡಿ, ಕೇರಳ ಸರ್ಕಾರವು ಅವರಿಗೆ ಕೋಟ್ಯಂತರ ಹಣದ ಪರಿಹಾರ ನೀಡಬೇಕೆಂದು ಆದೇಶಿಸಿತ್ತಾದರೂ ನಂಬಿ ನಾರಾಯಣ್ ಅನುಭವಿಸಿದ್ದ ನೋವು ಯಾತನೆ ಹೆಚ್ಚಿನ ಜನಕ್ಕೆ ಗೊತ್ತಾಗಿರಲಿಲ್ಲ.

    ದೆಹಲಿಯಲ್ಲಿ ಸಂಸದರಿಗೆ 'ವಿಕ್ರಾಂತ್ ರೋಣ' ವಿಶೇಷ ಶೋದೆಹಲಿಯಲ್ಲಿ ಸಂಸದರಿಗೆ 'ವಿಕ್ರಾಂತ್ ರೋಣ' ವಿಶೇಷ ಶೋ

    ಆದರೆ ಮಾಧವನ್ ಅದೇ ವಿಷಯವಾಗಿ ಸಿನಿಮಾ ನಿರ್ದೇಶಿಸಿ, ಸ್ವತಃ ಅವರೇ ನಂಬಿ ನಾರಾಯಣ್ ಪಾತ್ರದಲ್ಲಿ ನಟಿಸಿದ ಬಳಿಕ ನಂಬಿ ನಾರಾಯಣ್‌ರ ಕತೆ ಹೆಚ್ಚು ಜನಕ್ಕೆ ತಲುಪಿತು, ಆ ಬಗ್ಗೆ ಸತತ ಚರ್ಚೆಗಳಾದವು. ಇದೀಗ ಸಂಸತ್ ಸದಸ್ಯರು 'ರಾಕೆಟ್ರಿ' ಸಿನಿಮಾ ವೀಕ್ಷಿಸುವ ಮೂಲಕ ಇಸ್ರೊ ವಿಜ್ಞಾನಿ ನಂಬಿ ನಾರಾಯಣ್‌ಗೆ ಗೌರವ ಸಲ್ಲಿಸಿದ್ದಾರೆ.

    ಭಾರತದ ಹೆಮ್ಮೆಯ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನಾಧಾರಿತ 'ರಾಕೆಟ್ರಿ' ಸಿನಿಮಾವನ್ನು ಸಂಸದರಿಗಾಗಿ ಪ್ರದರ್ಶಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಿರಿಯ ಮುಖಂಡರು ಸಂಸದರ ಜೊತೆ 'ರಾಕೆಟ್ರಿ' ಸಿನಿಮಾ ವೀಕ್ಷಿಸಿದ್ದಾರೆ.

    ವಿಕಾಸ್ ಇಂಜಿನ್ ತಯಾರಿಸಿದ್ದ ನಂಬಿ ನಾರಾಯಣ್

    ವಿಕಾಸ್ ಇಂಜಿನ್ ತಯಾರಿಸಿದ್ದ ನಂಬಿ ನಾರಾಯಣ್

    ರಾಕೆಟ್ ಉಡಾವಣೆಗೆ ಬಳಸುವ ಮಹತ್ವದ ವಿಕಾಸ್ ಇಂಜಿನ್ ತಯಾರಿಸಿದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರು ಸಹ ಈ ವಿಶೇಷ ಪ್ರದರ್ಶನದ ವೇಳೆ ಹಿರಿಯ ನಾಯಕರು ಹಾಗೂ ಸಂಸದರ ಜೊತೆ ಪಾಲ್ಗೊಂಡಿದ್ದರು. ಈ ಶ್ರೇಷ್ಠ ಚಿತ್ರದ ಅಭಿನಯಕ್ಕಾಗಿ ನಾಯಕ ನಟ ಹಾಗೂ ನಿರ್ದೇಶಕರೂ ಆಗಿರುವ ಆರ್.ಮಾಧವನ್ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ಅಭಿನಂದಿಸಿದರು.

    ಹಿಂಸೆಯ ಚಿತ್ರಣ

    ಹಿಂಸೆಯ ಚಿತ್ರಣ

    ದೇಶಭಕ್ತ ವಿಜ್ಞಾನಿ ನಂಬಿ ನಾರಾಯಣನ್ ಅವರು ಸುಳ್ಳು ಆಪಾದನೆ ಎದುರಿಸಿ 1994 ರಿಂದ 1998 ರ ವರೆಗೆ ಅನುಭವಿಸಿದ ಹಿಂಸೆ, ಕೇರಳ ಪೊಲೀಸರು ನೀಡಿದ ಕಿರುಕುಳಗಳ ಕುರಿತು ಚಿತ್ರದಲ್ಲಿ ಹೇಳಲಾಗಿದೆ. ವಿಕಾಸ್ ಇಂಜಿನ್ ತಯಾರಿಸಿದ ಒಬ್ಬ ರಾಕೆಟ್ ಸೈನ್ಸ್ ವಿಜ್ಞಾನಿ ಭಾರತದ ವ್ಯವಸ್ಥೆಯಲ್ಲಿ ಪಟ್ಟ ಶ್ರಮದ ಬಗ್ಗೆ ಈ ಸಿನಿಮಾದಲ್ಲಿ ಅರ್ಥಪೂರ್ಣ ಚಿತ್ರಣವಿದೆ.

    ಪಾಕಿಸ್ತಾನಕ್ಕೆ ತಂತ್ರಜ್ಞಾನ ಮಾರಿದ ಆರೋಪ

    ಪಾಕಿಸ್ತಾನಕ್ಕೆ ತಂತ್ರಜ್ಞಾನ ಮಾರಿದ ಆರೋಪ

    ಹಲವು ಅವಮಾನ, ಹಿಂಸೆಯ ನಡುವೆಯೂ ಹೋರಾಡಿ ತಾವು ನಿರ್ದೋಷಿ ಎಂಬುದನ್ನು ಸಾಬೀತು ಮಾಡಿದ ನಂಬಿ ನಾರಾಯಣನ್, ದೇಶದ ಅತ್ಯುತ್ತಮ ಮೂರನೇ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪಡೆದವರು. ವಿದೇಶದಲ್ಲಿ ಹೆಚ್ಚಿನ ತರಬೇತಿ ಪಡೆದ ಬಳಿಕವು ಅಮೇರಿಕಾದ ನಾಸಾ ಆಫರ್ ತಿರಸ್ಕರಿಸಿ ಭಾರತಕ್ಕೆ ಬಂದು ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದವರು ನಂಬಿ ನಾರಾಯಣನ್. ಪಾಕಿಸ್ತಾನಕ್ಕೆ ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನು ಮಾರಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ನಂಬಿ ನಾರಾಯಣನ್ ಜೈಲುವಾಸ ಅನುಭವಿಸಬೇಕಾಯಿತು.

    Recommended Video

    ನವೆಂಬರ್ 1ಕ್ಕೆ ಕರುನಾಡಿ‌ನ ಪರಮಾತ್ಮನಿಗೆ ಕರ್ನಾಟಕ ರತ್ನ ಪ್ರಧಾನ | Puneeth Rajkumar | Basavaraj Bommai
    ಹೋರಾಡಿ ಗೆದ್ದ ನಂಬಿ ನಾರಾಯಣ್

    ಹೋರಾಡಿ ಗೆದ್ದ ನಂಬಿ ನಾರಾಯಣ್

    ಭಾರತದಲ್ಲಿ ಇಲ್ಲದ ಟೆಕ್ನಾಲಜಿಯನ್ನ ಮಾರಲು ಹೇಗೆ ಸಾಧ್ಯವಿದೆ..? ಎಂದು ನಂಬಿ ನಾರಾಯಣನ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಷಡ್ಯಂತ್ರದ ಹಿಂದೆ ಯಾರೇ ಇದ್ದರು ಅವರನ್ನ ಬಿಡಬಾರದು. ಇದು ದೇಶದ ಅತಿ ದೊಡ್ಡ ಸ್ಕಾಂಡಲ್. ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ ಅಧಿಕಾರಿಗಳನ್ನ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರು ಯಾರು ಎಂಬುದು ದೇಶಕ್ಕೆ ಗೊತ್ತಾಗಬೇಕು ಎಂಬುದು ನಂಬಿ ನಾರಾಯಣನ್ ಹೋರಾಟವಾಗಿದೆ. ರಾಕೆಟ್ರಿ ಸಿನಿಮಾ ವೀಕ್ಷಣೆ ಬಳಿಕ, ನಂಬಿ ನಾರಾಯಣನ್ ಅವರನ್ನ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.

    English summary
    Lokasabha MP's watch R Madhavan's Rocketry movie to give respect scientist Nambi Narayanan.
    Saturday, August 6, 2022, 17:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X