ಧೋನಿ ಆಪ್ತನ ಪ್ರೇಮಪಾಶದಲ್ಲಿ ಕೃತಿ ಸನೋನ್ ? ಲಂಡನ್ ಬೀದಿಯಲ್ಲಿ 4000ಕೋಟಿ ಒಡೆಯನ ಜೊತೆ 'ಪರಮ ಸುಂದರಿ'ಯ ರೊಮ್ಯಾಂಟಿಕ್ ವಾಕ್

ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ. ಇಂತಹ ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ.

ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಆದರೆ, ಇದು ಬಣ್ಣದ ಲೋಕ. ಹಲವರು ತಮ್ಮ ಪ್ರೀತಿಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಅಲ್ಲಲ್ಲಿ ಕೆಲವರು ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೆಳುವ ಪ್ರಯತ್ನ ಮಾಡುತ್ತಾರೆ. ತಮ್ಮ ಪ್ರೇಮ ಕಥೆಯ ಮೇಲೆ ಮದುವೆಯ ಮುದ್ರೆಯನ್ನು ಒತ್ತುತ್ತಾರೆ. ಕೃತಿ ಸನೋನ್ ಕೂಡ ಈ ಪ್ರಯತ್ನ ಮಾಡುತ್ತಿದ್ದಾರಾ ಗೊತ್ತಿಲ್ಲ. ಆದರೆ, ಕೃತಿ ಸನೋನ್ ಅವರ ವ್ಯೆಯಕ್ತಿಕ ವಿಚಾರದ ಕುರಿತು ಹಲವರಲ್ಲಿ ಕುತೂಹಲ ಇದೆ. ಲಂಡನ್‌ನಲ್ಲಿ ಸುರಸುಂದರಾಂಗನ ಜೊತೆ ಕೃತಿ ಕೈ ಕೈ ಹಿಡಿದು ಓಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

London Love Kriti Sanon and Kabir Bahia s Hand-in-Hand Stroll Sends the Internet Into a Frenzy

ಹೌದು, ಕೃತಿ ಸನೋನ್.. ''ಹೀರೋಂಪತಿ'' ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಚೆಲುವೆ. ಮೊದಲ ಚಿತ್ರದಲ್ಲಿಯೇ ತನ್ನ ಅಂದ ಚೆಂದದಿಂದ ಕಣ್ಮನ ಸೆಳೆದ ಕೃತಿ ಸನೋನ್ ಆ ನಂತರ ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲೇರಿದರು.

ಇನ್ನೂ.. ಹಿಂದಿ ಉದ್ಯಮದಲ್ಲಿ ಲವ್ವು-ನೋವು ಎರಡು ತುಂಬಾ ಮಾಮೂಲು. ಇದಕ್ಕೆ ಕೈಗನ್ನಡಿ ಎಂಬಂತೆ ವೃತ್ತಿಯ ಆರಂಭದಲ್ಲಿಯೇ ತನ್ನ ಮೊದಲ ಚಿತ್ರ ''ಹೀರೋಪಂತಿ''ಯ ಹೀರೋ ಟೈಗರ್ ಶ್ರಾಫ್ ಜೊತೆ ಕೃತಿ ಹೆಸರು ಕೇಳಿ ಬಂದಿತ್ತು. ಆ ನಂತರ ಸುರಸುಂದರಾಂಗ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೃತಿ ಸನೋನ್ ಪ್ರೀತಿ ಮಾಡುತ್ತಿದ್ದಾರೆ ಎಂದು ಬಾಲಿವುಡ್‌ ಮಾತನಾಡಿಕೊಂಡಿತ್ತು.

ಆದರೆ ಅಷ್ಟರಲ್ಲಿ ಸುಶಾಂತ್ ಸಿಂಗ್ ರಜಪೂತ್ ನೇಣಿಗೆ ಕೊರಳೊಡ್ಡಿದರು. ಬಾರದ ಲೋಕಕ್ಕೆ ತೆರಳಿದರು. ಸುಶಾಂತ್ ಸಿಂಗ್ ರಜಪೂತ್ ಅವರ ಹಠಾತ್ ಅಗಲಿಕೆಯಿಂದ ಕೃತಿ ದಿಗ್ಬ್ರಾಂತರಾಗಿದ್ದರು. ಸುಶಾಂತ್ ನೆನೆದು ಅನೇಕ ಬಾರಿ ಕಣ್ಣೀರು ಕೂಡ ಹಾಕಿದ್ದರು.

ಈ ಕಾರಣಕ್ಕೆ ನಿಜವಾಗಿಯೂ ಕೃತಿ ಮತ್ತು ಸುಶಾಂತ್ ಪರಸ್ಪರ ಪ್ರೀತಿ ಮಾಡುತ್ತಿದ್ದರು ಎಂದು ಎಲ್ಲರು ಅಂದುಕೊಂಡರು. ಸುಶಾಂತ್ ಸಿಂಗ್ ರಜಪೂತ್ ಅಗಲಿಕೆಯ ನಂತರ ಕೃತಿ ಸನೋನ್ ಹೆಸರು ಪ್ರಭಾಸ್ ಸೇರಿ ಇನ್ನೂ ಮೂರು ನಾಲ್ಕು ಜನರ ಜೊತೆ ಕೇಳಿ ಬಂತು.

London Love Kriti Sanon and Kabir Bahia s Hand-in-Hand Stroll Sends the Internet Into a Frenzy

ಆದರೆ ಆ ಸುದ್ದಿಗಳೆಲ್ಲ ಅಂತೆ-ಸಂತೆಯಲ್ಲಿಯೇ ಮಾಯವಾದವು. ಈ ಕಾರಣಕ್ಕೆ ಕೃತಿ ಸದ್ಯಕ್ಕೆ ಏಕಾಂಗಿಯಾಗಿರಬಹುದು ಎಂದು ಹಲವರು ಅಂದುಕೊಂಡಿದ್ದರು. ಆದರೆ ಅಷ್ಟರಲ್ಲೇ ಕೃತಿ ಸನೋನ್ ಯುಕೆ ಮೂಲದ ಉದ್ಯಮಿ ಕಬೀರ್ ಬಹಿಯಾ ಜೊತೆ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎನ್ನುವ ಸುದ್ದಿ ಹೊರ ಬಿತ್ತು. ಇದಕ್ಕೆ ಪೂರಕವಾಗಿ ಕೃತಿ ಸನೋನ್ ಮತ್ತು ಕಬೀರ್ ಬಹಿಯಾ ಹಲವು ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದರು. ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ದುಬೈನಲ್ಲಿ ಕಬೀರ್ ಅವರ ಮನೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೃತಿ ಭಾಗಿಯಾದರು.ಕಬೀರ್ ಅವರ ಕುಟುಂಬದ ಸದಸ್ಯರ ಜೊತೆ ಖುಷಿ ಖುಷಿಯಾಗಿ ಕಾಲವನ್ನು ಕಳೆದರು.

ಇಂಥಾ ಕಬೀರ್ ಮತ್ತು ಕೃತಿ ಲಂಡನ್‌ನಲ್ಲಿ ಕೈ ಕೈ ಹಿಡಿದು ಸುತ್ತಾಡಿದ್ದಾರೆ. ಲಂಡನ್‌ನ ಬೀದಿಗಳಲ್ಲಿ ಜಗದ ಪರಿವೆ ಇಲ್ಲವೆಂಬಂತೆ ಬಿಂದಾಸ್ ಆಗಿ ಓಡಾಡಿದ್ದಾರೆ. ಇವರ ಈ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ. ಇಬ್ಬರ ಲವ್ ಸ್ಟೋರಿಗೆ ಇದಕ್ಕಿಂತ ಸಾಕ್ಷಿ ಬೇಕಾ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಅಷ್ಟೇ ಅಲ್ಲ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟ್ಟರ್) ವೇದಿಕೆಗಳಲ್ಲಿ #KritiKabir ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಕೃತಿ ಸನೋನ್ ಅವರ ವೈಯಕ್ತಿಕ ಜೀವನದ ಸಂತೋಷವನ್ನು ಬಯಸುವ ಅಭಿಮಾನಿಗಳು ಹಾರ್ಟ್ ಎಮೋಜಿಗಳ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ . ಕೃತಿ ಸನೋನ್ ಅವರಿಗೆ ಸೂಕ್ತವಾದ ಜೋಡಿ ಸಿಕ್ಕಿದೆ ಎಂದು ಕೊಂಡಾಡುತ್ತಿದ್ದಾರೆ.


ಯಾರು ಈ ಕಬೀರ್ ಬಹಿಯಾ?

ಅಂದ್ಹಾಗೇ ಕೃತಿ ಸನೋನ್ ಹೃದಯ ಗೆದ್ದಿರುವ ಈ ಕಬೀರ್ ಬಹಿಯಾ ಮತ್ತು ಭಾರತ ತಂಡದ ಮಾಜಿ ಕ್ರಿಕೆಟ್ ಪ್ಲೇಯರ್ ಮತ್ತು ಕ್ಯಾಪ್ಟನ್ ಎಂ.ಎಸ್.ಧೋನಿ ನಡುವೆ ಗಳಸ್ಯ ಕಂಠಸ್ಯ ಸ್ನೇಹ ಇದೆ.

London Love Kriti Sanon and Kabir Bahia s Hand-in-Hand Stroll Sends the Internet Into a Frenzy

ಕೇವಲ ಎಂ.ಎಸ್.ಧೋನಿ ಮಾತ್ರ ಅಲ್ಲ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯಗೆ ಕೂಡ ಕಬೀರ್ ಬಹಿಯಾ ಅತ್ಯಾಪ್ತರು. ಇನ್ನೂ ಕ್ರೀಡೆ ಅಂದರೆ ಇವರಿಗೆ ಅಚ್ಚು ಮೆಚ್ಚು.

ಯುಕೆ ಅಲ್ಲಿ ಸೌತ್ ಹಾಲ್ ಟ್ರಾವೆಲ್ಸ್‌ ಹೆಸರಿನಲ್ಲಿ ಇವರದ್ದೊಂದು ಟ್ರಾವೆಲ್ ಏಜೆನ್ಸಿ ಇದೆ. ಇವರ ತಂದೆ ಕುಲ್ಜಿಂದರ್ ಬಹಿಯಾ ಯುಕೆ ಅಲ್ಲಿರುವ ಕೋಟ್ಯಾಧಿಪತಿಗಳಲ್ಲಿ ಒಬ್ಬರು.ಒಂದು ಮೂಲದ ಪ್ರಕಾರ ಇವರ ಒಟ್ಟು ಆಸ್ತಿ 4000 ಕೋಟಿ.


ಇಬ್ಬರ ನಡುವೆ ಇರುವ ವಯಸ್ಸಿನ ಅಂತರ

ಕಬೀರ್ ಬಹಿಯಾ ಮತ್ತು ಕೃತಿ ಸನೋನ್ ಮದುವೆಯಾಗುತ್ತಾರಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಇವರ ಇಬ್ಬರ ನಡುವೆ ಇರುವ ವಯಸ್ಸಿನ ಅಂತರದ ಕುರಿತು ಕೂಡ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.

ಯಾಕೆಂದರೆ ಕಬೀರ್ ಅವರಿಗಿಂತ ಕೃತಿ ಸನೋನ್ ವಯಸ್ಸಿನಲ್ಲಿ ದೊಡ್ಡವರು. ಕೃತಿಗೆ ಈಗ 35 ವರ್ಷವಾದರೆ, ಕಬೀರ್ ಗೆ 26ರ ಹರೆಯ. ಇಬ್ಬರ ನಡುವೆ 9 ವರ್ಷಗಳ ಅಂತರ ಇದೆ. ಈ ಕಾರಣಕ್ಕೆ ತಮಗಿಂತ ಒಂಬತ್ತು ವರ್ಷ ಚಿಕ್ಕವನ ಜೊತೆ ಸಪ್ತಪದಿಯನ್ನು ಕೃತಿ ತುಳಿಯುತ್ತಾರಾ ಎನ್ನುವ ಪ್ರಶ್ನೆ ಕೂಡ ಸದ್ಯ ಅನೇಕರಲ್ಲಿದೆ. ಸದ್ಯ ಕೃತಿ ಸನೋನ್ ಮತ್ತು ಕಬೀರ್ ಬಹಿಯಾ ಅವರ ಲಂಡನ್ ವಿಡಿಯೋ ವೈರಲ್ ಆಗಿದ್ದು ಕಬೀರ್ ಜೊತೆಗಿನ ತಮ್ಮ ಸಂಬಂಧವನ್ನು ಕೃತಿ ಅಧಿಕೃತಗೊಳಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Kriti Sanon Spotted with her Boyfriend Kabir in London
byu/bollyfanboi inBollyBlindsNGossip

More from Filmibeat

English summary
Kriti Sanon and Kabir Bahia spotted together in London! See the cozy pictures and video of the rumored couple that has fans convinced. Read the latest updates.
Read more about: kriti sanon love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X