ರೆಡ್ ಕಾರ್ಪೆಟ್ ಮೇಲೆ ಈ ಹಿಂದೆ ಸೀರೆ ಧರಿಸಿ ಹೆಜ್ಜೆ ಹಾಕಿದ್ದ ಬಾಲಿವುಡ್ ನಟಿಯರು ಇವರೇ ನೋಡಿ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಅದ್ಧೂರಿ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತದಿಂದ ಹಲವು ತಾರೆಯರು ಭಾಗಿಯಾಗಿದ್ದಾರೆ. ನಿನ್ನೆಯಿಂದಲೇ ( ಮೇ17) ಆರಂಭವಾಗಿರುವ ಕಾನ್‌ ಚಿತ್ರೋತ್ಸವ ಮೇ 28 ರವರೆಗೂ ನಡೆಯಲಿದೆ. ಈಗಾಗಲೇ ಹಲವು ತಾರೆಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

ಕೊರೊನಾ ಹಿನ್ನೆಲೆಯಿಂದ ಕಳೆದ ಎರಡು ವರ್ಷಗಳಿಂದ ಕಾನ್‌ ಚಿತ್ರೋತ್ಸವವನ್ನು ಅದ್ಧೂರಿಯಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಬಹಳ ಅದ್ಧೂರಿಯಾಗಿ ಮಾಡಲಾಗುತ್ತಿದ್ದು, ಸಿನಿಮಾ ತಾರೆಯರು ಕೂಡ ವಿಭಿನ್ನ ಶೈಲಿಯ ಡ್ರೆಸ್‌ಗಳಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿವುದರ ಜೊತೆಗೆ ರೆಟ್ರೋ ಲುಕ್‌ನಲ್ಲಿ ಬ್ಲಾಕ್‌ ಅಂಡ್ ಗೋಲ್ಡ್‌ ಸ್ಯಾರಿಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಇದೇ ರೀತಿ ಈ ಹಿಂದೆ ಬಿ ಟೌನ್‌ ಯಾವ ಯಾವ ನಟಿಯರು ಕಾನ್‌ ಚಿತ್ರೋತ್ಸವದಲ್ಲಿ ಬೆರಗುಗೊಳಸುವಂತಹ ಸ್ಯಾರಿ ಧರಿಸಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದರೂ ಎಂಬುವವರ ಪಟ್ಟಿ ಈ ಕೆಳಗೆ ಇದೆ. ಬಿ ಟೌನ್‌ ಹಲವು ನಟಿಯರು ತಮ್ಮ ವೈರೆಟಿ ಡಿಸೈನ್ ಸ್ಯಾರಿಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಸೋನಂ ಕಪೂರ್

ಸೋನಂ ಕಪೂರ್

ಪತಿ ಆನಂದ್ ಅಹುಜಾ ಅವರೊಂದಿಗೆ ವಿವಾಹವಾಗಿ ಮೊದಲ ಮಗುವಿನ ನೀರಿಕ್ಷೆಯಲ್ಲಿರುವ ನಟಿ ಸೋನಂ ಕಪೂರ್ 2014 ರಲ್ಲಿ ನಡೆದ ಕಾನ್‌ ಚಿತ್ರೋತ್ಸವದಲ್ಲಿ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಎಲ್ಲರ ಗಮನ ಸೆಳೆದಿದ್ದರು.

ಕಂಗನಾ ರನೌತ್

ಕಂಗನಾ ರನೌತ್

ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ಕಂಗನಾ ರನೌತ್‌ ತಮ್ಮ ಮುಂಬರುವ ಚಿತ್ರ ಧಾಕಡ್ ಮೇ 20 ರಂದು ರಿಲೀಸ್ ಆಗುತ್ತಿದೆ, ಈ ಹಿನ್ನಲೆ ಸಿನಿಮಾದ ಪ್ರಚಾರದಲ್ಲಿ ನಟಿ ಕಂಗನಾ ರನೌತ್ ಬ್ಯುಸಿಯಾಗಿದ್ದಾರೆ. ಕಂಗನಾ ಕೂಡ 2018 ರಲ್ಲಿ ಕಾನ್‌ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಸಬ್ಯಾಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದ ಕಪ್ಪು ಸೀರೆಯನ್ನು ಧರಿಸಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದರು.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

2022 ರ ಕಾನ್ ಚಿತ್ರೋತ್ಸವದಲ್ಲಿ ಮುಖ್ಯ ತೀರ್ಪುಗಾರರ ಸದಸ್ಯರಲ್ಲಿ ಒಬ್ಬರಾಗಿರುವ ನಟಿ ದೀಪಿಕಾ ಪಡುಕೋಣೆ ನಿನ್ನೆ ( ಮೇ 17) ರಂದು ಬ್ಲಾಕ್ ಅಂಡ್ ಗೋಲ್ಡ್ ಸ್ಯಾರಿ ಧರಿಸಿ ರೆಟ್ರೋ ಲುಕ್‌ನಲ್ಲಿ ಮಿಂಚಿದ್ದರು. ಈ ಮೊದಲು ಕೂಡ ದೀಪಿಕಾ 2010 ರಲ್ಲಿ ರೋಹಿತ್ ಬಾಲ್‌ ವಿನ್ಯಾಸಗೊಳಿಸಿದ್ದ ಗೋಲ್ಡ್ ಅಂಡ್ ವೈಟ್ ಸ್ಯಾರಿ ಧರಿಸಿ ಹೆಜ್ಜೆ ಹಾಕಿದ್ದರು.

ಐಶ್ವರ್ಯ ರೈ

ಐಶ್ವರ್ಯ ರೈ

2022ರ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿರುವ ನಟಿ ಐಶ್ವರ್ಯಾ ರೈ. ಈ ಮೊದಲು 2013 ರಲ್ಲಿ ತರುಣ್ ತಹಿಲಿಯಾನಿ ವಿನ್ಯಾಸಗೊಳಸಿದ್ದ ಹೊಳೆಯುವ ಗೋಲ್ಡ್‌ ಸೀರೆಯನ್ನು ಧರಿಸಿ ರೆಡ್ ಕಾರ್ಪೆಟ್‌ ಮೇಲೆ ನಡೆದು ಎಲ್ಲರ ಗಮನ ಸೆಳೆದಿದ್ದರು. ಈ ಬಾರಿ ಕೂಡ ವಿಭಿನ್ನ ಡಿಸೈನರ್ ಡ್ರೆಸ್‌ಗಳನ್ನು ಧರಿಸುವ ಮೂಲಕ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಲಿದ್ದಾರೆ.

ವಿದ್ಯಾ ಬಾಲನ್

ವಿದ್ಯಾ ಬಾಲನ್

ಬಾಲಿವುಡ್‌ನ ಹಾಟ್ ಬ್ಯೂಟಿಯಾಗಿರುವ ನಟಿ ವಿದ್ಯಾ ಬಾಲನ್‌ ಕೂಡ ಕಾನ್ ಚಲನಚಿತ್ರೋತ್ಸವದಲ್ಲಿ ಮಿಂಚಿದ್ದರು. 2013ರಲ್ಲಿ ಸಬ್ಯಾಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದ ಸೀರೆಯಲ್ಲಿ ನಟಿ ಕಂಗೊಳಿಸಿದ್ದರು. ಅಲ್ಲದೆ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಮೂಲಕ ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸಿದ್ದರು.

ಡಯಾನ ಪೆಂಟಿ

ಡಯಾನ ಪೆಂಟಿ

ಬಾಲಿವುಡ್‌ನಲ್ಲಿ 'ದಿ ಸ್ಟೋರಿ ಆಫ್ ಪೋಖ್ರಾನ್‌'ನಂತಹ ಸಿನಿಮಾಗಳಲ್ಲಿ ನಟಿಸಿರುವ ನಟಿ ಡಯಾನ ಪೆಂಟಿ ಕೂಡ 2019 ರಲ್ಲಿ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ್ದ ವೈಟ್‌ ಸೀರೆಯನ್ನು ಧರಿಸಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದರು.

More from Filmibeat

English summary
Look At The Bee Town Actress Who Were Previously Seen Wearing Saree On The Red Carpet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X