ಡಿವೋರ್ಸ್ ಆಗಿದೆಯಷ್ಟೇ, ಆದರೆ ನನಗೆ ನನ್ನ ಇಬ್ಬರೂ ಪತ್ನಿಯರು ಮುಖ್ಯ ; ಗೌರಿ ಕೂಡ ಮುಖ್ಯ - ಆಮಿರ್ ಖಾನ್

ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.

ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ. ವಿಶೇಷ ಅಂದರೆ ವಿಚ್ಛೇದನ ಪಡೆದ ಮೇಲೆ ಕೂಡ ಇಲ್ಲಿ ಅನೇಕರು ದಿಕ್ಕು ಬದಲಿಸುವುದಿಲ್ಲ.

Love at 60 amp amp Beyond Aamir Khan on Gauri Spratt and Why His Ex-Wives Are Still Family

ಬದಲಿಗೆ ನಾವು ಈಗ ಗಂಡ-ಹೆಂಡ್ತಿಯಲ್ಲ ಬದಲಿಗೆ ಸ್ನೇಹಿತರು ಮಾತ್ರ ಎಂದು ಹೇಳುತ್ತಲೇ ಜೊತೆ ಜೊತೆಯಾಗಿ ಓಡಾಡುತ್ತಾರೆ. ಮಾಜಿ ಗಂಡ ಅಥವಾ ಹೆಂಡ್ತಿಯ ಎದುರೇ ಮತ್ತೊಬ್ಬರನ್ನು ಪ್ರೀತಿಸಲು ಶುರು ಮಾಡುತ್ತಾರೆ. ಹಳೆಯ ಸಂಗಾತಿಗೆ ತಮ್ಮ ಹೊಸ ಗೆಳೆಯ ಅಥವಾ ಗೆಳತಿಯ ಪರಿಚಯವನ್ನು ಮಾಡಿಸಿ ನೆಮ್ಮದಿಯಾಗಿ ಬದುಕುತ್ತಾರೆ. ಉದಾಹರಣೆಗೆ ಆಮಿರ್ ಖಾನ್.

ಹೌದು, ಎಲ್ಲರಿಗೆ ಗೊತ್ತಿರುವಂತೆ ಆಮಿರ್ ಖಾನ್ ಸದ್ಯ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಜೊತೆ ಪ್ರೇಮ ಗೀತೆ ಹಾಡುತ್ತಾ ನೆಮ್ಮದಿಯಾಗಿದ್ದಾರೆ. ಹಾಗಂಥ ಆಮಿರ್ ಖಾನ್ ಹಳೆಯ ಹೆಂಡ್ತಿಯರ ಸಾಂಗತ್ಯವನ್ನು ಬಿಟ್ಟಿಲ್ಲ. ತಮ್ಮ ಇಬ್ಬರು ಪತ್ನಿಯರಾದ ರೀನಾ ದತ್ತ, ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ್ದರೂ ಕೂಡ ಆತ್ಮೀಯತೆ ಹಾಗೇ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ಹೊಸ ಪ್ರೇಯಸಿ ಗೌರಿ ಮತ್ತು ತಮ್ಮ ಹಳೆಯ ಹೆಂಡ್ತಿಯರಾದ ರೀನಾ ದತ್ತ ಮತ್ತು ಕಿರಣ್ ರಾವ್ ಅವರ ಜೊತೆ ಹಬ್ಬ ಹರಿದಿನಗಳನ್ನು ಆಮಿರ್ ಖಾನ್ ಆಚರಿಸುತ್ತಾರೆ. ಮೂರು ಜನರ ಜೊತೆ ಸುತ್ತಾಡಲು ತೆರಳುತ್ತಾರೆ.

ಇಂಥಾ ಆಮಿರ್ ಖಾನ್ ಸದ್ಯ ಮತ್ತೊಮ್ಮೆ ತಮ್ಮ ಇಬ್ಬರು ಮಾಜಿ ಪತ್ನಿಯರ ಕುರಿತು ಮಾತನಾಡಿದ್ದಾರೆ. ನಾನು ಮತ್ತೆ ಲವ್ವಲ್ಲಿ ಬೀಳುತ್ತೇನೆ ಎನ್ನುವ ನಂಬಿಕೆ ನನಗೆ ಇರಲಿಲ್ಲ ಎಂದಿದ್ದಾರೆ. ನಾವು ಬೇರೆ ಬೇರೆಯಾದರು ಕೂಡ ನಾವೆಲ್ಲರು ಒಂದೇ ಎಂದು ಕೂಡ ಹೇಳಿದ್ದಾರೆ.

Love at 60 amp amp Beyond Aamir Khan on Gauri Spratt and Why His Ex-Wives Are Still Family

ಈ ಕುರಿತು ''ಹಿಂದೂಸ್ತಾನ್ ಟೈಮ್ಸ್‌''ನ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಮಾತನಾಡಿರುವ ಆಮಿರ್ ಖಾನ್, ನಾವು ಗಂಡ-ಹೆಂಡ್ತಿ ಎನ್ನುವುದಕ್ಕಿಂತ ನಾವೆಲ್ಲರೂ ಒಳ್ಳೆಯ ಮನುಷ್ಯರು ಎಂದು ಹೇಳಿದ್ದಾರೆ. ನಮ್ಮ ಬಾಂಧವ್ಯವೇ ನನ್ನ ಈ ಮಾತುಗಳಿಗೆ ಸಾಕ್ಷಿ ಎಂದು ಹೇಳಿದ್ದಾರೆ. ನನ್ನ ಮೊದಲ ಪತ್ನಿ ರೀನಾ ದತ್ತಾ ತುಂಬಾನೇ ಒಳ್ಳೆಯ ವ್ಯಕ್ತಿ ಎಂದು ಹೇಳಿರುವ ಆಮಿರ್ ಖಾನ್, ಗಂಡ-ಹೆಂಡತಿಯಾಗಿ ನಮ್ಮ ಸಂಬಂಧ ಮುರಿದು ಬಿದ್ದಿರಬಹುದು, ಆದರೆ ಮನುಷ್ಯರಾಗಿ ನಾವಿನ್ನೂ ಹತ್ತಿರವಾಗಿದ್ದೇವೆ ಎಂದು ಹೇಳಿದ್ದಾರೆ. ನನ್ನ ಹೃದಯದಲ್ಲಿ ಅವರ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯಿದೆ. ನಾವು ಬೇರೆಯಾದಾಗ ಮನುಷ್ಯರಾಗಿ ದೂರವಾಗಲಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಎರಡನೇ ಪತ್ನಿ ಕಿರಣ್ ರಾವ್ ಕುರಿತು ಕೂಡ ಇದೇ ರೀತಿಯ ಮಾತುಗಳನ್ನಾಡಿರುವ ಆಮಿರ್ ಖಾನ್, ಕಿರಣ್ ರಾವ್ ಕೂಡ ಅದ್ಭುತ ವ್ಯಕ್ತಿತ್ವದ ಹೆಣ್ಣು ಎಂದು ಹೇಳಿದ್ದಾರೆ. ಬಾಯ್ತುಂಬ ತಮ್ಮ ಎರಡನೇ ಪತ್ನಿಯನ್ನು ಹೊಗಳಿದ್ದಾರೆ. ನಾವು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವು ಆದರೆ ನಾವು ಇನ್ನೂ ಕುಟುಂಬವಾಗಿಯೇ ಇದ್ದೇವೆ ಎಂದು ಹೇಳಿರುವ ಆಮಿರ್ ಖಾನ್, ನನ್ನ ಇಬ್ಬರು ಪತ್ನಿಯರಿಂದ ದೂರವಾಗುವಾಗ ನಾನು ನನ್ನ ಪೋಷಕರ ಜೊತೆ ಅವರ ಪೋಷಕರು ಜೊತೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ವಿಚ್ಚೇದನ ಆಗಿರಬಹುದಷ್ಟೇ ಆದರೆ ನಾನು ರೀನಾ, ಕಿರಣ್ ಮತ್ತು ಗೌರಿ ವಾಸ್ತವದಲ್ಲಿ ನಾವೆಲ್ಲರು ಒಂದು ಕುಟುಂಬ ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ತಮ್ಮ ಹೊಸ ಪ್ರೇಯಸಿ ಗೌರಿ ಬಗ್ಗೆಯೂ ಮಾತನಾಡಿರುವ ಆಮಿರ್ ಖಾನ್, ನಾನು ಕನಸು ಮನಸಿನಲ್ಲಿಯೂ ನನ್ನ 60ನೇ ವಯಸ್ಸಿನಲ್ಲಿ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳುತ್ತೇನೆ ಎಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ಬಹುಶಃ ಇನ್ಮುಂದೆ ನಾನು ಏಕಾಂಗಿಯಾಗಿ ಇರುತ್ತೇನೆ ಎಂದುಕೊಂಡಿದ್ದೆ. ಆದರೆ ಗೌರಿ ನನ್ನ ಬದುಕಿಗೆ ಬಂದರು ಎಂದು ಹೇಳಿರವ ಆಮಿರ್ ಖಾನ್, ಗೌರಿ ಬಂದ ನಂತರ ನನ್ನ ಬದುಕಿನಲ್ಲಿ ಶಾಂತಿ ನೆಲೆಸಿದೆ, ಸ್ಥಿರತೆ ಬಂದಿದೆ ಎಂದು ಹೇಳಿದ್ದಾರೆ. ರೀನಾ ದತ್ತಾ, ಕಿರಣ್ ರಾವ್ ಮತ್ತು ಗೌರಿ.. ಈ ಮೂವರು ಮಹಿಳೆಯರನ್ನು ಪಡೆಯಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೇ ಎಂದು ಹೇಳಿರುವ ಆಮಿರ್ ಖಾನ್ ನನ್ನ ಬದುಕಿನ ಮೇಲೆ ಈ ಮೂವರು ತುಂಬಾನೇ ಆಳವಾದ ಪ್ರಭಾವ ಬೀರಿದ್ದಾರೆ ಎಂದು ಕೂಡ ಹೇಳಿದ್ದಾರೆ.

More from Filmibeat

English summary
Hear Aamir Khan's candid confession: "I wasn't expecting it." The 60-year-old star discusses new girlfriend Gauri Spratt and his enduring bond with ex-wives.
Read more about: aamir khan divorce marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X