ಸಚಿನ್ ತೆಂಡೂಲ್ಕರ್ ಮುದ್ದಿನ ಮಗಳ ಜೊತೆ ಶುಭಮನ್ ಗಿಲ್ ಬ್ರೇಕಪ್, ಸಂಬಂಧ ಮುರಿದುಬೀಳಲು ಈ ನಟಿ ಕಾರಣ..?
ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಪ್ರೀತಿ ಎಂಬ ವಿಷಯಕ್ಕೆ ಅರ್ಥ ಇಲ್ಲದಂತಾಗಿದೆ. ಅಷ್ಟೇ ಅಲ್ಲ ಇನ್ನೂ ಕೆಲವರನ್ನು ನೋಡಿದಾಗ
ಪ್ರೀತಿಯೆಂಬುದು ಮರೆಯಾಗಿದೆ ಎಂಬ ಭಾವನೆ ಕೂಡ ಮೂಡುತ್ತೆ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಮನಸಾರೆ ಪ್ರೀತಿಸಿ ಆ ನಂತರ ದೂರವಾದ ಅನೇಕರು ಇದ್ದಾರೆ. ಈ ಸಾಲಿನಲ್ಲಿಗ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ಕೂಡ ಸೇರಿಕೊಂಡಿದ್ದಾರೆ ಎನ್ನುವ ಅನುಮಾನ ಅನೇಕರನ್ನು ಈಗ ಕಾಡುತ್ತಿದೆ.

ಹೌದು, ಅಸಲಿಗೆ ಶುಭ್‌ಮನ್ ಗಿಲ್ ಮತ್ತು ಸಾರಾ ಜೋಡಿ ಹಕ್ಕಿಗಳು ಎನ್ನುವ ಮಾತು ಇಂದು ನಿನ್ನೆಯದಲ್ಲ. ಅನೇಕ ದಿನಗಳಿಂದ ಕೇಳಿ ಬರುತ್ತಾನೇ ಇದೆ. ಇದಕ್ಕೆ ಪೂರಕವಾಗಿ ಇಬ್ಬರು ಕ್ಯಾಮರಾ ಕಣ್ಣಿನಲ್ಲಿ ಅನೇಕ ಬಾರಿ ಸೆರೆಯಾಗಿದ್ಧಾರೆ ಕೂಡ. ಆದರೆ ಈಗ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ನಡುವೆ ಇದ್ದ ಪ್ರೀತಿ ಮುರಿದು ಬಿದ್ದಿದೆ ಎನ್ನುವ ಸುದ್ದಿ ಹಬ್ಬಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಶುಭಮನ್ ಗಿಲ್ ಮತ್ತು ಸಾರಾ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ.
ಇನ್ನು ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡುತ್ತಿದ್ದಂತೆಯೇ ಇವರ ಇಬ್ಬರ ಸಂಬಂಧ ಮುರಿದು ಬಿದ್ದಿದ್ದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಕಾರಣ ಹುಡುಕುವ ಕೆಲಸ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅವನೀತ್ ಕೌರ್ ಮೇಲೆ ಅನೇಕರಿಗೆ ಅನುಮಾನ ಮೂಡಿದೆ.
ಹೌದು, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಡ್ಯಾನ್ಸ್ ಕೇ ಸೂಪರ್ ಸ್ಟಾರ್ಸ್, ಝಲಕ್ ದಿಖಲಾ ಜಾ, ಹೀಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಸ್ಫರ್ಧಿಯಾಗಿ ಕಾಣಿಸಿಕೊಂಡಿದ್ದ ಅವನೀತ್ ಕೌರ್ ಸದ್ಯ ಬಾಲಿವುಡ್‌ನಲ್ಲಿ ನಾಯಕಿಯಾಗಿ ನೆಲೆಯೂರುವ ಪ್ರಯತ್ನ ಮಾಡುತ್ತಿದ್ದಾರೆ.
ಮರ್ದಾನಿ, ಟಿಕು ವೆಡ್ಸ್ ಶೆರು, ಲವ್ ಕೀ ಅರೆಂಜ್ ಮ್ಯಾರೇಜ್, ಸೇರಿ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅವನೀತ್ ಕೌರ್ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಜೊತೆ ಮಿಷನ್ ಇಂಪಾಸಿಬಲ್‌ನಲ್ಲಿ ಕೂಡ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಇನ್ನೇನು ಈ ವರ್ಷ ತೆರೆಗೆ ಬರಲಿದೆ.
ಇಂಥಾ ಅವನೀತ್ ಕೌರ್ ಸದ್ಯ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ನಡುವೆ ಬಂದಿದ್ದಾರೆ ಎನ್ನುವ ವಾದವನ್ನು ಅನೇಕರು ಮಂಡಿಸುತ್ತಿದ್ದಾರೆ. ಇನ್ನು, ಮಾರ್ಚ್‌ನಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಕಣ್ತುಂಬಿಕೊಳ್ಳಲು ಅವನೀತ್ ಕೌರ್ ದುಬೈಗೆ ತೆರಳಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿದ್ದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಹುರಿದುಂಬಿಸಿದ್ದರು.
ಈ ಫೋಟೊಗಳನ್ನು ಕೂಡ ಹೆಕ್ಕಿ ತೆಗೆದಿರುವ ಅನೇಕರು ಶುಭಮನ್ ಗಿಲ್ ಮತ್ತು ಅವನೀತ್ ಕೌರ್ ಪ್ರೇಮಕಥೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎನ್ನುತ್ತಿದ್ದಾರೆ. ಇನ್ನು ಶುಭಮನ್ ಗಿಲ್ ಅವರ ಬರ್ತ್‌ಡೇಯಂದು ಅವನೀತ್ ಕೌರ್ ಶುಭ ಕೋರಿದ್ದರು. ಸಾಲದಕ್ಕೆ ಇದೇ ಸಮಯದಲ್ಲಿ ಲಂಡನ್‌ನಲ್ಲಿ ಫೋಟೊಗೆ ಅವನೀತ್ ಕೌರ್ ಮತ್ತು ಶುಭಮನ್ ಗಿಲ್ ಫೋಸ್ ಕೂಡ ನೀಡಿದ್ದರು.
ಇನ್ನು, ಅವನೀತ್ ಕೌರ್ ಆಗಾಗ ಭಾರತದ ಪಂದ್ಯಗಳನ್ನು ನೋಡಲು ಮೈದಾನಕ್ಕೆ ಹೋಗುತ್ತಾರೆ. ಈ ವಿಚಾರವನ್ನು ಗಮನಿಸಿರುವ ಅನೇಕರು ಈ ಹಿಂದೆ ಅವನೀತ್ ಕೌರ್ ಅವರನ್ನು ಟ್ರೋಲ್ ಮಾಡಿದ್ದರು. ಇನ್ನು ಕೆಲವರು ಅತ್ತಿಗೆ ಎಂದು ಕಾಲೆಳೆದಿದ್ದರು. ಇನ್ನು ಕೆಲವರು ಅವನೀತ್ ಕೌರ್ ಕ್ರಿಕೆಟಿಗರನ್ನು ಮೆಚ್ಚಿಸಲು ಅವರ ಗಮನವನ್ನು ಸೆಳೆಯಲು ಅವನೀತ್ ಕೌರ್ ಆಗಾಗ ಹೀಗೆ ಸ್ಟೇಡಿಯಂಗೆ ತೆರಳುತ್ತಾರೆ ಎಂದು ಕೂಡ ಕಾಮೆಂಟ್‌ಗಳನ್ನು ಮಾಡಿದ್ದರು.
ಶುಭಮನ್ ಗಿಲ್ ಮತ್ತು ಅವನೀತ್ ಕೌರ್ ನಡುವಿನ ಈ ಆತ್ಮೀಯತೆ, ಸಾರಾ ತೆಂಡೂಲ್ಕರ್ ಅವರನ್ನು ಕೆರಳಿಸಿದೆ. ಈ ಕಾರಣದಿಂದಾಗಿಯೇ ಶುಭಮನ್ ಗಿಲ್ ಜೊತೆ ಸಾರಾ ಸಂಬಂಧ ಮುರಿದುಕೊಂಡಿದ್ಧಾರೆ ಎನ್ನುವ ಅಭಿಪ್ರಾಯವನ್ನು ಸದ್ಯ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಶುಭಮನ್ ಗಿಲ್ ಮತ್ತು ಸಾರಾ ಅಲಿ ಖಾನ್ ಬ್ರೇಕಪ್ ವಿಚಾರದಿಂದ ಅವನೀತ್ ಕೌರ್ ಅವರನ್ನು ಮತ್ತೊಮ್ಮೆ ಟ್ರೋಲ್ ಮಾಡುತ್ತಿದ್ದಾರೆ.
ಅಂದ್ಹಾಗೇ ಅವನೀತ್ ಕೌರ್ ಅವರ ಹೆಸರು ಈ ಹಿಂದೆ ಕಿರುತೆರೆಯ ನಟ ರಾಘವ್ ಶರ್ಮಾ ಜೊತೆ ಕೇಳಿ ಬಂದಿತ್ತು. ಇಬ್ಬರು ಜೊತೆಯಲ್ಲಿ ಕೆಲಸ ಮಾಡಿರುವ ಹಿನ್ನೆಲೆ ಇಬ್ಬರು ಲವ್ವಲ್ಲಿ ಬಿದ್ದಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಈಗಲೂ ಕೂಡ ರಾಘವ್ ಶರ್ಮಾ ಮತ್ತು ಅವನೀತ್ ಕೌರ್ ಮದುವೆಯಾಗುತ್ತಾರೆ ಎನ್ನುವ ನಂಬಿಕೆ ಹಲವರಲ್ಲಿದೆ. ಆದರೆ, ತಮ್ಮ ಸಂಬಂಧದ ಬಗ್ಗೆ ಇಲ್ಲಿಯವರೆಗೆ ಅವನೀತ್ ಕೌರ್ ಆಗಲಿ ರಾಘವ್ ಶರ್ಮಾ ಆಗಲಿ ಮಾತನಾಡಿಲ್ಲ. ತಮ್ಮ ನಡುವೆ ಇರುವ ಕೇವಲ ಫ್ರೆಂಡ್‌ಶಿಫ್ ಮಾತ್ರ ಎಂದು ಕೂಡ ಹೇಳಿಲ್ಲ.
ಇನ್ನು ಶುಭಮನ್ ಗಿಲ್ ಮತ್ತು ಅವನೀತ್ ಕೌರ ಪರಿಚಯ ಆಗಲು ಇದೇ ರಾಘವ್ ಶರ್ಮಾ ಕಾರಣವೆನ್ನುವ ಮಾತು ಕೂಡ ಕೇಳಿ ಬರುತ್ತಿದೆ. ರಾಘವ್ ಶರ್ಮಾ ಮತ್ತು ಗಿಲ್ ಮೊದಲಿಂದ ಸ್ನೇಹಿತರು. ಇವರ ಸ್ನೇಹಿತರ ಬಳಗಕ್ಕೆ ಅವನೀತ್ ಕೌರ್ ಕೂಡ ಸೇರಿಕೊಂಡಿದ್ಧಾರೆ ಅಷ್ಟೇ ಇದರ ಹೊರತಾಗಿ ಅವನೀತ್ ಕೌರ್ ಮತ್ತು ಶುಭಮನ್ ಗಿಲ್ ನಡುವೆ ಬೇರೆ ಯಾವ ಸಂಬಂಧ ಇಲ್ಲ ಎನ್ನುವ ವಾದವನ್ನು ಕೂಡ ಅನೇಕರು ಸದ್ಯ ಮಾಡುತ್ತಿದ್ಧಾರೆ.
ಮತ್ತೊಂದೆಡೆ ಶುಭಮನ್ ಗಿಲ್ ಅವರ ಹೆಸರು ಈ ಹಿಂದೆ ಸೈಫ್ ಅಲಿ ಖಾನ್ ಮುದ್ದಿನ ಮಗಳು ಸಾರಾ ಅಲಿ ಖಾನ್ ಜೊತೆ ಕೂಡ ಕೇಳಿ ಬಂದಿತ್ತು. ಇನ್ನು ಹಿಂದೆ ಸಂದರ್ಶನವೊಂದರಲ್ಲಿ ಶುಭಮನ್ ಗಿಲ್ ಅವರಿಗೆ ನೀವು ಸಾರಾ ಅವರನ್ನು ಪ್ರೀತಿಸುತ್ತಿದ್ದೀರಾ ಎಂಬ ಪ್ರಶ್ನೆಯನ್ನು ನೇರವಾಗಿ ಕೇಳಲಾಗಿತ್ತು. ಈ ಪ್ರಶ್ನೆಗೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದ ಶುಭಮನ್ ಗಿಲ್ ಬಹುಶಃ ಮಾಡುತ್ತಿರಬಹುದು ಎಂಬ ಉತ್ತರವನ್ನು ನೀಡಿದ್ದರು. ನಾಚಿಕೊಂಡಿದ್ದರು.
ಆದರೆ ಶುಭಮನ್ ಗಿಲ್ ಮಾತನಾಡಿರುವುದು ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಅವರ ಬಗ್ಗೆನಾ ಅಥವಾ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ಅವರ ಕುರಿತಾ ಎಂದು ಇವರ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಇನ್ನು ಸಾರಾ ಅಲಿ ಖಾನ್ ಕೂಡ ಒಮ್ಮೆ ಎರಡು ಸೀರೆಯ ನಡುವೆ ಗೊಂದಲಕ್ಕೊಳಗಾಗುತ್ತಿದ್ದಾರೆ ಎಂದು ಹೇಳಿದ್ದರು.
ಇದರ ನಡುವೆ ಶುಭಮನ್ ಗಿಲ್ ಹೆಸರು ಕಿರುತೆರೆಯ ನಾಯಕಿ ರಿಧಿಮಾ ಪಂಡಿತ್ ಜೊತೆ ಕೂಡ ಥಳುಕು ಹಾಕಿಕೊಂಡಿತ್ತು. ಒಟ್ನಲ್ಲಿ ಸದ್ಯ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರ ಬ್ರೇಕಪ್ ಆಗಿದೆ, ಈ ಬ್ರೇಕಪ್‌ಗೆ ಅವನೀತ್ ಕೌರ್ ಕಾರಣ ಎಂದು ಸುದ್ದಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಮೂವರು ಕೂಡ ಮೌನ ಮುರಿದಿಲ್ಲ. ಪ್ರತಿಕ್ರಿಯೆಯನ್ನು ನೀಡಿಲ್ಲ. ಮುಂಬರುವ ದಿನಗಳಲ್ಲಿ ಈ ಅಂತೆ-ಕಂತೆಗಳಿಗೆಲ್ಲ ಶುಭಮನ್ ಗಿಲ್ ಅಥವಾ ಸಾರಾ ತೆಂಡೂಲ್ಕರ್ ಉತ್ತರ ಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











