ಲೂಡೊ ಟ್ರೆಲರ್ ಬಿಡುಗಡೆ: ಅಮೀರ್ ಖಾನ್ ಆದಿಯಾಗಿ ಹಲವರಿಂದ ಪ್ರಶಂಸೆ
ಹಿಂದಿ ಸಿನಿಮಾ ಟ್ರೇಲರ್ ಒಂದು ದೊಡ್ಡ ಮಟ್ಟಿನ ಸದ್ದು ಮಾಡುತ್ತಿದೆ, ಅದೇ 'ಲೂಡೊ' ಸಿನಿಮಾದ ಟ್ರೇಲರ್.
ಅನುರಾಗ್ ಬಸು ನಿರ್ದೇಶಿಸಿರುವ ಲೂಡೊ ಸಿನಿಮಾ, ಆಕ್ಷನ್, ಸಸ್ಪೆನ್ಸ್ ಹಾಗೂ ಹಾಸ್ಯ ತುಂಬಿದ ಕತೆ ಹೊಂದಿರುವುದು ಟ್ರೇಲರ್‌ನಿಂದಲೇ ತಿಳಿದು ಬರುತ್ತಿದೆ.
ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಕೆರಳುವಂತೆ ಟ್ರೇಲರ್ ಅನ್ನು ಡಿಸೈನ್ ಮಾಡಲಾಗಿದೆ. ಸಿನಿಮಾದ ಭಿನ್ನ-ಭಿನ್ನ ಪಾತ್ರಗಳು, ಆಕ್ಷನ್ ದೃಶ್ಯಗಳ ಝಲಕ್ ಅನ್ನು ಟ್ರೇಲರ್‌ನಲ್ಲಿ ನೀಡಲಾಗಿದೆ.

ಟ್ರೇಲರ್ ಬಗ್ಗೆ ನಟ ಅಮೀರ್ ಖಾನ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೀರ್ ಖಾನ್ ಮಾತ್ರವಲ್ಲದೆ ಟ್ರೇಲರ್ ಬಗ್ಗೆ ನೆಟ್ಟಿಗರು ಸಹ ಸಾಕಷ್ಟು ಸಂತಸ ವ್ಯಕ್ತಪಡಿಸಿದ್ದಾರೆ, ಹಾಗೂ ಸಿನಿಮಾ ನೋಡಲು ಕಾಯುತ್ತಿರುವುದಾಗಿ ಹೇಳಿದ್ದಾರೆ.
ನಟ ಅಮೀರ್ ಖಾನ್ ಸಹ ಟ್ವೀಟ್ ಮಾಡಿದ್ದು, 'ಅಬ್ಬಾ ಎಂಥಹಾ ಟ್ರೇಲರ್, ಇಡೀಯ ಚಿತ್ರತಂಡಕ್ಕೆ ಧನ್ಯವಾದಗಳು, ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದೇನೆ' ಎಂದಿದ್ದಾರೆ.
ಸಿನಿಮಾದಲ್ಲಿ ನಟ ಅಭಿಷೇಕ್ ಬಚ್ಚನ್, ರಾಜಕುಮಾರ್ ರಾವ್, ಪಂಕಜ್ ತ್ರಿಪಾಠಿ, ಆದಿತ್ಯ ರಾಯ್ ಕಪೂರ್, ಫಾತಿಮಾ ಸನಾ ಶೇಕ್, ಸಾನ್ಯಾ ಮಲ್ಹೋತ್ರಾ ಇನ್ನೂ ಹಲವರಿದ್ದಾರೆ. ಅಭಿಷೇಕ್, ರಾಜ್‌ಕುಮಾರ್ ರಾವ್ ಹಾಗೂ ಪಂಕಜ್ ತ್ರಿಪಾಠಿ ಪಾತ್ರಗಳು ಟ್ರೇಲರ್ ನಲ್ಲಿ ಗಮನ ಸೆಳೆಯುತ್ತಿವೆ.
ಭಿನ್ನ-ಭಿನ್ನ ವ್ಯಕ್ತಿಗಳು ಹಣ ಗಳಿಸಲು ಅಡ್ಡದಾರಿ ಹಿಡಿದು ಕೊನೆಗೆ ಒಂದೆಡೆ ಸೇರುವ ಕತೆಯನ್ನು ಲೂಡೊ ಸಿನಿಮಾ ಹೊಂದಿದೆ ಎಂಬುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.


Click it and Unblock the Notifications











