'ಸಲ್ಮಾನ್ ಖಾನ್ ರನ್ನ ಮದುವೆಯಾಗಿ', ಅಭಿಮಾನಿ ಪ್ರಶ್ನೆಗೆ ಸಲ್ಲು ಗರ್ಲ್ ಫ್ರೆಂಡ್ ಹೇಳಿದ್ದೇನು?

ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಮದುವೆ ಆಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವುದೆ. ಸಲ್ಲು ಮದುವೆಯಾವಾಗ ಎಂದು ತಲೆಕೆಡಿಸಿಕೊಂಡು ಸುಸ್ತಾಗಿರುವ ಅಭಿಮಾನಿಗಳು ಈಗ ಆ ಪ್ರಶ್ನೆ ಕೇಳುವುದನ್ನೆ ಬಿಟ್ಟಿದ್ದಾರೆ.

Recommended Video

ತಡರಾತ್ರಿ ಟ್ರ್ಯಾಕ್ಟರ್, ಎತ್ತಿನಗಾಡಿ ತುಂಬಿಸಿ ಕಳುಹಿಸಿದ ಸಲ್ಮಾನ್ ಖಾನ್..! | Salman Khan

ಆದರೀಗ ಅಭಿಮಾನಿಗಳು ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಅಂತಾನೆ ಖ್ಯಾತಿ ಗಳಿಸಿರುವ ರುಮೇನಿಯಾದ ಸುಂದರಿ ಲುಲಿಯಾ ವಂತೂರ್ ಬೆನ್ನುಬಿದ್ದಿದ್ದಾರೆ. "ಸಲ್ಮಾನ್ ಖಾನ್ ಅವರನ್ನು ಮದುವೆಯಾಗಿ", "ಯಾವಾಗ ಮದುವೆಯಾಗುತ್ತೀರಿ" ಎಂದು ಪ್ರಶ್ನಿಸುತ್ತಿದ್ದಾರೆ. ಇತ್ತೀಚಿಗೆ ಇಂಗ್ಲೀಷ್ ವೆಬ್ ಪೋರ್ಟಲ್ ಜೊತೆ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದ ಲುಲಿಯಾಗೆ ಅಭಿಮಾನಿಗಳು ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ಲುಲಿಯಾ ಹೇಳಿದ್ದೇನು ಗೊತ್ತಾ? ಮುಂದೆ ಓದಿ..

ಲುಲಿಯಾ ಜೊತೆ ಫಾರ್ಮ್ ಹೌಸ್ ನಲ್ಲಿ ಸಲ್ಮಾನ್ ಖಾನ್

ಲುಲಿಯಾ ಜೊತೆ ಫಾರ್ಮ್ ಹೌಸ್ ನಲ್ಲಿ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಸದ್ಯ ಲಾಕ್ ಡೌನ್ ಸಮಯವನ್ನು ಪನ್ವೆಲ್ ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಿದ್ದಾರೆ. ಅಂದ್ಹಾಗೆ ಸಲ್ಮಾನ್ ಜೊತೆ ಗರ್ಲ್ ಫ್ರೆಂಡ್ ಲುಲಿಯಾ ವಂತೂರ್ ಸಹ ಇದ್ದರೆ. ಲುಲಿಯಾ ಮತ್ತು ಸ್ನೇಹಿತರ ಜೊತೆ ಸಲ್ಮಾನ್ ಲಾಕ್ ಡೌನ್ ಸಮಯ ಕಳೆಯುತ್ತಿದ್ದಾರೆ.

'ಸಲ್ಮಾನ್ ಖಾನ್ ರನ್ನ ಮದುವೆಯಾಗಿ...'

'ಸಲ್ಮಾನ್ ಖಾನ್ ರನ್ನ ಮದುವೆಯಾಗಿ...'

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅಭಿಮಾನಿಯೊಬ್ಬ ಸಲ್ಮಾನ್ ಖಾನ್ ರನ್ನ ಮದುವೆಯಾಗಿ ಎಂದು ಹೇಳಿದ್ದಾರೆ. ಅಭಿಮಾನಿ ಪ್ರಶ್ನೆಗೆ ನಾಚಿಕೊಂಡ ಲುಲಿಯಾ ಎಲ್ಲರೂ ಇದೆ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಮದುವೆ ಬಗ್ಗೆ ತಾಯಿ ಯಾವಾಗಲು ಕೇಳುತ್ತಿರುತ್ತಾರೆ

ಮದುವೆ ಬಗ್ಗೆ ತಾಯಿ ಯಾವಾಗಲು ಕೇಳುತ್ತಿರುತ್ತಾರೆ

ಮದುವೆ ಬಗ್ಗೆ ನನ್ನ ತಾಯಿ ಯಾವಾಗಲು ಕೇಳುತ್ತಿರುತ್ತಾರೆ. ಆದ್ದರಿಂದ ನಾನು ನನ್ನ ತಾಯಿಯನ್ನು ಕೇಳಿದೆ ನಾನು ಸಂತೋಷವಾಗಿರಲು ನೀವು ಬಯಸುತ್ತೀರಾ? ಅಥವಾ ನಾನು ಮದುವೆಯಾಗಬೇಕೆಂದು ನೀವು ಬಯಸುತ್ತೀರಾ? ಎಂದು. ಯಾಕಂದ್ರೆ ನಾಳೆಯೆ ನಾನು ಮದುವೆ ಆಗಬಹುದು. ಆದರೆ ಸಂತೋಷವಾಗಿರಲು ಸಾಧ್ಯನಾ? ಆ ನಂತರ ನನ್ನ ತಾಯಿ ಮದುವೆ ಬಗ್ಗೆ ಪ್ರಶ್ನೆ ಮಾಡಿಲ್ಲ" ಎಂದು ಹೇಳಿದ್ದಾರೆ.

ಯಾರೊಂದಿಗೆ ಸಮಯ ಕಳೆಯುತ್ತೇವೆ ಎನ್ನುವುದು ಮುಖ್ಯ

ಯಾರೊಂದಿಗೆ ಸಮಯ ಕಳೆಯುತ್ತೇವೆ ಎನ್ನುವುದು ಮುಖ್ಯ

"ಯಾರೊಂದಿಗೆ ಸಂತೋಷವಾಗಿರುತ್ತಾವೆ, ಯಾರೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೇವೆ, ಯಾರೊಂದಿಗೆ ಉತ್ತಮ ಸಂಪರ್ಕ ಹೊಂದಿರುತ್ತೇವೆ ಎನ್ನುವುದು ಹೆಚ್ಚು ಮುಖ್ಯ" ಎಂದು ಹೇಳಿದ್ದಾರೆ. ಲುಲಿಯಾ ಉತ್ತರ, ಮದುವೆ ಆಗುವುದಕ್ಕಿಂತ ಸಲ್ಮಾನ್ ಜೊತೆ ಸಂತೋಷದ ಸಮಯ ಕಳೆಯುವುದೇ ಮುಖ್ಯ ಎನ್ನುವಂತಿದೆ.

ಸಲ್ಮಾನ್ ಗುಣಗಾನ ಮಾಡಿದ ಲುಲಿಯಾ

ಸಲ್ಮಾನ್ ಗುಣಗಾನ ಮಾಡಿದ ಲುಲಿಯಾ

ಸಂದರ್ಶನದಲ್ಲಿ ಲುಲಿಯಾ, ಸಲ್ಮಾನ್ ಖಾನ್ ಅವರನ್ನು ಹಾಡಿ ಹೊಗಳಿದ್ದಾರೆ. "ಸಲ್ಮಾನ್ ಸಹಾಯದ ಗುಣ ಹೊಂದಿದ್ದಾರೆ ಮತ್ತು ಹೆಚ್ಚು ಕೆಲಸದ ಹೆಚ್ಚು ಆಸಕ್ತಿ ಇರುವ ವ್ಯಕ್ತಿ" ಎಂದು ಹೇಳಿದ್ದಾರೆ. "ಸಲ್ಮಾನ್ ಅಂತಹ ವ್ಯಕ್ತಿಯನ್ನು ನಾನು ಯಾವತ್ತು ಭೇಟಿ ಮಾಡಿಲ್ಲ. ಅವರು ನಿಸ್ವಾರ್ಥವಾಗಿ ಮಾಡುವ ಕೆಲಸಗಳನ್ನು ನಾನು ಪ್ರೀತಿಸುತ್ತೇನೆ. ಜನ ಯಾಕೆ ಅವರನ್ನು ತುಂಬಾ ಪ್ರೀತಿಸುತ್ತಾರೆ ಎನ್ನುವುದು ಅವರನ್ನು ನೋಡಿದ ನಂತರ ನನಗೆ ಗೊತ್ತಾಯಿತು" ಎಂದು ಲುಲಿಯಾ ಹೇಳಿದ್ದಾರೆ.

More from Filmibeat

English summary
Lulia Vantur speak about marriage with Actor Salman Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X