For Quick Alerts
  ALLOW NOTIFICATIONS  
  For Daily Alerts

  ಕಲೆಕ್ಷನ್: ಬಾಕ್ಸಾಫೀಸ್ ನಲ್ಲೂ ಸಿಕ್ಸರ್ ಬಾರಿಸಿದ 'ಎಂ.ಎಸ್ ಧೋನಿ'

  By ಸೋನು ಗೌಡ
  |

  ಭಾರತ ಕ್ರಿಕೆಟ್ ಲೋಕದ ದೊರೆ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧರಿತ ಕಥೆಯುಳ್ಳ 'ಎಂ.ಎಸ್ ಧೋನಿ: ದ ಅನ್ ಟೋಲ್ಡ್ ಸ್ಟೋರಿ' ಸಿನಿಮಾ, ಕಳೆದ ಶುಕ್ರವಾರ (ಸೆಪ್ಟೆಂಬರ್ 30) ತೆರೆಕಂಡಿದ್ದು, ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ಮೊದಲ ದಿನ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಂಡ ಧೋನಿ ಅವರ ಸಿನಿಮಾ ಕಲೆಕ್ಷನ್ ವಿಚಾರದಲ್ಲೂ ಭಯಂಕರ ಸೌಂಡ್ ಮಾಡುತ್ತಿದೆ.

  ನಿಜ ಜೀವನಾಧರಿತ ಕಥೆಗಳ ಸಿನಿಮಾಗಳಲ್ಲಿ, 'ಧೋನಿ: ದ ಅನ್ ಟೋಲ್ಡ್ ಸ್ಟೋರಿ' ಚಿತ್ರವೇ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.['ಧೋನಿ' ಚಿತ್ರಕ್ಕೆ ಸುಶಾಂತ್ ಗೆ ಕೊಟ್ಟ ಸಂಭಾವನೆ ಎಷ್ಟು? ಧೋನಿ ಪಡೆದಿದ್ದೆಷ್ಟು?]

  ನಟ ಸುಶಾಂತ್ ಸಿಂಗ್ ರಜಪೂತ್, ನಟಿ ಭೂಮಿಕಾ ಚಾವ್ಲಾ, ನಟಿ ಕೈರಾ ಅದ್ವಾನಿ ಹಾಗೂ ನಟಿ ದಿಶಾ ಪಟಾನಿ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದ 'ಎಂ.ಎಸ್ ಧೋನಿ: ದ ಅನ್ ಟೋಲ್ಡ್ ಸ್ಟೋರಿ' ಕಲೆಕ್ಷನ್ ರಿಪೋರ್ಟ್ ನೋಡಲು ಮುಂದೆ ಓದಿ....

  'ಧೋನಿ' ಮೊದಲ ದಿನದ ಕಲೆಕ್ಷನ್

  'ಧೋನಿ' ಮೊದಲ ದಿನದ ಕಲೆಕ್ಷನ್

  ಅಭಿಮಾನಿಗಳಿಂದ, ಸಿನಿಪ್ರಿಯರಿಂದ ಹಾಗೂ ವಿಮರ್ಶಕರಿಂದ ಕೂಡ ಉತ್ತಮ ಅಭಿಪ್ರಾಯ ಗಳಿಸಿರುವ 'ಎಂ.ಎಸ್ ಧೋನಿ: ದ ಅನ್ ಟೋಲ್ಡ್ ಸ್ಟೋರಿ' ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಅಂದಹಾಗೆ ಮೊದಲ ದಿನ (ಶುಕ್ರವಾರ) ಬರೋಬ್ಬರಿ 21.30 ಕೋಟಿ ರೂಪಾಯಿ ಕಮಾಯಿಸಿ ದಾಖಲೆ ಹುಟ್ಟುಹಾಕಿದೆ.['ಧೋನಿ' ಚಿತ್ರಕ್ಕೆ ಸುಶಾಂತ್ ಗೆ ಕೊಟ್ಟ ಸಂಭಾವನೆ ಎಷ್ಟು? ಧೋನಿ ಪಡೆದಿದ್ದೆಷ್ಟು?]

  ಎರಡನೇ ದಿನದ ಗಳಿಕೆ (ಶನಿವಾರ)

  ಎರಡನೇ ದಿನದ ಗಳಿಕೆ (ಶನಿವಾರ)

  ನಿರ್ದೇಶಕ ನೀರಜ್ ಪಾಂಡೆ ಆಕ್ಷನ್-ಕಟ್ ಹೇಳಿದ್ದ ಈ ಸಿನಿಮಾ, ಬಿಡುಗಡೆಯಾದ ಎರಡನೇ ದಿನ ಅಂದ್ರೆ ಶನಿವಾರ, ಭರ್ತಿ 20.60 ಕೋಟಿ ರೂಪಾಯಿ ಗಳಿಸಿದೆ. ಅಂತೂ ಎರಡೂ ದಿನ ಸೇರಿ, ವೀಕೆಂಡ್ ನಲ್ಲಿ ಬರೋಬ್ಬರಿ 60 ಕೋಟಿ ರೂಪಾಯಿ ಗಳಿಸಿ ಇತಿಹಾಸ ಸೃಷ್ಟಿಸಿದೆ.

  ಭಾನುವಾರದ ಕಲೆಕ್ಷನ್

  ಭಾನುವಾರದ ಕಲೆಕ್ಷನ್

  ಸುಶಾಂತ್ ಸಿಂಗ್ ರಜಪೂತ್ ಅಭಿನಯದ 'ಧೋನಿ' ಸಿನಿಮಾ, ಮೂರನೇ ದಿನವಾದ ಭಾನುವಾರ ಸುಮಾರು 24.10 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ ರಜಾ ದಿನವಾದ ಪರಿಣಾಮ ಕೊಂಚ ಮಟ್ಟಿಗೆ ಗಳಿಕೆ ಮಾಡಿದೆ.

  ಒಟ್ಟಾರೆ 'ಧೋನಿ' ಕಮಾಯಿಸಿದ್ದೆಷ್ಟು

  ಒಟ್ಟಾರೆ 'ಧೋನಿ' ಕಮಾಯಿಸಿದ್ದೆಷ್ಟು

  ಇದೀಗ ಈ ಮೂರು ದಿನದಲ್ಲಿ 'ಎಂ.ಎಸ್ ಧೋನಿ: ದ ಅನ್ ಟೋಲ್ಡ್ ಸ್ಟೋರಿ' ಸಿನಿಮಾ ಒಟ್ಟಾರೆ ಗಳಿಸಿದ್ದು, 66 ಕೋಟಿ ರೂಪಾಯಿ. ಇದು ಬರೀ ಭಾರತದಲ್ಲಿ ಮಾಡಿದ ಕಲೆಕ್ಷನ್ ರಿಪೋರ್ಟ್ ಮಾತ್ರ.

  ಆನ್ ಲೈನ್ ನಲ್ಲಿ ಲೀಕ್

  ಆನ್ ಲೈನ್ ನಲ್ಲಿ ಲೀಕ್

  ಇಡೀ ವಿಶ್ವದಾದ್ಯಂತ 'ಧೋನಿ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ, ಆನ್ ಲೈನ್ ನಲ್ಲಿ ಲೀಕ್ ಆಗಿದ್ಯಂತೆ. ಕೆಲವರಿಗೆ ಈ ಸಿನಿಮಾದ ಪ್ರತಿ ಲಭ್ಯವಾಗಿದ್ದು, ಸಾಧಾರಣ ಗುಣಮಟ್ಟದ ವಿಡಿಯೋ ಇದಾಗಿದೆಯಂತೆ.

  ಧೋನಿ ಮತ್ತು ಪತ್ನಿ ಸಾಕ್ಷಿ ಧೋನಿ

  ಧೋನಿ ಮತ್ತು ಪತ್ನಿ ಸಾಕ್ಷಿ ಧೋನಿ

  ತಮ್ಮ ಜೀವನಾಧರಿತ ಸಿನಿಮಾ ನೋಡಲು ಪತ್ನಿ ಸಾಕ್ಷಿ ಸಮೇತ ಪ್ರೀಮಿಯರ್ ಶೋಗೆ ಆಗಮಿಸಿದ್ದ, ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ.

  English summary
  Neeraj Pandey directorial 'M.S. Dhoni: The Untold Story' collected Rs 66 crore in 3 days in India. According to a statement, issued on behalf of the makers of the Actor Sushant Singh Rajput-starrer, 'M.S. Dhoni: The Untold Story' collected Rs 20.6 crore on Saturday taking the two-day collection to Rs 41.9 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X