Just In
Don't Miss!
- Finance
ಜಿಎಸ್ಟಿ ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ: 250ಕ್ಕೂ ಹೆಚ್ಚು ವಸ್ತುಗಳ ದರ ಏರಿಕೆ?
- News
ಮಾಜಿ ಪ್ರಧಾನಿ ನೆಹರೂ ಅತಿದೊಡ್ಡ ಅತ್ಯಾಚಾರಿ ಎಂದ ಸಾಧ್ವಿ
- Technology
ರಿಯಲ್ ಮಿ x2 ಪ್ರೊ ವಿಮರ್ಶೆ : ಕೊಟ್ಟ ಕಾಸಿಗೆ ಮೋಸವಿಲ್ಲ!
- Lifestyle
ಸೋಮವಾರದ ದಿನ ಭವಿಷ್ಯ 9-12-2019
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
'ಆಡಿಷನ್ ವೇಳೆ ರೇಪ್ ಸೀನ್ ಮಾಡಿ' ಎಂದರಂತೆ: ಕೆಟ್ಟ ಅನುಭವ ಹಂಚಿಕೊಂಡ ನಟಿ
ಮೀಟೂ ಅಭಿಯಾನ, ಕಾಸ್ಟಿಂಗ್ ಕೌಚ್ ಅಂತಹ ಅಭಿಯಾನಗಳು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿತ್ತು. ಅವಕಾಶದ ಹೆಸರಿನಲ್ಲಿ ನಟಿಯರಿಗೆ ವಂಚಿಸುವುದು, ಅತ್ಯಾಚಾರ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಇದೀಗ, ಉಜ್ಡಾ ಚಮನ್ ಸಿನಿಮಾ ನಟಿ ಮಾನ್ವಿ ಗಾಗ್ರೋ ತಮಗಾದ ಕೆಟ್ಟ ಅನುಭವವೊಂದನ್ನ ಹೊರಹಾಕಿದ್ದಾರೆ. ಪ್ರಾರಂಭದಲ್ಲಿ ಆಡಿಷನ್ ಗೆ ಹೋದ ಸಂದರ್ಭದಲ್ಲಿ ರೇಪ್ ದೃಶ್ಯ ಮಾಡಿ ತೋರಿಸುವಂತೆ ಸೂಚಿಸಿದ್ದರಂತೆ.
'ಒಂದು ಮೊಟ್ಟೆಯ ಕಥೆ' ಹಿಂದಿ ರೀಮೇಕ್ ಚಿತ್ರಕ್ಕೆ ಪ್ರೇಕ್ಷಕರ ಕೊರತೆ
''ಸಿನಿಮಾ ಆಫೀಸ್ ಎಂದು ಹೇಳಲಾಗಿದ್ದ ಸ್ಥಳಕ್ಕೆ ನಾನು ಆಡಿಷನ್ ಗೆ ಹೋಗಿದ್ದೆ. ಅಲ್ಲಿ ರೇಪ್ ದೃಶ್ಯ ಮಾಡಿ ತೋರಿಸುವಂತೆ ಸೂಚಿಸಿದರು. ಕಚೇರಿಯಾಗಿದ್ದರೂ ಅಲ್ಲಿ ಬೆಡ್ ರೂಂ ಇತ್ತು. ಅಲ್ಲಿ ಇಬ್ಬರು ವ್ಯಕ್ತಿ ಮಾತ್ರ ಇದ್ದರು. ನಾನು ಆತಂಕದಿಂದ ಆಗಲ್ಲ ಎಂದು ಹೇಳಿ ಗಾಬರಿಯಿಂದ ವಾಪಸ್ ಬಂದೆ. ಬಹುಶಃ ಎರಡು ನಿಮಿಷ ಅಲ್ಲೇ ಇದ್ದಿದ್ರೆ ಏನ್ ಆಗ್ತಿತ್ತೋ'' ಎಂದು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ಸನ್ನಿ ಸಿಂಗ್ ಅಭಿನಯದ 'ಉಜ್ಡಾ ಚಮನ್' ಸಿನಿಮಾದಲ್ಲಿ ಮಾನ್ವಿ ಗಾಗ್ರೋ ನಾಯಕಿಯಾಗಿ ನಟಿಸಿದ್ದಾರೆ. ಕಳೆದ ವಾರ ತೆರೆಕಂಡಿರುವ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ.