For Quick Alerts
  ALLOW NOTIFICATIONS  
  For Daily Alerts

  ನಟ ಮಾಧವನ್ ವಿಭಿನ್ನ ಅವತಾರಗಳ ಫೋಟೋ ವೈರಲ್; ಗಮನ ಸೆಳೆಯುತ್ತಿದೆ ಶಿವಾಜಿ ಲುಕ್

  |

  ಬಹುಭಾಷಾ ನಟ ಆರ್. ಮಾಧವನ್ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ನಟ ಮಾಧವನ್ ಅವರ ಶಿವಾಜಿ ಲುಕ್ ನಿಂದ ಗೇಮ್ ಆಫ್ ಥ್ರೋನ್ ವರೆಗಿನ 8 ಗೆಟಪ್ ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಅಷ್ಟಕ್ಕೂ ಮಾಧವನ್ ವಿಭಿನ್ನ ಲುಕ್ ಗಳ ಮೂಲಕ ದರ್ಶನ ನೀಡಲು ಕಾರಣವೇನು, ಮಾಧವನ್ ಅವರ ಹೊಸ ಸಿನಿಮಾದ ಫೋಟೋಗಳಾ ಎಂದು ಯೋಚಿಸುತ್ತಿದ್ದೀರಾ? ಅಲ್ಲ, ಈ ಫೋಟೋಗಳು ತುಂಬಾ ಹಳೆಯದು. ವರ್ಷಗಳ ಹಿಂದೆ ಬೇರೆ ಬೇರೆ ಪಾತ್ರಗಳಿಗೆ ಅವರು ಲುಕ್ ಟೆಸ್ಟ್ ಮಾಡಿಸಿರುವ ಸಾಕ್ಷಿಗಳಿವು. ಇದೀಗ ಈ ಫೋಟೋಗಳನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.

  'ನಿಮ್ಮ ಮೇಲೆ ಕ್ರಶ್ ಆಗಿದೆ' ಎಂದ ಅಭಿಮಾನಿಗೆ ನಟ ಮಾಧವನ್ ನೀಡಿದ ಉತ್ತರ ಹೀಗಿತ್ತು'ನಿಮ್ಮ ಮೇಲೆ ಕ್ರಶ್ ಆಗಿದೆ' ಎಂದ ಅಭಿಮಾನಿಗೆ ನಟ ಮಾಧವನ್ ನೀಡಿದ ಉತ್ತರ ಹೀಗಿತ್ತು

  ಲುಕ್ ಟೆಸ್ಟ್ ಮಾಡಿಸಿದ ಫೋಟೋ ಹಂಚಿಕೊಂಡ ಮಾಧವನ್

  ಲುಕ್ ಟೆಸ್ಟ್ ಮಾಡಿಸಿದ ಫೋಟೋ ಹಂಚಿಕೊಂಡ ಮಾಧವನ್

  ಮಾಧವನ್ ಬೇರೆ ಬೇರೆ ವಿಭಿನ್ನ ಪಾತ್ರಗಳಿಗೆ ಲುಕ್ ಟೆಸ್ಟ್ ಮಾಡಿಸಿರುವ ಯಾವ ಸಿನಿಮಾಗಳು ಸೆಟ್ಟೇರಲಿಲ್ಲ. ಆದರೆ ಎಲ್ಲಾ ವಿಭಿನ್ನ ಲುಕ್ ನ ಫೋಟೋಗಳನ್ನು ಮಾಧವನ್ ಭದ್ರವಾಗಿ ಇಟ್ಟುಕೊಂಡಿದ್ದಾರೆ. ಇದೀಗ ಫೋಟೋಗಳನ್ನು ಅಭಿಮಾನಿಗಳ ಮುಂದೆ ಹಂಚಿಕೊಳ್ಳುವ ಮೂಲಕ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

  ರತನ್ ಟಾಟಾ ಬಯೋಪಿಕ್ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟ?ರತನ್ ಟಾಟಾ ಬಯೋಪಿಕ್ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟ?

  ಗಮನ ಸೆಳೆಯುತ್ತಿದೆ ಛತ್ರಪತಿ ಶಿವಾಜಿ ಲುಕ್

  ಗಮನ ಸೆಳೆಯುತ್ತಿದೆ ಛತ್ರಪತಿ ಶಿವಾಜಿ ಲುಕ್

  ಮಾಧವನ್ ಶೇರ್ ಮಾಡಿರುವ 8 ಗೆಟಪ್ ನ ಫೋಟೋಗಳಲ್ಲಿ ಛತ್ರಪತಿ ಶಿವಾಜಿ ಅವತಾರ ಹೆಚ್ಚು ಗಮನ ಸೆಳೆಯುತ್ತಿದೆ. ಮಾಧವನ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಮುಂದಿನ ಸಿನಿಮಾದ ಫೋಟೋಗಳಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಳಿಕ ಸ್ಪಷ್ಟನೆ ನೀಡಿದ ಮಾಧವನ್ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಲುಕ್ ಟೆಸ್ಟ್ ನಲ್ಲೇ ನಿಂತುಹೋದ ಚಿತ್ರಗಳ ಫೋಟೋಗಳಲ್ಲಿ ಯಾವುದು ಇಷ್ಟವಾಗಿದೆ ಎಂದು ಕೇಳಿದ್ದಾರೆ. ಅನೇಕರು ಶಿವಾಜಿ ಲುಕ್ ಅನ್ನು ಸಖತ್ ಇಷ್ಟಪಟ್ಟಿದ್ದಾರೆ.

  ಕ್ರಶ್ ಆಗಿದೆ ಎಂದ ಅಭಿಮಾನಿಗೆ ಮಾಧವನ್ ಪ್ರತಿಕ್ರಿಯೆ

  ಕ್ರಶ್ ಆಗಿದೆ ಎಂದ ಅಭಿಮಾನಿಗೆ ಮಾಧವನ್ ಪ್ರತಿಕ್ರಿಯೆ

  ಮಾಧವನ್ ಹವಾ, ಕ್ರೇಜ್ ಇನ್ನು ಕಡಿಮೆ ಆಗಿಲ್ಲ. ಇತ್ತೀಚಿಗೆ ಮಾಧವನ್ ಗೆ ಮಹಿಳಾ ಅಭಿಮಾನಿಯೊಬ್ಬರು ಟ್ವೀಟ್ ಮಾಡಿ, 'ನಿಮ್ಮ ಮೇಲೆ ಎರಡು ದಶಕಗಳಿಂದ ಕ್ರಶ್ ಆಗಿದೆ' ಎಂದು ಬರೆದು ಹಾರ್ಟ್ ಇಮೋಜಿ ಕಳುಹಿಸಿದ್ದರು. ಪ್ರೀತಿಯ ಅಭಿಮಾನಿಗೆ ನಟ ಮಾಧವನ್ ಕ್ಯೂಟ್ ಪ್ರತಿಕ್ರಿಯೆ ನೀಡಿದ್ದರು. ಪ್ರೀತಿಯ ಅಭಿಮಾನಿಗೆ ಮಾಧವನ್ 'ಯಪ್ಪಾ...' ಎಂದು ಪ್ರತಿಕ್ರಿಯೆ ನೀಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು.

  Recommended Video

  ಮತ್ತೆ ಸದ್ದು ಮಾಡಿದ ಮೀ ಟು | Donal Bisht | Filmibeat Kannada
  ರತನ್ ಟಾಟಾ ಬಯೋಪಿಕ್ ಬಗ್ಗೆ ಸ್ಪಷ್ಟನೆ

  ರತನ್ ಟಾಟಾ ಬಯೋಪಿಕ್ ಬಗ್ಗೆ ಸ್ಪಷ್ಟನೆ

  ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಬಯೋಪಿಕ್ ನಲ್ಲಿ ಮಾಧವನ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿ ನಟ ಮಾಧವನ್ ಅವರಿಗೆ ಟ್ಯಾಗ್ ಮಾಡಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಮಾಧವನ್ ಪ್ರತಿಕ್ರಿಯೆ ನೀಡಿ, 'ದುರದೃಷ್ಟವಶಾತ್ ಇದು ನಿಜವಲ್ಲ. ಕೆಲವು ಅಭಿಮಾನಿಗಳು ಪೋಸ್ಟರ್ ಮಾಡಿದ್ದಾರೆ. ಅಂತಹ ಯಾವುದೇ ಯೋಜನೆ ಇನ್ನು ಚರ್ಚೆಯಾಗಿಲ್ಲ.' ಎಂದು ಹೇಳುವ ಮೂಲಕ ಮಾಧವಾನ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.

  English summary
  Actor Madhavan shares unseen looks for Roles That Got Away.
  Wednesday, December 23, 2020, 15:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X