»   » 'ಇಂದು ಸರ್ಕಾರ್' ಚಿತ್ರ ಹಿನ್ನೆಲೆಯಲ್ಲಿ ಮಧುರ್ ಭಂಡಾರ್ಕರ್'ಗೆ ಬೆದರಿಕೆ

'ಇಂದು ಸರ್ಕಾರ್' ಚಿತ್ರ ಹಿನ್ನೆಲೆಯಲ್ಲಿ ಮಧುರ್ ಭಂಡಾರ್ಕರ್'ಗೆ ಬೆದರಿಕೆ

Posted By:
Subscribe to Filmibeat Kannada

ಬಾಲಿವುಡ್ ನ ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಡೈರೆಕ್ಟ್ ಮಾಡಿರುವ 'ಇಂದು ಸರ್ಕಾರ್' ಚಿತ್ರದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರ 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತ ಚಿತ್ರಕಥೆಯನ್ನು ಆಧರಿಸಿದೆ. ಈ ಚಿತ್ರದ ಹಿನ್ನೆಲೆಯಲ್ಲಿ ನಿರ್ದೇಶಕ ಮಧುರ್ ಭಂಡಾರ್ಕರ್ ಗೆ ಸಮಸ್ಯೆ ಎದುರಾಗಿದೆ.

" 'ಇಂದು ಸರ್ಕಾರ್' ಟ್ರೈಲರ್ ಬಿಡುಗಡೆ ಆದ ನಂತರ ನನಗೆ ಹಲವು ಜನರಿಂದ ಬೆದರಿಕೆ ಕರೆಗಳು ಬಂದಿವೆ. ರಾಜಕಾರಣಿಗಳು ಸೇರಿದಂತೆ ಹಲವರು ಚಿತ್ರದ ಹಿನ್ನಲೆಯಲ್ಲಿ ನನ್ನ ವಿರುದ್ಧ ಕಾನೂನಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ" ಎಂದು ನಿರ್ದೇಶಕ ಮಧುರ್ ಭಂಡಾರ್ಕರ್ ರವರು ಹೇಳಿರುವುದಾಗಿ 'ಡೆಕನ್ ಕ್ರಾನಿಕಲ್' ನಲ್ಲಿ ವರದಿ ಮಾಡಲಾಗಿದೆ. ಮಧುರ್ ಭಂಡಾರ್ಕರ್ ರವರು ಯಾವಾಗಲು ನಿಜ ಜೀವನದ ವಿಷಯಗಳು ಮತ್ತು ನೈಜ ಘಟನೆಗಳ ಆಧಾರಿತವಾಗಿ ಚಿತ್ರ ಮಾಡಲು ಮುಂದಾಗುತ್ತಾರೆ. ಈ ಹಿಂದಿನ ಅವರ 'ಪೇಜ್ 3', 'ಫ್ಯಾಷನ್', ಕಾರ್ಪೋರೇಟ್, Heroine and Satta' ಚಿತ್ರಗಳು ಅದಕ್ಕೆ ಉತ್ತಮ ಉದಾಹರಣೆ.

ಇಂದಿರಾ ಗಾಂಧಿ ಸರ್ಕಾರದ ಮರುಸೃಷ್ಟಿ 'ಇಂದು ಸರ್ಕಾರ್' ಟ್ರೈಲರ್ ನೋಡಿದ್ರಾ..

Madhur Bhandarkar directorial 'Indu Sarkar' may see some changes before release

ಈ ಹಿನ್ನೆಲೆಯಲ್ಲಿ ಈಗ ಚಿತ್ರವು ಸಿಬಿಎಫ್‌ಸಿ ಯಲ್ಲಿ ಸಮಸ್ಯೆ ಎದುರಿಸುವ ಬಗ್ಗೆ ಮಧುರ್ ಭಂಡಾರ್ಕರ್ ರವರು ಸುಳಿವು ಬಿಟ್ಟುಕೊಟ್ಟಿದ್ದು, ಚಿತ್ರದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆಗಳು ಇದೆಯಂತೆ.

"ಚಿತ್ರದ ಬಗ್ಗೆ ಹಲವು ರೀತಿಯಲ್ಲಿ ಆಕ್ಷೇಪಣೆಗಳು ಕೇಳಿಬರುತ್ತಿವೆ. ರಾಜಕಾರಣಿಗಳು ಚಿತ್ರವನ್ನು ವೀಕ್ಷಿಸಿಲ್ಲ. ಕೇವಲ ಟ್ರೈಲರ್ ಮಾತ್ರ ನೋಡಿ ಆಕ್ಷೇಪಣೆ ವ್ಯಕ್ತಪಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಆದರೆ ಸೆನ್ಸಾರ್ ಆದ ನಂತರ ಮಾತ್ರ ಚಿತ್ರದಲ್ಲಿ ಏನು ಉಳಿಸಿಕೊಳ್ಳಬೇಕು, ಯಾವುದನ್ನು ಎಡಿಟ್ ಮಾಡಬೇಕು ಎಂಬುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಮಧುರ್ ಭಂಡಾರ್ಕರ್ ಹೇಳಿದ್ದಾರೆ.

ಇನ್ನು ಚಿತ್ರದ ಹಿನ್ನೆಲೆಯಲ್ಲಿ ಈ ರೀತಿ ಸಮಸ್ಯೆ ಎದುರಾಗಿರುವುದಕ್ಕೆ, "ಹಲವರು ತುರ್ತು ಪರಿಸ್ಥಿತಿ ಕುರಿತು ಪುಸ್ತಕ ಬರೆದಿದ್ದಾರೆ, ಡಾಕ್ಯುಮೆಂಟರಿ ಮಾಡಿದ್ದಾರೆ, ಲೇಖನಗಳನ್ನು ಬರೆದಿದ್ದಾರೆ. ಆದರೆ ಚಿತ್ರ ನಿರ್ಮಾಣದಿಂದ ಯಾವ ಸಮಸ್ಯೆ ಆಗುತ್ತಿದೆ? ಫಿಲ್ಮ್ ಮೇಕರ್ ಗಳಿಗೆ ಇಂತಹ ಸ್ವತಂತ್ರ ಏಕಿಲ್ಲ?" ಎಂದು ಬೇಸರಗೊಂಡಿದ್ದಾರೆ. ಈ ಬಗ್ಗೆ ನಿರ್ದೇಶಕರಿಗೆ ಸಪೋರ್ಟ್ ಮಾಡಿ ಇದುವರೆಗೆ ಯಾವುದೇ ನಿರ್ಮಾಪಕರು ಧ್ವನಿ ಎತ್ತಿಲ್ಲ.

ಈ ಚಿತ್ರ ಜುಲೈ 28 ರಂದು ತೆರೆ ಕಾಣಲಿದೆ. ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
Madhur Bhandarkar directorial 'Indu Sarkar' may see some changes before release

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada