For Quick Alerts
  ALLOW NOTIFICATIONS  
  For Daily Alerts

  ಎರಡು ದಶಕದ ನಂತರ ಮತ್ತೆ ಒಂದಾದ ಸಂಜಯ್ ದತ್ ಮತ್ತು ಮಾಧುರಿ

  |

  ಒಂದು ಕಾಲದ ಬಾಲಿವುಡ್ ನ ಹಿಟ್ ಜೋಡಿ ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ಈಗ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಬರೋಬ್ಬರಿ ಎರಡು ದಶಕಗಳ ನಂತರ ಒಂದೇ ಚಿತ್ರದಲ್ಲಿ ಮಾಧುರಿ ಮತ್ತು ಸಂಜತ್ ದತ್ ಸೆರೆ ಸಿಕ್ಕಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ.

  ಖಳನಾಯಕ್, ಸಾಜನ್, ಸಹಿಬಾನ್, ಮಹಾಂತ್, ಕನೂನ್ ಆಪ್ನಾ ಆಪ್ನಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ಈ ಜೋಡಿ 21 ವರ್ಷದ ಬಳಿಕ 'ಕಳಂಕ್' ಸಿನಿಮಾ ಮೂಲಕ ಮತ್ತೆ ತೆರೆಹಂಚಿಕೊಂಡಿದ್ದಾರೆ. ಬಹುನಿರೀಕ್ಷೆಯ ಹೊಂದಿರುವ 'ಕಳಂಕ್' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಚಿತ್ರಪ್ರೇಮಿಗಳ ಕುತೂಹಲ ಹೆಚ್ಚಿಸಿದೆ.

  ವರ್ಷದ ನಂತರ ಸವಾಲಿನ ಪಾತ್ರದ ಮೂಲಕ ಬಂದ ದೀಪಿಕಾ ವರ್ಷದ ನಂತರ ಸವಾಲಿನ ಪಾತ್ರದ ಮೂಲಕ ಬಂದ ದೀಪಿಕಾ

  2.5 ನಿಮಿಷದ 'ಕಳಂಕ್' ಟೀಸರ್ ನಲ್ಲಿ ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಒಂದು ದೃಶ್ಯದಲ್ಲಿ ಹೀಗೆ ಬಂದು ಹಾಗೆ ಹೋಗ್ತಾರೆ. ಇದು ಕೇವಲ ಟೀಸರ್ ಮಾತ್ರ. ಆ ದೃಶ್ಯವೇ ಈಗ ಟೀಸರ್ ನ ಹೈಲೈಟ್ ಗಳಲ್ಲಿ ಒಂದಾಗಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ಮಾಧುರಿ ಬಹಾರ್ ಬೇಗಂ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಂಜಯ್ ದತ್ ಬಾಲರಾಜ್ ಚೌಧರಿಯಾಗಿ ಅಭಿನಯಿಸಿದ್ದಾರೆ.

  ಶಾರೂಖ್ ಖಾನ್ ಅಭಿಮಾನಿಗಳಿಗೆ ಮತ್ತೆ ನಿರಾಸೆಶಾರೂಖ್ ಖಾನ್ ಅಭಿಮಾನಿಗಳಿಗೆ ಮತ್ತೆ ನಿರಾಸೆ

  'ಕಳಂಕ್' ಕರಣ್ ಜೋಹರ್ ನಿರ್ಮಾಣದ ಸಿನಿಮಾ. ಅಭಿಷೇಕ್ ವರ್ಮ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಅಧಿತ್ಯ ರಾಯ್ ಕಪೂರ್ ಮತ್ತು ವರುಣ್ ದವನ್ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ರೂಪ್ ಪಾತ್ರದ ಮೂಲಕ ರಾಣಿಯಾಗಿ ಮಿಂಚಿರುವ ಅಲಿಯಾ ಭಟ್ ಇಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.

  ಅದ್ದೂರಿ ಸೆಟ್, ಕಾಸ್ಟೂಮ್, ಬ್ಯಾಗ್ರೌಂಡ್ ಮ್ಯೂಸಿಕ್ ಪ್ರತಿಯೊಂದು ಸಹ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟೀಸರ್ ಮೂಲಕವೇ ಈ ಪರಿ ಸದ್ದು ಮಾಡುತ್ತಿರುವ 'ಕಳಂಕ್' ಮುಂದಿನ ತಿಂಗಳು ಅಂದ್ರೆ ಏಪ್ರಿಲ್ 17ಕ್ಕೆ ತೆರೆಗೆ ಬರ್ತಿದೆ.

  English summary
  Madhuri Dixit and Sanjay Dutt to back together after 21 years. this super hit pair reunting in kalank movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X