ಮಾಧುರಿ ದೀಕ್ಷಿತ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು
ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ ಮಂಗಳವಾರ (ಮೇ 15) 45ಕ್ಕೆ ಅಡಿಯಿಟ್ಟಿದ್ದಾರೆ. ಅವರು ನಡುವಯಸ್ಸಿಗೆ ತಲುಪಿದ್ದರೂ ಚಿತ್ರರಸಿಕರ ಪಾಲಿಗೆ ಅವರಿನ್ನೂ ಧಕ್ ಧಕ್ ಬೆಡಗಿ. ಗಂಡ, ಮನೆ, ಮದುವೆ, ಮಕ್ಕಳು ಎಂದು ಕಳೆದುಹೋಗಿದ್ದ ಅವರು ಮತ್ತೆ ಬೆಳ್ಳಿತೆರೆ ಅಡಿಯಿಟ್ಟದ್ದು ಮರೆಯಲಾಗದ ಅನುಭವ. ಆದರೆ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲ ಸಂಗತಿಗಳಿವೆ.
ಮಾಧುರಿಗೆ ಬನಾನಾ ಪರಾಟಗಳೆಂದರೆ ನಾಲಿಗೆ ಕಚ್ಚಿಕೊಳ್ಳುತ್ತಾರೆ. ಗಂಡನ ಜೊತೆ ಅಮೆರಿಕದ ಡೆನ್ವರ್‌ನಲ್ಲಿದ್ದಾಗ ಅದೇ ಶೈಲಿಯಲ್ಲಿ ಇಂಗ್ಲಿಷ್ ಮಾತನಾಡಲು ಪ್ರಯತ್ನಿಸುತ್ತಿದ್ದರು. ಮಾಧುರಿ ನಾಟ್ಯ ಪ್ರವೀಣೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆಕೆ ಮನೆಯಲ್ಲಿರುವಾಗ ಹೆಚ್ಚಾಗಿ ಹಾಡುತ್ತಾರೆ. ಅದೂ ಸುಶ್ರಾವ್ಯವಾಗಿ ಎಂಬುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.
ಮಾಧುರಿಗೆ ಕ್ಲೋಸ್ ಫ್ರೆಂಡ್ ಯಾರು ಗೊತ್ತೆ? ಕಿಂಗ್ ಖಾನ್ ಶಾರುಖ್ ಖಾನ್. ಇವಿಷ್ಟು ಮಾಧುರಿ ಬಗೆಗಿನ ಸಣ್ಣಪುಟ್ಟ ಸಂಗತಿಗಳು. ಬೆಳ್ಳಿತೆರೆಯಲ್ಲಷ್ಟೇ ಅಲ್ಲದೆ ಕಿರುತೆರೆಯಲ್ಲೂ ತಮ್ಮ ಛಾಪು ಮೂಡಿಸಿದ ತಾರೆ ಮಾಧುರಿ. ಹ್ಯಾಪಿ ಬರ್ತ್ ಡೇ ಮಾಧುರಿ. (ಏಜೆನ್ಸೀಸ್)
More from Filmibeat
English summary
The most beautiful actress, Madhuri Dixit celebrates her 45th birthday today 15th May. The things you didn’t know about Madhuri Dixit is here. Do you know who is her close friend?


Click it and Unblock the Notifications












