ಶ್ರೀದೇವಿ ಸ್ಥಾನ ತುಂಬಿದ ಮಾಧುರಿ ದೀಕ್ಷಿತ್

By Bharath Kumar

ಎವರ್ ಗ್ರೀನ್ ನಟಿ ಶ್ರೀದೇವಿ ನಮ್ಮನಗಲಿ ದಿನಗಳು ಕಳೆಯುತ್ತಿದೆ. ಆದ್ರೆ, ಅವರ ನೆನಪು ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಲೇ ಇದೆ. ಹೀಗಿರುವಾಗ, ಶ್ರೀದೇವಿ ಮಾಡಬೇಕಿದ್ದ ಪಾತ್ರವನ್ನ ಮಾಧುರಿ ದೀಕ್ಷಿತ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿಯನ್ನ ಸ್ವತಃ ಶ್ರೀದೇವಿ ಪುತ್ರ ಜಾಹ್ನವಿ ಹಂಚಿಕೊಂಡಿದ್ದಾರೆ.

ಹೌದು, ವರುಣ್ ಧವನ್ ಮತ್ತು ಆಲಿಯಾ ಭಟ್ ಅಭಿನಯಿಸುತ್ತಿರುವ ಚಿತ್ರದಲ್ಲಿ ಶ್ರೀದೇವಿ ಅಮ್ಮನ ಪಾತ್ರ ಮಾಡಬೇಕಿತ್ತು. ಆದ್ರೆ, ಅಕಾಲಿಕ ಮರಣದಿಂದ ಈ ಪಾತ್ರ ಈಗ ಮಾಧುರಿ ದೀಕ್ಷಿತ್ ಪಾಲಾಗಿದೆ.

ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಜಾಹ್ನವಿ ಕಪೂರ್ ''ಅಭಿಷೇಕ್ ವರ್ಮಾ ಅವರ ಸಿನಿಮಾ ಅಮ್ಮನ ಹೃದಯಕ್ಕೆ ಹತ್ತಿರವಾಗಿತ್ತು. ಇದೀಗ, ಈ ಪಾತ್ರ ನಿರ್ವಹಿಸಲಿರುವ ಮಾಧುರಿ ದೀಕ್ಷಿತ್ ಅವರಿಗೆ ನಾನು, ಖುಷಿ, ಮತ್ತು ನಮ್ಮ ತಂದೆಯವರು ಧನ್ಯವಾದಗಳನ್ನ ತಿಳಿಸುತ್ತೇವೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾ ಧರ್ಮ ನಿರ್ಮಾಣ ಸಂಸ್ಥೆ ಮತ್ತು ಫಾರ್ ಫಾಕ್ಸ್ ಸ್ಟುಡಿಯೋ ಜಂಟಿಯಲ್ಲಿ ತಯಾರಾಗುತ್ತಿದೆ. 1940ರ ಕಥೆಯನ್ನ ಈ ಸಿನಿಮಾ ಹೊಂದಿದ್ದು, ಮನೀಶ್ ಮಲ್ಹೋತ್ರಾ ಕಾಸ್ಟ್ಯೂಮ್ ಡಿಸೈನ್ ಮಾಡಲಿದ್ದಾರೆ.

ಶಿದ್ದಾಥ್ ಚಿತ್ರದಲ್ಲಿ ಸಂಜಯ್ ದತ್ ಕೂಡ ಅಭಿನಯಸುತ್ತಿದ್ದು, ದತ್ ಪತ್ನಿ ಪಾತ್ರದಲ್ಲಿ ಶ್ರೀದೇವಿ ಕಾಣಿಸಿಕೊಳ್ಳಬೇಕಿತ್ತು. ಈಗ ಶ್ರೀದೇವಿ ಬದಲು ಮಾಧುರಿ ಎಂಟ್ರಿ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ ವರುಣ್ ದವನ್ ಸಹೋದರನ ಪಾತ್ರದಲ್ಲಿ ಆಧಿತ್ಯ ರಾಯ್ ಕಪೂರ್ ಕೂಡ ಇರಲಿದ್ದಾರೆ ಎನ್ನಲಾಗಿದೆ.

Madhuri Dixit for stepping into Sridevi’s role in Shiddat

ಇನ್ನುಳಿದಂತೆ ಇಂಡಿಯಾ ಪಾಕಿಸ್ತಾನ ಸೆಟ್ ಹಾಕಲಾಗಿದ್ದು, ಅಭಿಷೇಕ್ ವರ್ಮಾ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಮುಂದಿನ ವರ್ಷದ ಆರಂಭದಲ್ಲಿ ಈ ಸಿನಿಮಾ ಶುರುವಾಗಲಿದೆ.

More from Filmibeat

English summary
Sridevi’s daughter Janhvi Kapoor has confirmed that Madhuri Dixit will play the role initially offered to her mother in Abhishek Varman film being produced by Dharma Productions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X