ಬಾಸ್ಕೆಟ್ ಬಾಲ್ ದಂತಕಥೆ ಬ್ರ್ಯಾಂಟ್ ದುರ್ಮರಣ: ಕಂಬನಿ ಮಿಡಿದ ಬಾಲಿವುಡ್ ಸ್ಟಾರ್ಸ್
Recommended Video
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಬಾಸ್ಕೆಟ್ ಬಾಲ್ ದಂತಕಥೆ ಕೋಬ್ ಬ್ರ್ಯಾಂಟ್ ಮತ್ತು ಮಗಳು ಗಿಯಾನ್ನಾ ನಿಧನಕ್ಕೆ ಬಾಲಿವುಡ್ ಸ್ಟಾರ್ಸ್ ಕಂಬನಿ ಮಿಡಿದಿದ್ದಾರೆ. ಅಕ್ಷಯ್ ಕುಮಾರ್, ಮಾಧುರಿ ದೀಕ್ಷಿತ್, ಶ್ರದ್ಧಾ ಕಪೂರ್, ಸಿದ್ಧಾರ್ಥ್ ಮಲ್ಹೋತ್ರ ಸೇರಿದಂತೆ ಅನೇಕ ಬಾಲಿವುಡ್ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಕೋಬ್ ಬ್ರ್ಯಾಂಟ್ ಮತ್ತು ಮಗಳು ಗಿಯಾನ್ನಾ ಇಬ್ಬರೂ ಭಾನುವಾರ ತೌಂಸಾಂಡ್ ಓಕಾಸ್ ನ ಮಂಬಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಬೇಕಿದ್ದ ಬಾಸ್ಕೆಟ್ ಬಾಲ್ ಪಂದ್ಯವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಈ ಪಂದ್ಯದಲ್ಲಿ ಗಿಯಾನ್ನಾ ಆಡಬೇಕಿತ್ತು. ಮಗಳು ಆಡುತ್ತಿದ್ದ ತಂಡಕ್ಕೆ ಬ್ರ್ಯಾಂಟ್ ತರಬೇತುದಾರರಾಗಿ ಭಾಗವಹಿಸಬೇಕಿತ್ತು. ಆದರೆ ಇಬ್ಬರು ದರ್ಘಟನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೆಲಿಕಾಪ್ಟರ್ ಅಪಘಾತ: ಬಾಸ್ಕೆಟ್‌ಬಾಲ್ ದಂತಕಥೆ ಬ್ರ್ಯಾಂಟ್ ದುರ್ಮರಣ

ಅಕ್ಷಯ್ ಕುಮಾರ್
"ಮಾತೆ ಬರುತ್ತಿಲ್ಲ. ಜಗತ್ತು ಒಬ್ಬ ಲೆಜೆಂಡರಿ ಆಟಗಾರನನ್ನು ಕಳೆದುಕೊಂಡಿದೆ. ಬಾಸ್ಕೆಟ್ ಬಾಲ್ ನ ಬ್ಲ್ಯಾಕ್ ಮಾಂಬಾ ಕೋಬ್ ಬ್ರ್ಯಾಂಟ್ ಮತ್ತು ಮಗಳು ಗಿಯಾನ್ನಾ ಅವರೊಂದಿಗೆ ಕ್ಯಾಲಿಪೋರ್ನಿಯಾದ ಡಾಟರ್ಸ್ ತಂಡಕ್ಕೆ ತರಬೇತಿ ನೀಡಲು ತೆರಳುತ್ತಿದ್ದಾಗ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಎಷ್ಟೋ ಮಕ್ಕಳಿಗೆ, ನನ್ನ ಸೋದರ ಸೊನೆ ಸೇರಿದ್ದಂತೆ ನೀವು ಬಾಸ್ಕೆಟ್ ಬಾಲ್ ಆಡಲು ಪ್ರೇರೇಪಿಸಿದ್ದೀರಿ" ಎಂದು ಅಕ್ಷಯ್ ಕುಮಾರ್ ಟ್ವೀಟ್ ಮೀಡಿದ್ದಾರೆ.

ಅಭಿಷೇಕ್ ಬಚ್ಚನ್
"ಹೃದಯವಿದ್ರಾವಕ ಸುದ್ದಿ. ಕೋಬ್ ಬ್ರ್ಯಾಂಟ್ ಆತ್ಮಕ್ಕೆ ಶಾಂತಿ ಸಿಗಲಿ. ಎಂತಹ ಸ್ಫೂರ್ತಿದಾಯಕ ವ್ಯಕ್ತಿತ್ವ. ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ"

ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಬ್ರ್ಯಾಂಡ್ ಭೇಟಿಯಾದ ಸಮಯವನ್ನು ನೆನಪಿಸಿಕೊಂಡಿದ್ದಾರೆ. "13 ವರ್ಷ ಇದ್ದಾಗ ಕ್ವೀನ್ಸ್ ಎನ್ ವೈ ಸಿಯಲ್ಲಿ ವಾಸವಿದ್ದೆ, ಅದೆ ವಯಸ್ಸಿನ ಪುಟ್ಟ ಹುಡುಗಿ ಗಿಯಾನ್ನಾ. ಎಲ್ಲಾ ಜನರೇಶನ್ ಅವರಿಗೂ ಸ್ಫೂರ್ತಿ. ಈ ಹೃದಯವಿದ್ರಾವಕ ಅಪಘಾತ. ಚಿಕ್ಕ ಮಗು ಗಿಯಾನ್ನಾಳ ಜೀವವನ್ನೂ ತೆಗೆದುಕೊಂಡಿದೆ. ಈ ಸುದ್ದಿ ಕೇಳಿ ಅಘಾತವಾಗಿದೆ. ನಾನು ದುಃಖದಲ್ಲಿ ಇದ್ದೀನಿ" ಎಂದು ಹೇಳಿದ್ದಾರೆ.
ಕೋಬ್ ಬ್ರ್ಯಾಂಟ್ ನಿಧನಕ್ಕೆ ಮರುಗಿದ ಕೊಹ್ಲಿ, ರೋಹಿತ್, ಬೂಮ್ರಾ, ಶ್ರೇಯಸ್

ಶ್ರದ್ಧಾ ಕಪೂರ್
"ಕೋಬ್ ಬ್ರ್ಯಾಂಟ್ ಮತ್ತು ಪುಟ್ಟ ಮಗಳ ಆತ್ಮಕ್ಕೆ ಶಾಂತಿ ಸಿಗಲಿ. ಇದು ತುಂಬಾ ದುಃಖದ ಸುದ್ದಿ. ಜೀವನ ತುಂಬಾ ಅನಿರೀಕ್ಷಿತ" ಎಂದು ನಟಿ ಶ್ರದ್ಧಾ ಕಪೂರ್ ಟ್ವೀಟ್ ಮಾಡಿದ್ದಾರೆ.

ಮಾಧುರಿ ದೀಕ್ಷಿತ್
"ಹೃದಯವಿದ್ರಾವಕ ಸುದ್ದಿ. ಕೋಬ್ ಬ್ರ್ಯಾಂಟ್ ಮತ್ತು ಅವರ ಮಗಳ ಅಕಾಲಿಕ ಮರಣದ ಸುದ್ದಿ ಅಘಾತ ನೀಡಿದೆ. ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಅತ್ಯುತ್ತಮ ಬ್ಯಾಸ್ಕೆಟ್ ಬಾಲ್ ಆಟಗಾರರಲ್ಲಿ ಒಬ್ಬರು. ದುಃಖದಲ್ಲಿರುವ ಕುಟುಂಬಕ್ಕೆ ನನ್ನ ಸಂತಾಪ" ಎಂದು ಹೇಳಿದ್ದಾರೆ. ಇನ್ನು ಅನುಪಮ್ ಖೇರ್, ಸಿದ್ಧಾರ್ಥ ಮಲ್ಹೋತ್ರ, ಅರ್ಜುನ್ ಕಪೂರ್ ಸೇರಿದಂತೆ ಸಾಕಷ್ಟು ಬಾಲಿವುಡ್ ಸ್ಟಾರ್ ಸಂತಾಪ ಸೂಚಿಸಿದ್ದಾರೆ.


Click it and Unblock the Notifications










