For Quick Alerts
  ALLOW NOTIFICATIONS  
  For Daily Alerts

  'ಏಕ್ ದೋ ತೀನ್' ಹಾಡಿಗೆ 31 ವರ್ಷ: ಮತ್ತೆ ಹೆಜ್ಜೆ ಹಾಕಿ ಅಭಿಮಾನಿಗಳಿಗೆ ಸವಾಲ್ ಎಸೆದ ಮಾಧುರಿ

  |

  ಏಕ್ ದೋ ತೀನ್...ಈ ಹಾಡು ಯಾರಿಗೆತಾನೆ ಗೊತ್ತಿಲ್ಲ. ಬಾಲಿವುಡ್ ನ ನಾಟ್ಯ ಮಯೂರಿ ಅಂತಾನೆ ಖ್ಯಾತಿ ಗಳಿಸಿರುವ ಮಾಧುರಿ ದೀಕ್ಷಿತ್ ಅಭಿನಯದ 'ತೇಜಾಬ್' ಚಿತ್ರದ ಹಾಡಿದು. 1988ರಲ್ಲಿ ತೆರೆಗೆ ಬಂದ 'ತೇಜಾಬ್' ಚಿತ್ರದ ಈ ಹಾಡು ಇಂದಿಗೂ ಫೇಮಸ್. ಈ ಹಾಡಿನಲ್ಲಿ ಮಾಧುರಿ ದೀಕ್ಷಿತ್ ಮಸ್ತ್ ಡ್ಯಾನ್ಸ್ ಗೆ ಫಿದಾ ಆಗದವರೆ ಇಲ್ಲ. ಈಗಲು ಈ ಹಾಡು ಕೇಳಿದರೆ ಕುಣಿದು ಕುಪ್ಪಳಿಸುವಂತೆ ಮಾಡುತ್ತೆ.

  ತೇಜಾಬ್ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 31 ವರ್ಷಗಳು ಕಳೆದಿವೆ. 31 ವರ್ಷದ ನೆನಪನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ ಮಾಧುರಿ. 90ರ ದಶಕದಲ್ಲಿ ಸಂಚಲನ ಮೂಡಿಸಿದ್ದ ಏಕ್ ದೋ ತೀನ್...ಹಾಡಿಗೆ ಮತ್ತೆ ಹೆಜ್ಜೆಹಾಕಿ ಸಂಭ್ರಮಿಸಿದ್ದಾರೆ. ಜೊತೆಗೆ ಅಭಿಮಾನಿಗಳಿಗೊಂದು ಸವಾಲ್ ಎಸೆದಿದ್ದಾರೆ.

  ಏಕ್ ದೋ ತೀನ್.. ಹಾಡಿಗೆ ಮಾಧುರಿ ಹಾಕಿದ ಸ್ಟೆಪ್ ಹಾಗೆಯೆ ಡ್ಯಾನ್ಸ್ ಮಾಡಿ ಆ ವಿಡಿಯೋ ವನ್ನು 'ಏಕ್ ದೋ ತೀನ್ ಚಾಲೆಂಜ್' ಎಂದು ಹ್ಯಾಶ್ ಟ್ಯಾಗ್ ಮಾಡಿ ಟಿಕ್ ಟ್ಯಾಕ್ ನಲ್ಲಿ ಅಪ್ ಲೋಡ್ ಮಾಡಬೇಕಂತೆ. ಇದರಲ್ಲಿ ಅದ್ಭುತ ವಿಡಿಯೋಗೆ ಮಾಧುರಿ ಕಡೆಯಿಂದ ದೊಡ್ಡ ಸರ್ಪೈಸ್ ಇದೆಯಂತೆ.

  ಈ ಬಗ್ಗೆ ಮಾಧುರಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಏಕ್ ದೋ ತೀನ್ ನನಗೆ ತುಂಬ ವಿಶೇಷವಾದ ಹಾಡು. ಇವತ್ತು ಈ ಹಾಡಿಗೆ 31 ವರ್ಷವಾದ ಸಂಭ್ರಮವನ್ನು ಆಚರಿಸುತ್ತಿದ್ದೇನೆ" ಎಂದು ಸಂತಸಪಟ್ಟಿದ್ದಾರೆ. ಮಾಧುರಿ ದೀಕ್ಷಿತ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

  ಕಿರುತೆರೆಯಲ್ಲ್ ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕೂತಿದ್ದಾರೆ. ಆಗಾಗ ವೇದಿಕೆ ಮೇಲ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಮಾಧುರಿ ಢ್ಯಾನ್ಸ್ ನೋಡಲು ಚಿತ್ರಾಭಿಮಾನಿಗಳು ಇಂದಿಗೂ ಕಾತುರದಿಂದ ಕಾಯುತ್ತಿರುತ್ತಾರೆ. ಮಾಧುರಿ ಇತ್ತೀಚಿಗೆ ಕಳಂಕ್ ಸಿನಿಮಾದ ಮೂಲಕ ತೆರೆಮೇಲೆ ಮಿಂಚಿದ್ದಾರೆ.

  English summary
  Madhuri Dixit starrer Tezaab movie completed 31 years. Madhuri dance on Ek dho teen song to celebrating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X