For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಗೆ 50 ನೇ ಹುಟ್ಟುಹಬ್ಬ ಸಂಭ್ರಮ

  By Suneel
  |

  1980-1990 ರ ದಶಕದಲ್ಲಿ ತಮ್ಮ ನಟನೆ ಮತ್ತು ನೃತ್ಯ ಕಲೆಯಿಂದ ಹಿಂದಿ ಚಿತ್ರರಂಗದ ಖ್ಯಾತ ನಟಿಯರು ಮತ್ತು ನೃತ್ಯಗಾತಿಯರ ಸಾಲಿಗೆ ಸೇರಿದವರು ಮಾಧುರಿ ದೀಕ್ಷಿತ್. 90 ದಶಕದಲ್ಲೇ ತೆರೆಯ ಮೇಲೆ ರೋಮ್ಯಾನ್ಸ್ ಮಾಡಿ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಗುರುತಿಸಲ್ಪಟ್ಟ ಮಾಧುರಿ ದೀಕ್ಷಿತ್ ರವರು ಇಂದು ತಮ್ಮ ಜೀವನ ಹಾದಿಯಲ್ಲಿ 50 ವರ್ಷಗಳನ್ನು ಪೂರೈಸಿದ್ದು 51 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.[ಮತ್ತೆ ಒಂದಾದ 90ರ ದಶಕದ 'ಗೋಲ್ಡನ್ ಜೋಡಿ']

  ಮೇ 15, 1967 ರಲ್ಲಿ ಜನಿಸಿದ ಮಾಧುರಿ ದೀಕ್ಷಿತ್ ಗೆ ಇಂದು 50 ವರ್ಷಗಳು ತುಂಬಿದ್ದು, ಅವರ 50ನೇ ಹುಟ್ಟುಹಬ್ಬಕ್ಕೆ ಇಂದು ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಟ್ವಿಟರ್ ಮೂಲಕ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

  1984 ರಲ್ಲಿ 'ಅಬೋಧ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಮಾಧುರಿ ದೀಕ್ಷಿತ್ ತಮ್ಮ 33 ವರ್ಷ ಸಿನಿ ಪಯಣದಲ್ಲಿ ಈ ವರೆಗೆ 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ 'ರಾಮ್ ಲಖಾನ್', 'ಪರಿಂದ', 'ದಿಲ್', 'ಸಾಜನ್', 'ಬೇಟಾ', 'ಖಳನಾಯಕ್', 'ರಾಜ', 'ದಿಲ್ ತೋ ಪಾಗಲ್ ಹೈ', 'ದೇವ್‌ದಾಸ್' ಜನಪ್ರಿಯ ಸಿನಿಮಾಗಳು. ಮಾಧುರಿ ದೀಕ್ಷಿತ್ ರವರು ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿ ಹೋಸ್ಟ್ ಆಗಿಯೂ ಮತ್ತು ಜಡ್ಜ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.[ಸ್ಯಾಂಡಲ್ ವುಡ್ ಗೆ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್?]

  ಮಾಧುರಿ ದೀಕ್ಷಿತ್ ರವರು ಈ ವರೆಗೆ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಮತ್ತು ಅವರ ಶ್ರಮಕ್ಕೆ 6 'ಅತ್ಯುತ್ತಮ ನಟಿ' ಫಿಲ್ಮ್ ಫೇರ್ ಪ್ರಶಸ್ತಿಗಳು, ಒಂದು 'ಅತ್ಯುತ್ತಮ ಪೋಷಕ ನಟಿ' ಪ್ರಶಸ್ತಿ ಲಭಿಸಿದೆ. ಅಲ್ಲದೇ 2008 ರಲ್ಲಿ ಅವರಿಗೆ 'ಪದ್ಮಶ್ರೀ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.

  ಚಿತ್ರರಂಗದಲ್ಲಿ ಮಾತ್ರವಲ್ಲದೇ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಾಜ ಸೇವೆ ಮಾಡಿದ್ದಾರೆ. 2001 ರಲ್ಲಿ ಆರಂಭವಾದ 'ಕೌನ್ ಬನೇಗಾ ಕರೋಡ್ ಪತಿ' ಗೇಮ್ ಶೋ ಮೊದಲ ಸೀಸನ್ ನಲ್ಲಿ ಭಾಗವಹಿಸಿ 50 ಲಕ್ಷ ಗೆದ್ದಿದ್ದರು. ಈ ಹಣವನ್ನು ಅಂದೇ ಗುಜರಾತ್ ಭೂಕಂಪ ನಿರಾಶ್ರಿತರಿಗೆ ಮತ್ತು ಪುಣೆಯಲ್ಲಿನ ಅನಾಥಶ್ರಮಕ್ಕೆ ನೀಡಿದ್ದರು. ಇಂತಹ ಅದ್ಭುತ ವ್ಯಕ್ತಿತ್ವ ಉಳ್ಳ ಮಾಧುರಿ ದೀಕ್ಷಿತ್ ರವರಿಗೆ ಫಿಲ್ಮಿಬೀಟ್ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು.

  English summary
  Bollywood’s dancing diva Madhuri Dixit-Nene turned 50 on Monday, with good wishes coming in from Bollywood Celebrities.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X