For Quick Alerts
  ALLOW NOTIFICATIONS  
  For Daily Alerts

  ಈ ರಾಜ್ಯದಲ್ಲಿ ದೀಪಿಕಾ ಅಭಿನಯದ 'ಚಪಾಕ್' ಚಿತ್ರಕ್ಕೆ ಸಿಕ್ತು ತೆರಿಗೆ ವಿನಾಯಿತಿ

  |

  ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷೆಯ ಚಪಾಕ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಈಗಾಗಲೆ ಚಿತ್ರದ ಪ್ರೀಮಿಯರ್ ಶೋ ಆಗಿದ್ದು ಚಿತ್ರ ವೀಕ್ಷಿಸಿದವರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅಂದ್ಹಾಗೆ ಚಪಾಕ್ ನೈಜ ಘಟನೆ ಆಧಾರಿತ ಸಿನಿಮಾ, ಆಸಿಡ್ ಆಟ್ಯಾಕ್ ದಾಳಿಗೆ ತುತ್ತಾದ ಯುವತಿಯ ಕಥೆ ಈ ಸಿನಿಮಾ ಮೂಲಕ ಬಿಚ್ಚಿಡಲಾಗಿದೆ.

  ಭಾರಿ ನಿರೀಕ್ಷೆ ಮೂಡಿಸಿರುವ ಚಪಾಕ್ ಸಿನಿಮಾಗೆ ಈ ಒಂದು ರಾಜ್ಯದಲ್ಲಿ ತೆರಿಗೆ ವಿನಾಯಿತಿ ಸಿಕ್ಕಿದೆ. ಹೌದು, ಮಧ್ಯಪ್ರದೇಶ ರಾಜ್ಯ ಸರ್ಕಾರ ಚಪಾಕ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವುದಾಗಿ ಘೋಷಿಸಿದೆ. ಈ ಬಗ್ಗೆ ಸ್ವತಹ ಸಿಎಂ ಕಮಲ್ ನಾಥ್ ಟ್ವೀಟ್ ಮಾಡಿದ್ದಾರೆ. "ದೀಪಿಕಾ ಪಡುಕೋಣೆ ಅವರ ಆಸಿಡ್ ದಾಳಿ ಸಂತ್ರಸ್ತೆಯ ಚಪಾಕ್ ಸಿನಿಮಾ ಜನವರಿ 10 ರಂದು ದೇಶದಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುತ್ತಿದ್ದೀನಿ" ಎಂದು ಹೇಳಿದ್ದಾರೆ.

  'ಚಪಾಕ್' ಚಿತ್ರದಲ್ಲಿ ಆಸಿಡ್ ಎರಚಿದವನ ಹೆಸರು ರಾಜೇಶ್ ಅಲ್ಲ: ಬಷೀರ್ ಖಾನ್.!'ಚಪಾಕ್' ಚಿತ್ರದಲ್ಲಿ ಆಸಿಡ್ ಎರಚಿದವನ ಹೆಸರು ರಾಜೇಶ್ ಅಲ್ಲ: ಬಷೀರ್ ಖಾನ್.!

  ಇನ್ನು ಈ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. "ಸಿನಿಮಾ ಸಕಾರಾತ್ಮಕ ಸಂದೇಶ ಹರಡಿಸುತ್ತಿದೆ. ಸಂತ್ರಸ್ತೆಯ ಧೈರ್ಯ, ಹೋರಾಟ, ಜೀವನ ಉತ್ಸಾಹದ ಕಥೆಯನ್ನು ಹೇಳುತ್ತಿದೆ. ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆ ತರುವ ಗುರಿ ಈ ಸಿನಿಮಾ ಹೊಂದಿದೆ" ಎಂದು ಟ್ವೀಟ್ ಮಾಡಿದ್ದಾರೆ.

  ಅಂದ್ಹಾಗೆ ಚಪಾಕ್ ದೀಪಿಕಾ ಪಡುಕೋಣೆ ಅಭಿನಯದ ಬಹುತೇಕ ಸಿನಿಮಾಗಳಲ್ಲಿ ಈ ಸಿನಿಮಾ ವಿಭಿನ್ನವಾಗಿ ಕಾಣಿಸುತ್ತಿದೆ. ಇತ್ತೀಚಿಗೆ ದೀಪಿಕಾ ಜೆ ಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿ ಆನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ದೀಪಿಕಾ ಪರ ಮತ್ತು ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ನಡುವೆ ದೀಪಿಕಾ ಅಭಿನಯದ ಚಪಾಕ್ ಸಿನಿಮಾ ಬಹಿಷ್ಕರಿಸುವಂತೆ ಟ್ವಿಟ್ಟರ್ ನಲ್ಲಿ ದೊಡ್ಡ ಅಭಿಯಾನ ಮಾಡಲಾಗುತ್ತಿದೆ.

  ಇದರ ನಡುವೆ ಈಗ ಮಧ್ಯಪ್ರದೇಶ ಸರ್ಕಾರ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿರುವುದು ಚಿತ್ರತಂಡಕ್ಕೆ ಸಂತಸವಾಗಿದೆ. ಚಪಾಕ್ ಆಸಿಡ್ ದಾಳಿಗೆ ಒಳಗಾಗಿರುವ ಲಕ್ಷ್ಮಿ ಅಗರವಾಲ್ ಅವರ ಜೀವನಾಧಾರಿತ ಸಿನಿಮಾ. ಚಿತ್ರಕ್ಕೆ ಮೇಘನಾ ಗುಲ್ಜರ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Bollywood Actress Deepika Padukone starrer Chhapaak movie tax free in Madhya Pradesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X