ಪ್ರೀತಿಸಿದವವರು ಸಿಕ್ತಿಲ್ವಾ ? ಈ 'ಮಂತ್ರ' ಹೇಳಿ ಮದ್ವೆನೆ ಆಗ್ತಾರೆ ಎಂದ ಮಹಾಕುಂಭ ಮೇಳದ ಸುಂದರ ಸಾಧ್ವಿ..!

ಮದುವೆಯ ಯೋಗ ಕೆಲವರಿಗೆ ಬೇಗ ಕೂಡಿ ಬರುತ್ತೆ. ಕೆಲವರಿಗೆ ವಯಸ್ಸು ಮೀರಿದರೂ ಕೂಡ ಒಂದಲ್ಲ ಒಂದು ಕಾರಣದಿಂದ ಮದುವೆ ತಪ್ಪುತ್ತಿರುತ್ತೆ. ಇನ್ನೂ ಸಾಮಾನ್ಯವಾಗಿ ವಯಸ್ಸಿಗೆ ಬಂದ ಮೇಲೆ ಮನೆಯಲ್ಲಿ ಎಲ್ಲರೂ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳುತ್ತಾರೆ. ಸಭೆ-ಸಮಾರಂಭಗಳಿಗೆ ತೆರಳಿದರೆ ಸಾಕು ಅಲ್ಲಿಯೂ ಕೂಡ ಸಂಬಂಧಿಕರು-ಸ್ನೇಹಿತರು ಕೂಡ ಮದುವೆಯ ವಿಚಾರವನ್ನೇ ಕೇಳಿ ಕಿರಿಕಿರಿಯನ್ನುಂಟು ಮಾಡುತ್ತಾರೆ.

ಹೀಗಾಗಿ ಅದೆಷ್ಟೋ ಹದಿಹರೆಯದ ಯುವಕ-ಯುವತಿಯರು ಫ್ಯಾಮಿಲಿ ಫಂಕ್ಷನ್‌ ಎಂದರೆ ಸಾಕು ತಪ್ಪಿಸಿಕೊಂಡು ಓಡಾಡುತ್ತಾರೆ. ಆದರೆ, ಇನ್ಮುಂದೆ ಮದುವೆಯ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಒಂದು ಮಂತ್ರ ಹೇಳಿದರೆ ಸಾಕು ನೀವು ಇಷ್ಟ ಪಡುವ ಹುಡುಗ ಅಥವಾ ಹುಡುಗಿ ನಿಮ್ಮನ್ನೂ ಹುಡುಕಿಕೊಂಡು ಬರುತ್ತಾರೆ. ಮದುವೆಯಾಗುತ್ತಾರೆ. ಇಷ್ಟೇ ಅಲ್ಲ ನೀವು ಈ ಮಂತ್ರ ಹೇಳುವ ಮೂಲಕ ಅವರನ್ನು ನಿಮ್ಮ ಹದ್ದು ಬಸ್ತಿನಲ್ಲಿ ಕೂಡ ನೀವು ಇಡಬಹುದು. ಆಶ್ಚರ್ಯ ಅನಿಸಿದರೂ ಇದು ನಿಜಾ. ಹೀಗೆಂದು ನಾವಲ್ಲ ಬದಲಿಗೆ ಮಹಾಕುಂಭ ಮೇಳದಲ್ಲಿ ಭಾಗಿಯಾದ ತಮ್ಮನ್ನು ತಾವು ಸಾಧ್ವಿ ಎಂದು ಹೇಳಿಕೊಳ್ಳುವ ನೋಡಲು ಅಪ್ಸರೆಯಂತೆ ಇರುವ ಹರ್ಷ ರಿಚಾರಿಯಾ ಹೇಳಿದ್ದಾರೆ.

maha-kumbh-2025-sadhvi-harsha-richhariya-teaches-vashikaran-mantra-for-love-life

ಹೌದು, ಮಹಾಕುಂಭ ಮೇಳ ಶುರುವಾದ ದಿನದಿಂದ ಚೆಲುವೆಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಶ್ವ ಪ್ರಸಿದ್ದ ಮಹಾಕುಂಭ ಮೇಳದಲ್ಲಿ ಸಾಧ್ವಿಯ ಅವತಾರದಲ್ಲಿ ಪ್ರತ್ಯಕ್ಷರಾದ ಇವರನ್ನು ಕಂಡು ಅನೇಕರು ಬೆಕ್ಕಸ ಬೆರಗಾಗಿದ್ದಾರೆ. ಕೇವಲ 30ರ ಹರೆಯದಲ್ಲಿ ಕಾಮ-ಕ್ರೋಧ-ಲೋಭ-ಮೋಹ ಮತ್ತು ಮದ-ಮಾತ್ಸರ್ಯ ಎಂಬಾ ಅರಿಷಡ್ವರ್ಗಗಳನ್ನೆಲ್ಲ ತ್ಯಜಿಸಿ ಸನ್ಯಾಸತವನ್ನು ಸ್ವೀಕರಿಸಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ದಿನ ಬೆಳಗಾದರೆ ಸಾಕು ಹರ್ಷ ರಿಚಾರಿಯಾ ಅವರ ಫೋಟೊ ಮತ್ತು ವಿಡಿಯೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡು ಚರ್ಚೆ ಮಾಡುತ್ತಿದ್ದಾರೆ.

ಹೀಗಿರುವಾಗ ಶೀಘ್ರವೇ ಮದುವೆಯಾಗಲು ಹರ್ಷ ರಿಚಾರಿಯಾ ಭೋದಿಸಿರುವ ಮಂತ್ರವೊಂದು ಇದೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನಾ ತರಹದ ಅಭಿಪ್ರಾಯಗಳಿಗೆ ಕಾರಣವಾಗಿದೆ. ವಿಡಿಯೋದಲ್ಲಿ ಮಾತನಾಡಿರುವ ಹರ್ಷ ರಿಚಾರಿಯಾ ನನಗೆ ತುಂಬಾ ಜನ ನಾವು ಪ್ರೀತಿಸಿದವರನ್ನು ಹೇಗೆ ವಶಪಡಿಸಿಕೊಳ್ಳಬೇಕೆಂಬ ಪ್ರಶ್ನೆ ಮಾಡುತ್ತಾರೆ, ನಾವು ಪ್ರೀತಿಸಿದ ವ್ಯಕ್ತಿ ನಮ್ಮನ್ನೇ ಮದುವೆಯಾಗಬೇಕು ಅಂದರೆ ಏನು ಮಾಡಬೇಕು ಎಂದು ಕೇಳುತ್ತಿದ್ದಾರೆ ಹೀಗಾಗಿ ನಾನು ನಿಮಗೆಲ್ಲ ಇವತ್ತು ಒಂದು ಮತ್ರ ಹೇಳಿಕೊಡುತ್ತೇನೆ ಎಂದು ಹೇಳಿದ್ದಾರೆ.

ಈ ಮಂತ್ರವನ್ನು ನೀವು ಹೇಳಿದರೆ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮಿಂದ ಯಾವತ್ತು ದೂರವಾಗಲ್ಲ ಬದಲಿಗೆ ಮದುವೆ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಲ್ಲುತ್ತಾರೆ ಎಂದು ಹೇಳಿರುವ ಹರ್ಷ ರಿಚಾರಿಯಾ 'ಓಂ ಗಿಲಿ ಗಿಲಿ ಛೂ ಓಂ ಫಟ್ ಸ್ವಾಹಾ' ಎಂಬ ಮಂತ್ರವನ್ನು ಪಠಿಸಲು ಹೇಳಿದ್ದಾರೆ. ಈ ಮಂತ್ರವನ್ನು ದಿನನಿತ್ಯ 1008 ಬಾರಿ ಪಠಿಸಬೇಕು ಎಂದು ಹೇಳಿದ್ದಾರೆ. ಸದ್ಯ ಹರ್ಷ ರಿಚಾರಿಯಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಬಾಲಿವುಡ್‌ನ ಪುರಾತನ ಕಾಲದ ಸ್ಟಾರ್ ಕಮಲ್ ಖಾನ್ ಕೂಡ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಹರ್ಷ ರಿಚಾರಿಯಾ ಅವರನ್ನು ಗೇಲಿ ಮಾಡಿದ್ದಾರೆ.

ಅಂದ್ಹಾಗೇ ಸಾಧ್ವಿ ಎಂದು ಹೇಳಿಕೊಳ್ಳುತ್ತಿರುವ ಹರ್ಷಾ ರಿಚಾರಿಯಾ ವೃತ್ತಿಯಲ್ಲಿ ನಿರೂಪಕಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಇವರು ಬೆಕ್ಕಿನ ನಡಿಗೆಯನ್ನು ಮಾಡಿದ್ದಾರೆ ಎನ್ನುವ ವರದಿಗಳಿವೆ. ಇನ್ನು. ಸನ್ಯಾಸತ್ವ ಸ್ವೀಕರಿಸಲು ಅದ್ದರದ್ದೇ ಆದ ನಿಯಮಗಳಿವೆ. ಹೀಗಿರುವಾಗ ಸಾಧ್ವಿಯಾಗಿದ್ದುಕೊಂಡು ಮನುಷ್ಯ ಸಹಜ ಜೀವನ ನಡೆಸಲು ಹೇಗೆ ಸಾಧ್ಯ ಎಂದು ಅನೇಕರು ಕಿಡಿ ಕಾರಿದ್ದರು. ಈ ಹಿನ್ನೆಲೆ ಈಗ ಸ್ಪಷ್ಟೀಕರಣ ನೀಡಿರುವ ಹರ್ಷಾ ರಿಚಾರಿಯಾ ನಾನು ಸನಾಸ್ಯತ್ವ ಸ್ವೀಕರಿಸಿಲ್ಲ ಬದಲಿಗೆ ಕೇವಲ ಆಧ್ಯಾತ್ಮದತ್ತ ಹೊರಳಿದ್ದೇನೆ ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X