For Quick Alerts
  ALLOW NOTIFICATIONS  
  For Daily Alerts

  ಲಸಿಕೆ ಪಡೆದ ನಟಿ ಮೀರಾ ಚೋಪ್ರಾ: ಬಿಜೆಪಿಯಿಂದ ಆರೋಪ

  |

  ದೇಶದೆಲ್ಲೆಡೆ ಲಸಿಕೆ ಅಭಿಯಾನ ನಡೆಯುತ್ತಿದ್ದು ಪ್ರತಿದಿನ ಲಕ್ಷಾಂತರ ಜನಕ್ಕೆ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ನಟಿ ಮೀರಾ ಚೋಪ್ರಾ ಲಸಿಕೆ ಪಡೆದಿದ್ದೆ ವಿವಾದಕ್ಕೆ ಕಾರಣವಾಗಿದೆ.

  ನಟಿ ಮೀರಾ ಚೋಪ್ರಾ ಕೆಲವು ದಿನಗಳ ಹಿಂದೆ ಥಾಣೆಯ ಖಾಸಗಿ ಸೆಂಟರ್‌ ಒಂದರಲ್ಲಿ ವ್ಯಾಕ್ಸಿನ್ ಪಡೆದಿದ್ದರು. ಆದರೆ ನಟಿ ಮೀರಾ ಚೋಪ್ರಾ ಸುಳ್ಳು ಹೇಳಿ ಲಸಿಕೆ ಪಡೆದಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಆರೋಪಿಸಿದೆ.

  ಲಸಿಕೆ ಪಡೆಯಲು ಮೀರಾ ಚೋಪ್ರಾ ನಕಲಿ ದಾಖಲೆ ತೋರಿಸಿ ತಾವೊಬ್ಬ 'ಫ್ರಂಟ್‌ಲೈನ್ ವಾರಿಯರ್' ಎಂದು ಹೇಳಿಕೊಂಡು ಅದೇ ಕೋಟಾದ ಅಡಿ ಲಸಿಕೆ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

  ಬಿಜೆಪಿ ಆರೋಪ ಮಾಡಿದ ಬೆನ್ನಲ್ಲೆ ಪ್ರಕರಣದ ತನಿಖೆ ನಡೆಸುವಂತೆ ಥಾಣೆಯ ಮುನ್ಸಿಪಲ್ ಕಾರ್ಪೊರೇಷನ್ ಹಿರಿಯ ಅಧಿಕಾರಿ ಇಂದು (ಮೇ 31 )ಆದೇಶ ನೀಡಿದೆ. ತನಿಖೆಯ ವರದಿಯನ್ನು ಮೂರು ದಿನಗಳಲ್ಲಿ ನೀಡುವಂತೆ ಸೂಚಿಸಿದ್ದಾರೆ.

  ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮೀರಾ ಚೋಪ್ರಾ, 'ನಾನು ಕಳೆದ ಒಂದು ತಿಂಗಳಿನಿಂದಲೂ ವ್ಯಾಕ್ಸಿನ್ ಪಡೆಯಲು ಯತ್ನಿಸುತ್ತಿದ್ದೆ. ಪರಿಚಿತರ ಸಹಾಯವನ್ನು ಕೇಳಿದ್ದೆ. ಅವರು ಆಧಾರ್ ಕಾರ್ಡ್ ಕೊಡುವಂತೆ ಹೇಳಿದ್ದರು. ಹಾಗೆಯೇ ನಾನು ಆಧಾರ್‌ನ ಚಿತ್ರ ಕಳಿಸಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಐಡಿ ನನ್ನದಲ್ಲ' ಎಂದಿದ್ದಾರೆ ಮೀರಾ.

  ಗುಟ್ಟಿನ ಮದುವೆಯ ಬಗ್ಗೆ ಮಾತನಾಡಿದ ಪ್ರಣೀತಾ | Filmibeat Kannada

  'ಸಹಿ ಇಲ್ಲದ ಯಾವ ಐಡಿಗಳು ಸಹ ಮೌಲ್ಯಯುತ ಎನಿಸಿಕೊಳ್ಳುವುದಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನನ್ನದು ಎನ್ನಲಾಗುತ್ತಿರುವ ಐಡಿಯಲ್ಲಿ ಯಾವುದೇ ಸಹಿ ಇಲ್ಲ. ಈ ರೀತಿಯ ಅಪಪ್ರಚಾರದ ಯತ್ನವನ್ನು ಯಾರು ಮಾಡುತ್ತಿದ್ದಾರೆಯೋ ಗೊತ್ತಿಲ್ಲ. ನನ್ನ ಹೆಸರಿನಲ್ಲಿ ಯಾರಾದರೂ ಐಡಿ ಮಾಡಿದ್ದರೆ ಯಾರು ಮತ್ತು ಏಕೆ ಮಾಡಿದ್ದಾರೆ ಎಂಬುದು ಗೊತ್ತಾಗಬೇಕು' ಎಂದಿದ್ದಾರೆ ಮೀರಾ ಚೋಪ್ರಾ.

  English summary
  Maharashtra BJP alleges actress Meera Chopra took COVID 19 vaccine by giving fake Id. But Meera denies the allegations.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X