ಮಹಾರಾಷ್ಟ್ರ: ಕೊನೆಗೂ ಚಿತ್ರಮಂದಿರಗಳು ತೆರೆಯಲು ಸಿಕ್ತು ಅನುಮತಿ
ಕೇಂದ್ರ ಸರ್ಕಾರ ಹೊರಡಿಸಿದ ಕೊರೊನಾ ಅನ್‌ಲಾಕ್ ನಲ್ಲಿ ಚಿತ್ರಮಂದಿರಗಳು ತೆರೆಯಲು ಅಕ್ಟೋಬರ್ 15 ರಿಂದ ಅನುಮತಿ ನೀಡಲಾಗಿತ್ತು. ಆದರೆ ಹಲವು ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಚಿತ್ರಮಂದಿರಗಳು ತೆರೆಯಲು ಅನುಮತಿ ನೀಡಿರಲಿಲ್ಲ. ಅದರಲ್ಲಿ ಮಹಾರಾಷ್ಟ್ರ ಸಹ ಒಂದು.
ಇದೀಗ ಮಹಾರಾಷ್ಟ್ರ ರಾಜ್ಯ ಸರ್ಕಾರವು, ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ನವೆಂಬರ್ 5 ರಿಂದ ಶೇಕಡಾ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿ ಚಿತ್ರಮಂದಿರಗಳನ್ನು ತೆರೆಯಬಹುದಾಗಿದೆ.
ಕಂಟೇನ್ಮೆಂಟ್ ಝೋನ್ ನ ಹೊರಗಿರುವ ಚಿತ್ರಮಂದಿರಗಳು, ರಂಗಮಂದಿರಗಳು ನವೆಂಬರ್ 5 ರಿಂದ ಕಾರ್ಯನಿರ್ವಹಿಸಬಹುದು. 50% ಆಸನಗಳನ್ನಷ್ಟೆ ಭರ್ತಿ ಮಾಡಬೇಕು, ಹೊರಗಿನ ಆಹಾರವನ್ನು ತೆಗೆದುಕೊಂಡು ಬರುವಂತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಇಂದು ಆದೇಶ ಹೊರಡಿಸಿದೆ.

ಕೇಂದ್ರ ನೀಡಿದ್ದ ಮಾರ್ಗಸೂಚಿ ಪಾಲಿಸುವಂತೆ ಸೂಚನೆ
50% ಪ್ರೇಕ್ಷಕರಿಗೆ ಮಾತ್ರ ಅವಕಾಶ ಸೇರಿದಂತೆ, ಕೇಂದ್ರ ಸರ್ಕಾರವು ಹೊರಡಿಸಿದ್ದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮಹಾರಾಷ್ಟ್ರ ಸರ್ಕಾರವು ಚಿತ್ರಮಂದಿರಗಳು ಹಾಗೂ ಮಲ್ಟಿಫ್ಲೆಕ್ಸ್ ಗಳಿಗೆ ಸೂಚಿಸಿದೆ. ಈಜುಕೊಳ, ಜಿಮ್‌ಗಳನ್ನು ಸಹ ತೆರೆಯಲು ಅನುಮತಿ ನೀಡಿದೆ ಸರ್ಕಾರ.

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಿಗಿತ್ತು
ದೇಶದಲ್ಲಿಯೇ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದ ಕಾರಣದಿಂದ ಈ ಹಿಂದೆ ಚಿತ್ರಮಂದಿರಗಳನ್ನು ತೆರೆಯಲು ಶಿವಸೇನಾ ಸರ್ಕಾರವು ಅನುಮತಿ ನೀಡಿರಲಿಲ್ಲ. ಕೊರೊನಾ ಪ್ರಕರಣಗಳ ಸಂಖ್ಯೆ ನಿಧಾನಕ್ಕೆ ಇಳಿಮುಖವಾಗುತ್ತಿರುವ ಕಾರಣ ಈಗ ಅನುಮತಿ ನೀಡಲಾಗಿದೆ.

ಬಾಲಿವುಡ್‌ನ ಕೇಂದ್ರ ಸ್ಥಾನ ಮುಂಬೈ
ಬಾಲಿವುಡ್‌ನ ಕೇಂದ್ರ ಸ್ಥಾನ ಮುಂಬೈನಲ್ಲಿಯೇ ಚಿತ್ರಮಂದಿರಗಳು ತೆರೆದಿಲ್ಲವಾದ್ದರಿಂದ ಅದರ ಪರಿಣಾಮ ಉಳಿದ ರಾಜ್ಯಗಳ ಮನೊರಂಜನಾ ಉದ್ಯಮದ ಮೇಲೆ ಬಿದ್ದಿತ್ತು. ಆದರೆ ಈಗ ಮುಂಬೈನಲ್ಲಿ ಚಿತ್ರಮಂದಿರಗಳು ತೆರೆಯುತ್ತಿರುವುದು ಮನೊರಂಜನಾ ಉದ್ಯಮ ಮತ್ತೆ ಚಿಗುರೊಡೆಯುವ ಸಾಧ್ಯತೆ ಇದೆ.
Recommended Video

ಅಕ್ಟೋಬರ್ 15 ಚಿತ್ರಮಂದಿರಗಳು ಕಾರ್ಯಾರಂಭ
ಕರ್ನಾಟಕದಲ್ಲಿ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಕಾರ್ಯಾರಂಭಕ್ಕೆ ಅವಕಾಶ ನೀಡಲಾಗಿದೆ. ಆದರೆ ಪೂರ್ಣ ಪ್ರಮಾಣದ ವೀಕ್ಷಕರಿಗೆ ಸಿನಿಮಾ ನೋಡಲು ಅವಕಾಶ ಇರದಿರುವ ಕಾರಣ, ಹೊಸ ಸಿನಿಮಾಗಳ ಬಿಡುಗಡೆ ಆಗುತ್ತಿಲ್ಲ. ಬದಲಿಗೆ ಹಳೆಯ ಸಿನಿಮಾಗಳೇ ಮರುಬಿಡುಗಡೆ ಆಗುತ್ತಿವೆ.


Click it and Unblock the Notifications











