For Quick Alerts
  ALLOW NOTIFICATIONS  
  For Daily Alerts

  ಕೇಂದ್ರ ಸರ್ಕಾರದ ಪರ ಸೆಲೆಬ್ರಿಟಿಗಳ ಟ್ವೀಟ್: ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶ

  |

  ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪಾಪ್ ಗಾಯಕಿ ರಿಹಾನ್ನ ಮಾಡಿದ್ದ ಟ್ವೀಟ್ ದೇಶದಲ್ಲಿ ಭಾರಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ರಿಹಾನ್ನ ಟ್ವೀಟ್ ಭಾರಿ ವೈರಲ್ ಆಗಿತ್ತು.

  ಆದರೆ ರಿಹಾನ್ನ ಟ್ವೀಟ್ ಮಾಡಿದ ಕೆಲವು ಗಂಟೆಗಳ ಬಳಿಕ ಭಾರತದ ಸಿನಿಮಾ ಹಾಗೂ ಕ್ರೀಡಾ ಸೆಲೆಬ್ರಿಟಿಗಳು ಒಬ್ಬರ ಹಿಂದೆ ಒಬ್ಬರು ಅದೇ ವಿಷಯವಾಗಿ ಟ್ವೀಟ್ ಮಾಡಿ. ಕೇಂದ್ರ ಸರ್ಕಾರಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು. ಸೆಲೆಬ್ರಿಟಿಗಳ ಈ ಟ್ವೀಟ್‌ಗಳು ಯಾರದ್ದೊ ಒತ್ತಾಯಕ್ಕೆ ಮಣಿದು ಮಾಡಿದ ಟ್ವೀಟ್ ಎನ್ನುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಿದೆ ಕೇಂದ್ರ ಸರ್ಕಾರ.

  'ರಿಹಾನ್ನ ಪರಿಣಾಮ', ಅಖಾಡಕ್ಕಿಳಿದ ಬಾಲಿವುಡ್ ಸೆಲೆಬ್ರಿಟಿಗಳು: ಡ್ಯಾಮೇಜ್ ಕಂಟ್ರೋಲ್?'ರಿಹಾನ್ನ ಪರಿಣಾಮ', ಅಖಾಡಕ್ಕಿಳಿದ ಬಾಲಿವುಡ್ ಸೆಲೆಬ್ರಿಟಿಗಳು: ಡ್ಯಾಮೇಜ್ ಕಂಟ್ರೋಲ್?

  ರಿಹಾನ್ನ ಟ್ವೀಟ್ ಮಾಡಿದ ಕೆಲವು ಗಂಟೆಗಳ ಬಳಿಕ ಕೇಂದ್ರ ವಿದೇಶಾಂಗ ಸಚಿವಾಲವು, 'ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಬಾರದು' ಎಂಬರ್ಥದ ಹೇಳಿಕೆಯನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿತು. ಈ ಟ್ವೀಟ್‌ನಲ್ಲಿ 'ಇಂಡಿಯಾ ಯುನೈಟ್', 'ಇಂಡಿಯಾ ಅಗೇನ್‌ಸ್ಟ್ ಪ್ರೊಪೊಗ್ಯಾಂಡಾ' ಹ್ಯಾಷ್‌ಟ್ಯಾಗ್ ಬಳಸಲಾಗಿತ್ತು.

  ವಿದೇಶಾಂಗ ಇಲಾಖೆಯ ಟ್ವೀಟ್ ಬಳಿಕ ಸಾಲು-ಸಾಲು ಟ್ವೀಟ್

  ವಿದೇಶಾಂಗ ಇಲಾಖೆಯ ಟ್ವೀಟ್ ಬಳಿಕ ಸಾಲು-ಸಾಲು ಟ್ವೀಟ್

  ವಿದೇಶಾಂಗ ಇಲಾಖೆಯ ಟ್ವೀಟ್ ಹೊರಬಿದ್ದ ಕೆಲವು ಗಂಟೆಗಳ ಬಳಿಕ ಅದೇ ಟ್ವೀಟ್‌ನ ಹ್ಯಾಷ್‌ಟ್ಯಾಗ್ ಬಳಸಿ ಹಲವಾರು ನಟರು, ಕ್ರೀಡಾ ಪಟುಗಳು, ಮಾಜಿ ಕ್ರೀಡಾ ಸೆಲೆಬ್ರಿಟಿಗಳು ಬಹುತೇಕ ಒಂದೇ ಸಮಯಕ್ಕೆ ಒಂದೇ ಅರ್ಥ ಧ್ವನಿಸುವ ಟ್ವೀಟ್ ಮಾಡಿದರು. ಎಲ್ಲ ಟ್ವೀಟ್‌ಗಳು ರಿಹಾನ್ನ ಮಾಡಿದ ಟ್ವೀಟ್‌ ನಿಂದ ಭಾರತದ ಐಕ್ಯತೆಗೆ ಧಕ್ಕೆ ಆಗಿದೆ ಎಂಬುದನ್ನೇ ಧ್ವನಿಸುತ್ತಿತ್ತು. ಈ ಎಲ್ಲ ಸೆಲೆಬ್ರಿಟಿಗಳ ಟ್ವೀಟ್‌ಗಳು ರಿಹಾನ್ನ ಟ್ವೀಟ್ ಮಾಡಿದ ಒಂದು ದಿನದ ನಂತರ ಬಂದವು. ಆದರೆ ಎಲ್ಲ ಸೆಲೆಬ್ರಿಟಿಗಳ ಟ್ವೀಟ್‌ಗಳು ಬಹುತೇಕ ಒಂದೇ ಸಮಯಕ್ಕೆ ಮಾಡಲಾಗಿತ್ತು.

  ರೈತ ಹೋರಾಟದ ಬಗ್ಗೆ ಈ ಹಿಂದೆ ಟ್ವೀಟ್ ಮಾಡಿರಲಿಲ್ಲ

  ರೈತ ಹೋರಾಟದ ಬಗ್ಗೆ ಈ ಹಿಂದೆ ಟ್ವೀಟ್ ಮಾಡಿರಲಿಲ್ಲ

  ದೆಹಲಿಯಲ್ಲಿ ರೈತ ಹೋರಾಟ ಪ್ರಾರಂಭವಾಗಿ ಸುಮಾರು ತಿಂಗಳುಗಳೇ ಆಗಿವೆ. ಹೋರಾಟದಲ್ಲಿ ಭಾಗವಹಿಸಿದ್ದ ಹಲವು ರೈತರು ಸಾವನ್ನಪ್ಪಿದ್ದಾರೆ. ಜನವರಿ 26 ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸರೂ ಸಹ ಗಾಯಾಳುಗಳಾಗಿದ್ದಾರೆ. ಆದರೆ ಆವಾಗೆಲ್ಲ ಸುಮ್ಮನಿದ್ದ ಈ ಸೆಲೆಬ್ರಿಟಿಗಳು, ಒಂದೇ ದಿನ, ಒಂದೇ ಸಮಯಕ್ಕೆ ಒಂದೇ ಥೆರನಾದ ಟ್ವೀಟ್ ಗಳನ್ನು ಮಾಡಿದ್ದು ಹೇಗೆ? ಏಕೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ.

  ಗೃಹ ಸಚಿವರಿಂದ ತನಿಖೆಗೆ ಆದೇಶ

  ಗೃಹ ಸಚಿವರಿಂದ ತನಿಖೆಗೆ ಆದೇಶ

  ಇದೀಗ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ನಟ ಅಕ್ಷಯ್ ಕುಮಾರ್, ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್, ಸುನಿಲ್ ಶೆಟ್ಟಿ, ಅಜಯ್ ದೇವಗನ್ ಇನ್ನೂ ಹಲವರನ್ನು ಈ ಸಂಬಂಧ ಪ್ರಶ್ನೆ ಮಾಡಲಾಗುತ್ತದೆ.

  ಕಬ್ಜ ಚಿತ್ರತಂಡ ಸೇರಿಕೊಂಡ ಕನ್ನಡದ ಯುವ ನಟ | Filmibeat Kannada
  ಕಾಂಗ್ರೆಸ್‌ನಿಂದ ದೂರು ದಾಖಲು

  ಕಾಂಗ್ರೆಸ್‌ನಿಂದ ದೂರು ದಾಖಲು

  ಮಹಾರಾಷ್ಟ್ರ ಕಾಂಗ್ರೆಸ್ ಈ ಬಗ್ಗೆ ದೂರು ದಾಖಲಿಸಿದೆ. 'ರಿಹಾನ್ನ ಟ್ವೀಟ್‌ನ ಬಳಿಕ ವಿದೇಶಾಂಗ ಇಲಾಖೆ ಟ್ವೀಟ್ ಮಾಡಿದೆ. ಆ ಟ್ವೀಟ್‌ನ ಬಳಿಕ ಎಲ್ಲ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ. ಕೆಲವರ ಟ್ವೀಟ್‌ಗಳಂತಲೂ ಅಕ್ಷರ, ಪದಗಳು ಸಹ ಒಂದೇ ಥೆರನಾಗಿದೆ. ಈ ಟ್ವೀಟ್‌ಗಳೆಲ್ಲಾ ಸ್ಕ್ರಿಪ್ಟೆಡ್ ಎಂಬ ಅನುಮಾನ ಇದೆ, ಹೋರಾಟದ ದಿಕ್ಕು ತಪ್ಪಿಸಲು ಯಾರದ್ದೋ ಬಲವಂತಕ್ಕೆ ಸಿಲುಕಿ ಈ ಟ್ವೀಟ್ ಮಾಡಲಾಗಿದೆ' ಎಂದು ದೂರಿನಲ್ಲಿ ಹೇಳಲಾಗಿದೆ.

  English summary
  Maharashtra Government Ordered To Probe Into Celebrity Tweets which they did in favor of central government.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X