ಸೋನು ಸೂದ್ ಸೇವೆ ಮೆಚ್ಚಿ ರಾಜಭವನಕ್ಕೆ ಆಹ್ವಾನಿಸಿದ ಮಹಾರಾಷ್ಟ್ರ ರಾಜ್ಯಪಾಲ
ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರು, ಬಡವರಿಗೆ ನಟ ಸೋನು ಸೂದ್ ಮಾಡುತ್ತಿರುವ ಸೇವೆ ದೇಶದ ಗಮನ ಸೆಳೆದಿದೆ.
Recommended Video
ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸುವ ಕಾರ್ಯವನ್ನು ಬಹಳ ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಸೋನು ಸೂದ್. ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸೋನು ಸೂದ್ ಅವರ ಉತ್ತಮ ಕಾರ್ಯ ಸರ್ಕಾರವನ್ನೂ ಸೆಳೆದಿದ್ದು. ಮಹಾರಾಷ್ಟ್ರದ ರಾಜ್ಯಪಾಲರು ಸೋನು ಸೂದ್ ಅವರನ್ನು ರಾಜಭವನಕ್ಕೆ ಕರೆಸಿ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ನಟ ಸೋನು ಸೂದ್ ಗೆ ರಾಜಭವನಕ್ಕೆ ಆಹ್ವಾನ ನೀಡಿದ್ದರು. ಅಂತೆಯೇ ಸೋನು ಸೂದ್ ರಾಜ್ಯಪಾಲರನ್ನು ಭೇಟಿ ಮಾಡಿ, ತಾವು ಮಾಡುತ್ತಿರುವ, ಮಾಡಿರುವ ಕಾರ್ಯವನ್ನು ರಾಜ್ಯಪಾಲರಿಗೆ ವಿವರಿಸಿದರು.

ಟ್ವೀಟ್ ಮಾಡಿರುವ ರಾಜ್ಯಪಾಲರು
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಪಾಲರು, 'ಸೋನು ಸೂದ್ ಗೆ ಆಹ್ವಾನ ನೀಡಲಾಗಿತ್ತು. ಅಂತೆಯೇ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರು ತನ್ನ ನಿವಾಸಕ್ಕೆ ತಲುಪಲು ಮಾಡಿರುವ ಸಹಾಯ ಹಾಗೂ ಅವರಿಗೆ ಆಹಾರ ವ್ಯವಸ್ಥೆ ಮಾಡಿದ ಬಗ್ಗೆ ವಿವರಿಸಿದರು, ಅವರ ಸೇವೆಗೆ ಅಭಿನಂದನೆ ಸಲ್ಲಿಸಿ, ಅವರಿಗೆ ಬೆಂಬಲದ ಅಭಯ ನೀಡಲಾಗಿದೆ' ಎಂದು ಹೇಳಿದ್ದಾರೆ.

ಸ್ವಂತ ಹಣದಲ್ಲಿ ಕಾರ್ಮಿಕರಿಗೆ ಸಹಾಯ
ಸೋನು ಸೂದ್ ತಮ್ಮ ಸ್ವಂತ ಹಣದಲ್ಲಿ ಕಾರ್ಮಿಕರನ್ನು ಅವರವರ ಸ್ವಗ್ರಹಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಮುಂಬೈ ನಲ್ಲಿ ಸಿಲುಕಿದ್ದ ಕರ್ನಾಟಕದವರಿಗೂ ಸೋನು ಸೂದ್ ಸಹಾಯ ಮಾಡಿದ್ದರು. ಅವರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಿಸಿದ್ದರು.

177 ಮಹಿಳೆಯರಿಗೆ ವಿಶೇಷ ವಿಮಾನ
ನಿನ್ನೆ ಸಹ ಕೇರಳದಲ್ಲಿ ಸಿಲುಕಿಕೊಂಡಿದ್ದ 177 ಮಂದಿ ಮಹಿಳೆಯರು ಅವರವರ ಸ್ವರಾಜ್ಯಗಳಿಗೆ ತಲುಪಿಸಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದರು ಸೋನು ಸೂದ್. ಸೋನು ಸೂದ್ ಅವರ ಕಾರ್ಯ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.


Click it and Unblock the Notifications










