twitter
    For Quick Alerts
    ALLOW NOTIFICATIONS  
    For Daily Alerts

    ಹಳ್ಳಿಯ ಪ್ರದೇಶಕ್ಕೆ ದಿವಂಗತ ನಟ ಇರ್ಫಾನ್ ಖಾನ್ ಹೆಸರು ಇಟ್ಟ ಗ್ರಾಮಸ್ಥರು

    |

    ಇತ್ತೀಚೆಗೆ ಅಗಲಿದ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಸಾವಿನ ಆಘಾತದಿಂದ ಬಾಲಿವುಡ್ ಇನ್ನೂ ಹೊರಬಂದಿಲ್ಲ. ಒಂದಿಲ್ಲೊಂದು ಸಂದರ್ಭಗಳಲ್ಲಿ ಅವರ ಅಭಿಮಾನಿಗಳು, ಸ್ನೇಹಿತರು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

    Recommended Video

    ಕನ್ನಡ ಚಿತ್ರ ಒಂದರಲ್ಲಿ ನಟಿಸಬೇಕಿತ್ತು ಇರ್ಫಾನ್ , ಕಥೆ ಕೂಡ ಇಷ್ಟ ಪಟ್ಟಿದ್ದರು | Irrfan khan

    ಪ್ರದೇಶವೊಂದಕ್ಕೆ ಇರ್ಫಾನ್ ಖಾನ್ ಅವರ ಹೆಸರನ್ನು ಇರಿಸುವ ಮೂಲಕ ಮಹಾರಾಷ್ಟ್ರದ ಹಳ್ಳಿಯೊಂದರ ಜನರು ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

    ಕಣ್ಣೀರು ತರಿಸದೇ ಇರದು ಇರ್ಫಾನ್ ಖಾನ್ ಪತ್ನಿ ಬರೆದ ಭಾವುಕ ಪತ್ರಕಣ್ಣೀರು ತರಿಸದೇ ಇರದು ಇರ್ಫಾನ್ ಖಾನ್ ಪತ್ನಿ ಬರೆದ ಭಾವುಕ ಪತ್ರ

    ನಾಸಿಕ್ ಜಿಲ್ಲೆಯ ಇಗತ್ಪುರಿ ಸಮೀಪದ ಸಣ್ಣ ಹಳ್ಳಿಯೊಂದರ ಪುಟ್ಟ ಊರಿಗೆ 'ಹೀರೋ ಚಿ ವಾಡಿ' (ಹೀರೋನ ನೆರೆಹೊರೆಯ) ಎಂಬ ಹೆಸರು ಇರಿಸಿದೆ. ಇಗತ್ಪುರಿ ತಾಲ್ಲೂಕಿನ ತ್ರಿಲಂಗವಾಡಿ ಕೋಟೆಯ ಸಮೀಪದಲ್ಲಿ ಇರ್ಫಾನ್ ಖಾನ್ ಫಾರ್ಮ್ ಹೌಸ್‌ ಇದೆ. ಈ ಪ್ರದೇಶಕ್ಕೆ 'ಪತ್ರಿಯಚಾ ವಾಡಾ' ಎಂಬ ಹೆಸರು ಇತ್ತು.

     Maharashtra Villagers Name Locality As Hero Chi Wadi After Irrfan Khan

    ಇರ್ಫಾನ್ ಖಾನ್ ಅವರಿಗೆ ಆಂಬುಲೆನ್ಸ್, ಕಂಪ್ಯೂಟರ್, ಪುಸ್ತಕ, ರೇನ್ ಕೋಟ್ ಮತ್ತು ಸ್ವೆಟರ್‌ಗಳನ್ನು ಅಲ್ಲಿನ ಜನರ ಮಕ್ಕಳಿಗೆ ನೀಡಿದ್ದಾರೆ. ಇರ್ಫಾನ್ ಖಾನ್ ತಮಗೆ ಮಾಡಿರುವ ಸಹಾಯಕ್ಕೆ ಪ್ರತಿಯಾಗಿ ಈ ಪ್ರದೇಶದ ಹೆಸರನ್ನು ಬದಲಿಸಲು ನಿರ್ಧರಿಸಿದ್ದರು.

    ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳುಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳು

    'ನಮಗೆ ಅಗತ್ಯವಿದ್ದಾಗಲೆಲ್ಲಾ ಅವರು ನಮ್ಮ ಜತೆ ನಿಂತಿದ್ದರು. ನಮಗೆ ಅಗತ್ಯವಾದ ಅನೇಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಅನೇಕ ಕುಟುಂಬಗಳಿಗೆ ಅವರು ದೇವರಂತೆ ಸಹಾಯ ಮಾಡಿದ್ದಾರೆ. ಯಾರಾದರೂ ಯಾವುದೇ ಸಹಾಯ ಕೋರಿದಾಗ ಅವರು ಎಂದಿಗೂ ಇಲ್ಲ ಎಂದಿರಲಿಲ್ಲ. ಹೀಗಾಗಿ ಪ್ರದೇಶಕ್ಕೆ ಹೀರೋ ಚಿ ವಾಡಿ ಎಂದು ಹೆಸರು ಇರಿಸಿದ್ದೇವೆ.

    English summary
    Maharashtra villagers named a locality as Hero Chi Wadi as a tribute to actor Irrfan Khan.
    Thursday, May 14, 2020, 19:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X