ಕಾರ್ಮಿಕರಿಗೆ ಸಹಾಯ ಮಾಡಿದ ಸೋನು ಸೂದ್ ಅನ್ನು ವ್ಯಂಗ್ಯ ಮಾಡಿದ ಸಂಸದ
ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ಸಹಾಯ ಮಾಡಿದ ಸೋನು ಸೂದ್ ಅನ್ನು ದೇಶವೇ ಕೊಂಡಾಡುತ್ತಿದೆ. ಆದರೆ ಅವರನ್ನೂ ತೆಗಳುವ ಜನರಿದ್ದಾರೆ.
Recommended Video
ಹೌದು, ನಟ ಸೋನು ಸೂದ್, ಈ ಕೊರೊನಾ ಸಂಕಷ್ಟದ ಸಮಯದಲ್ಲಿ ರಸ್ತೆಗಿಳಿದು ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡುತ್ತಿದ್ದಾರೆ. ಅಧಿಕಾರ ಹೊಂದಿರುವ ಸಚಿವರುಗಳು ಮಾಡಬಹುದಾದ ಕಾರ್ಯಕ್ಕಿಂತಲೂ ಹೆಚ್ಚಿಗೆ ಕಾರ್ಯವನ್ನು ಖಾಸಗಿ ವ್ಯಕ್ತಿಯಾಗಿ ಅವರು ಮಾಡುತ್ತಿದ್ದಾರೆ. ತಮ್ಮ ದೊಡ್ಡ ಹೋಟೆಲ್ ಅನ್ನು ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆಂದು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ ಸೋನು ಸೂದ್.
ಸುಮಾರು 22,000 ಜನರನ್ನು ಸೋನು ಸೂದ್ ಒಬ್ಬರೇ ಅವರ ಸ್ವಗೃಹಗಳಿಗೆ ತೆರಳಲು ನೇರ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಹರತುಪಡಿಸಿ, ಕಾರ್ಮಿಕರಿಗೆ ಊಟ, ವಸತಿ ಸೌಕರ್ಯ, ಹಣಕಾಸಿನ ಸಹಾಯ ಹೀಗೆ ಹಲವು ಬಗೆಯ ಸಹಾಯ ಮಾಡಿದ್ದಾರೆ ಸೋನು ಸೂದ್.

ಸೋನು ಸೂದ್ ಅನ್ನು ಟೀಕಿಸಿರುವ ರಾಜಕಾರಣಿ
ಆದರೆ ಇಂಥಹಾ ಕರ್ಮಯೋಗಿಯನ್ನು ಟೀಕಿಸುವ ಕಾರ್ಯವನ್ನು ರಾಜಕಾರಣಿಯೊಬ್ಬರು ಮಾಡಿದ್ದಾರೆ. ಅದೂ ಅಧಿಕಾರದಲ್ಲಿರುವ ಸರ್ಕಾರದ ಭಾಗವಾಗಿರುವ ರಾಜಕಾರಣಿ, ಸಂಸದ ಜನತೆಗೆ ಸಹಾಯ ಮಾಡುತ್ತಿರುವ ನಟ ಸೋನು ಸೂದ್ ಅನ್ನು ವ್ಯಂಗ್ಯ ಮಾಡಿದ್ದಾರೆ.

ಮಹಾರಾಷ್ಟ್ರ ಸಂಸದ ಸಂಜಯ್ ರಾವತ್
ಶಿವಸೇನಾ ಪತ್ರಿಕೆಯ ಮುಖವಾಣಿ 'ಸಾಮ್ನಾ' ನಲ್ಲಿ ಲೇಖನ ಬರೆದಿರುವ ಮಹಾರಾಷ್ಟ್ರ ಸಂಸದ, ಮಹಾರಾಷ್ಟ್ರ ಸಿಎಂ ಆಪ್ತ ಸಂಜಯ್ ರಾವತ್, ಮಹಾರಾಷ್ಟ್ರ ರಾಜ್ಯಪಾಲರು ಸೋನೂ ಸೂದ್ ಅನ್ನು ಮಹಾತ್ಮಾ ಎಂದು ಕರೆದಿರುವುದನ್ನು ವ್ಯಂಗ್ಯ ಮಾಡಿದ್ದಾರೆ.

'ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ'
'ಸೋನು ಸೂದ್ ಶೀಘ್ರದಲ್ಲಿಯೇ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಮುಂಬೈನ ಸೆಲೆಬ್ರಿಟಿ ಮ್ಯಾನೇಜರ್ ಆಗಲಿದ್ದಾರೆ (ಮೋದಿ ಅವರಿಗೆ ಸೆಲೆಬ್ರಿಟಿ ಮ್ಯಾನೇಜರ್) ಆಗಲಿದ್ದಾರೆ ಎಂದು ತಮ್ಮ ಲೇಖನದಲ್ಲಿ ವ್ಯಂಗ್ಯ ಮಾಡಿದ್ದಾರೆ ರಾವತ್.

ಮಹಾತ್ಮಾ ಎಂದು ಕರೆದಿದ್ದ ರಾಜ್ಯಪಾಲ
ಸೋನು ಸೋದ್ ಅನ್ನು ಭೇಟಿ ಮಾಡಿದ್ದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಸೋನು ಸೂದ್ ಅನ್ನು 'ಮಹಾತ್ಮಾ' ಎಂದು ಕರೆದಿದ್ದರು. ಇದನ್ನೂ ವಿಮರ್ಶಿಸಿದ್ದ ರಾವತ್, 'ಸಾಮಾಜಿಕ ಜಾಲತಾಣದಿಂದಾಗಿ ಮಹಾತ್ಮಾ ಎನಿಸಿಕೊಳ್ಳುವುದು ಎಷ್ಟೋಂದು ಸುಲಭವಾಗಿಬಿಟ್ಟಿದೆ' ಎಂದಿದ್ದರು.

ಸೋನು ಸೂದ್ ಅನ್ನು ಬಳಸಿಕೊಳ್ಳಲಾಗುತ್ತಿದೆ:ರಾವತ್
ಬಿಜೆಪಿಯು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸೋನು ಸೂದ್ ಅನ್ನು ಧಾಳವಾಗಿ ಬಳಸಿಕೊಳ್ಳುವ ಯತ್ನ ಮಾಡುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಟೀಕೆಗೆ ಸೋನು ಸೂದ್ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಅರ್ಥ ರಾವತ್ ಅವರ ಇಡೀಯ ಲೇಖನದಿಂದ ಹೊಮ್ಮುತ್ತಿದೆ.


Click it and Unblock the Notifications











