ದೇವರ ಮುಂದೆ ನಡೀತಿಲ್ಲ ದೇವ, ಕಬೀರ್, ವಿಕ್ರಂ ಆಟ!; ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ನರಸಿಂಹ'

ಹೊಂಬಾಳೆ ಫಿಲ್ಮ್ ವಿತರಣೆ ಮಾಡಿರುವ 'ಮಹಾವತಾರ್ ನರಸಿಂಹ' ಸಿನಿಮಾ ಗೆಲುಗಿನ ಓಟ ಮುಂದುವರೆದಿದೆ. ಈ ಆನಿಮೇಷನ್ ಸಿನಿಮಾ ದೊಡ್ಡ ದೊಡ್ಡ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಸಡ್ಡು ಹೊಡೆದು ಮುನ್ನುಗ್ಗುತ್ತಿದೆ. 4ನೇ ವಾರವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಕಳೆದ ವಾರ ತೆರೆಗೆ ಬಂದಿರುವ 'ಕೂಲಿ' ಹಾಗೂ 'ವಾರ್-2' ಡಲ್ ಆಗಿಬಿಟ್ಟಿವೆ.

ರಜನಿಕಾಂತ್ ನಟನೆಯ 'ಕೂಲಿ' ಹಾಗೂ ಹೃತಿಕ್, ತಾರಕ್ ನಟನೆಯ 'ವಾರ್- 2' ಚಿತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ 'ಮಹಾವತಾರ್ ನರಸಿಂಹ' ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬೀಳುತ್ತಲೇ ಇದ್ದಾರೆ. ಭಕ್ತಿಪ್ರಧಾನ ಆನಿಮೇಷನ್ ಸಿನಿಮಾ ಆರ್ಭಟದ ಮುಂದೆ ದೊಡ್ಡ ಸಿನಿಮಾಗಳೇ ಸೈಲೆಂಟ್ ಆಗುವಂತಾಗಿದೆ. ಆನ್ಲೈನ್‌ ಟಿಕೆಟ್ ಬುಕ್ಕಿಂಗ್‌ನಲ್ಲಿ ಇದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

Mahavatar Narasimha Outshines Rajinikanth s Coolie and Hrithik s War 2 Races Past 278 Cr in 25 Days

'ಮಹಾವತಾರ್ ನರಸಿಂಹ' ಕಲೆಕ್ಷನ್

ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಅಶ್ವಿನ್‌ ಕುಮಾರ್ 'ಮಹಾವತಾರ್ ನರಸಿಂಹ' ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದ್ದಾರೆ. 25 ದಿನಕ್ಕೆ ಚಿತ್ರ 278 ಕೋಟಿ ರೂ, ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಗಳಿಕೆ 300 ಕೋಟಿ ರೂ. ಗಡಿ ದಾಟುವ ಸುಳಿವು ಸಿಗುತ್ತಿದೆ. ವಿಷ್ಣುವಿನ ದಶಾವತಾರದ ಪರಿಚಯ ಮಾಡಿಸುತ್ತಲೇ ನರಸಿಂಹ ಅವತಾರ ತಾಳಿ ಹಿರಣ್ಯ ಕಶ್ಯಪು ಸಂಹಾರ ಮಾಡಿದ ಕಥೆ ಚಿತ್ರದಲ್ಲಿದೆ. ಈಗಾಗಲೇ ನಾಟಕ, ಧಾರಾವಾಹಿ, ಸಿನಿಮಾಗಳಲ್ಲಿ ಬಂದು ಹೋಗಿರುವ ಕಥೆಯನ್ನೇ ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ಅದ್ಭುತವಾಗಿ ತೆರೆಗೆ ತಂದಿದ್ದಾರೆ.

ಅಡ್ವಾನ್ಸ್ ಬುಕ್ಕಿಂಗ್

'ಮಹಾವತಾರ್ ನರಸಿಂಹ' ಕ್ರೇಜ್ ಹೇಗಿದೆ ಎಂದರೆ ಇತ್ತೀಚೆಗೆ ವೀಕೆಂಡ್‌ನಲ್ಲಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಬುಕ್‌ ಮೈ ಶೋನಲ್ಲಿ ಗಂಟೆಗೆ 6 ಸಾವಿರ ಟಿಕೆಟ್ ಬುಕ್ ಆಗಿತ್ತು. ಅದೇ ಸಮಯದಲ್ಲಿ 'ಕೂಲಿ' ಚಿತ್ರಕ್ಕೆ ಗಂಟೆಗೆ 5 ಸಾವಿರ ಹಾಗೂ 'ವಾರ್- 2' ಚಿತ್ರಕ್ಕಾಗಿ 3 ಸಾವಿರ ಟಿಕೆಟ್ ಬುಕ್ ಆಗಿತ್ತು. ಬಜೆಟ್, ಸ್ಟಾರ್‌ಕಾಸ್ಟ್, ಕ್ರೇಜ್ ಹೀಗೆ ಎಲ್ಲಾ ವಿಧದಲ್ಲಿ 'ಕೂಲಿ' ದೊಡ್ಡ ಸಿನಿಮಾ. ಆದರೂ 'ನರಸಿಂಹ'ನ ದರ್ಬಾರ್ ಜೋರಾಗಿದೆ.

Mahavatar Narasimha Outshines Rajinikanth s Coolie and Hrithik s War 2 Races Past 278 Cr in 25 Days

'ಮಹಾವತಾರ್ ನರಸಿಂಹ' ಪೈರಸಿ

ಆನಿಮೇಷನ್ ಸಿನಿಮಾ ಅಂದ್ರೆ ಕಾರ್ಟೂನ್ ಸಿನಿಮಾ ಎಂದು ಇವತ್ತಿಗೂ ಕೆಲವರು ಭಾವಿಸಿದ್ದಾರೆ. ಆದರೆ ಮಾತನ್ನು 'ಮಹಾವತಾರ್ ನರಸಿಂಹ' ಚಿತ್ರ ಸುಳ್ಳಾಗಿಸಿದೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಈಗಾಗಲೇ ಚಿತ್ರದ HD ಪ್ರಿಂಟ್ ಲೀಕ್ ಆಗಿದೆ. ಆದರೂ ದೊಡ್ಡ ಪರದೆಯಲ್ಲೇ ಸಿನಿಮಾ ನೋಡಲು ಜನ ಮುಗಿಬೀಳುತ್ತಿದ್ದಾರೆ.

ಸಿನಿಮಾ ಓಟಿಟಿ ರೈಟ್ಸ್

'ಮಹಾವತಾರ್ ನರಸಿಂಹ' ಸಿನಿಮಾ 50ನೇ ದಿನದತ್ತ ದಾಪುಗಾಲು ಇಟ್ಟಿದೆ. ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕೆಲವರು ಕಾಯುತ್ತಿದ್ದಾರೆ. ಆರಂಭದಲ್ಲಿ ಚಿತ್ರದ ಬಗ್ಗೆ ಕ್ರೇಜ್ ಇರಲಿಲ್ಲ. ಇಷ್ಟರಮಟ್ಟಿಗೆ ಸದ್ದು ಮಾಡುತ್ತದೆ ಎಂದು ಯಾರು ಊಹಿಸಿರಲಿಲ್ಲ. ಹಾಗಾಗಿ ಓಟಿಟಿ ಸಂಸ್ಥೆಗಳು ಹೆಚ್ಚಿನ ಗಮನ ಹರಿಸಿರಲಿಲ್ಲ. ಇದೀಗ ಬಾಕ್ಸಾಫೀಸ್ ಶೇಕ್ ಮಾಡುತ್ತಿದ್ದಂತೆ ಓಟಿಟಿ ಸಂಸ್ಥೆಗಳು ರೈಟ್ಸ್‌ ಕೊಂಡುಕೊಳ್ಳಲು ಮುಗಿಬಿದ್ದಿವೆ. ಭಾರೀ ಮೊತ್ತ ಕೊಡಲು ಕಾಯುತ್ತಿವೆ. ಸ್ಯಾಟಲೈಟ್ ರೈಟ್ಸ್‌ಗೂ ಡಿಮ್ಯಾಂಡ್ ಜೋರಾಗಿದೆ. ಓಟಿಟಿಗೆ ಬಂದರೆ ಸಿನಿಮಾ ಮತ್ತಷ್ಟು ಸದ್ದು ಮಾಡುವ ಸುಳಿವು ಸಿಗುತ್ತಿದೆ.

ಸರಣಿ ಸಿನಿಮಾಗಳು

ಚಿತ್ರತಂಡ ಮಹಾವತಾರ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಇನ್ನು 7 ಸಿನಿಮಾಗಳನ್ನು ಘೋಷಿಸಿದೆ. ಆ ಚಿತ್ರಗಳಿಗೂ ಹೊಂಬಾಳೆ ಸಂಸ್ಥೆ ಬೆನ್ನೆಲುಬಾಗಿ ನಿಲ್ಲುತ್ತಿದೆ. ಮುಂದಿನ ದಿನಗಳಲ್ಲಿ ನಿಧಾನವಾಗಿ ಒಂದೊಂದೇ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Mahavatar Narasimha continues its winning run, leaving Rajinikanth’s Coolie and Hrithik–Tarak’s War 2 behind with a ₹278 crore collection in 25 days.
Read more about: rajinikanth upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X