'ಮಹಾವತಾರ್ ನರಸಿಂಹ' ಸಿನಿಮಾ ನೋಡಿದ ಮುಸ್ಲಿಂ ಪ್ರೇಕ್ಷಕರು ಏನಂತಾರೆ?

ದುಷ್ಟ ಶಕ್ತಿಯಾದ ಹಿರಣ್ಯಕಶಿಪುನನ್ನು ಸಂಹರಿಸಲು ಭಗವಾನ್ ವಿಷ್ಣು ಎತ್ತಿದ ಅವತಾರ ನರಸಿಂಹ ಅವತಾರ ಎಂದು ಪುರಾಣಗಳಲ್ಲಿ ದಾಖಲಾಗಿದೆ. ಇದೇ ಕಥೆಯನ್ನು ಆಧರಿಸಿ 'ಮಹಾವತಾರ್ ನರಸಿಂಹ' ಆನಿಮೇಷನ್ ಸಿನಿಮಾ ಬಂದು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಶ್ವಿನ್‌ಕುಮಾರ್ ಚಿತ್ರ ನಿರ್ದೇಶಿಸಿ ನಿರ್ಮಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದು ಗೆದ್ದಿದೆ.

ತೆರೆಮೇಲೆ 'ಮಹಾವತಾರ್ ನರಸಿಂಹ' ಸಿನಿಮಾ ಅದ್ಭುತ ಅನುಭವ ನೀಡುತ್ತಿದೆ. ನೋಡುಗರನ್ನು ಸಿನಿಮಾ ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ. ಸಿನಿಮಾ ನೋಡಿ ಪ್ರೇಕ್ಷಕರು ಭಕ್ತಿಪರವಶರಾಗುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬುಕ್‌ಮೈ ಶೋನಲ್ಲಿ ಗಂಟೆಗೆ ಸಾವಿರಾರು ಟಿಕೆಟ್ ಬುಕ್ ಆಗುತ್ತಿದೆ. ವೀಕೆಂಡ್‌ನಲ್ಲಿ ಸಿನಿಮಾ ರೆಸ್ಪಾನ್ಸ್ ಜೋರಾಗಿದೆ. ಪ್ರೇಕ್ಷಕರು ಮಕ್ಕಳನ್ನು ಚಿತ್ರಮಂದಿರಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮುಸ್ಲಿಂ ಬಾಂಧವರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.

Mahavatar Narasimha Wins Muslim Viewers Praise Breaks Animation Box Office Records

ಅಬಾಲವೃದ್ಧರಾಗಿ ಎಲ್ಲರನ್ನು 'ಮಹಾವತಾರ್ ನರಸಿಂಹ' ಸಿನಿಮಾ ರಂಜಿಸುತ್ತಿದೆ. ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುತ್ತಿದೆ. ತ್ರಿಡಿ ಕನ್ನಡಕದಲ್ಲಿ ಸಿನಿಮಾ ಮತ್ತಷ್ಟು ಮಜಾ ಕೊಡುತ್ತಿದೆ. ಸ್ಟಾರ್ ನಟರಿಲ್ಲದೇ, ಭಾರೀ ಪ್ರಚಾರ ಇಲ್ಲದೇ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪುತ್ತಿದೆ. ಮೌತ್ ಟಾಕ್ ಮೂಲಕವೇ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 15 ದಿನಕ್ಕೆ ವಿಶ್ವದಾದ್ಯಂತ 175 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಸಂಸ್ಥೆ ಘೋಷಿಸಿದೆ.

ಹಲವು ಬಾಕ್ಸಾಫೀಸ್ ದಾಖಲೆಯನ್ನು 'ಮಹಾವತಾರ್ ನರಸಿಂಹ' ಸಿನಿಮಾ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಭಾರತೀಯ ಆನಿಮೇಷನ್ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಇನ್ನು ಮತ ಭೇದ ಮರೆತು ಮುಸ್ಲೀಮರು ಸಿನಿಮಾ ನೋಡುತ್ತಿದ್ದಾರೆ. ಕೆಲ ಮುಸ್ಲಿಂ ಬಾಂಧವರು ಸಿನಿಮಾ ನೋಡಿ ಅಭಿಪ್ರಾಯವನ್ನು ತಮ್ಮ ಬಳಿ ಹಂಚಿಕೊಂಡಿರುವುದಾಗಿ ನಿರ್ದೇಶನ ಅಶ್ವಿನ್ ಕುಮಾರ್ ಹೇಳಿದ್ದಾರೆ. ಎನ್‌ಡಿ ಟಿವಿ ಸಂದರ್ಶನದಲ್ಲಿ ಅಶ್ವಿನ್ ಮಾತನಾಡಿದ್ದಾರೆ.

ನಿರ್ದೇಶಕರು ಮಾತನಾಡಿ "ಹಲವು ಮುಸ್ಲಿಂ ಪ್ರೇಕ್ಷಕರು ಸೇರಿದಂತೆ ವಿವಿಧ ಸಮುದಾಯಗಳ ಜನ ನನ್ನ ಬಳಿ ಬಂದು ಈ ಸಿನಿಮಾ ತಮ್ಮ ಸ್ವಂತ ನಂಬಿಕೆಯನ್ನು ಬಲಪಡಿಸಿದೆ ಎಂದು ಹೇಳುತ್ತಿದ್ದಾರೆ. ನಾನು ಮತಾಂತರವಾಗಿ ಎಂದು ಹೇಳುತ್ತಿಲ್ಲ. ನಂಬಿಕೆ ಏನೆಂದು ನೀವು ಅರ್ಥ ಮಾಡಿಕೊಳ್ಳಿ. ನೀವು ದೇವರನ್ನು ಪ್ರಾರ್ಥಿಸಿ, ಆ ಶಕ್ತಿಯನ್ನು ನಂಬುತ್ತಿರಿ ಅಥವಾ ಯೂನಿವರ್ಸ್‌ನಲ್ಲಿ ನಿಮ್ಮ ನಂಬಿಕೆ ಇರಲಿ, ಈ ಚಿತ್ರವು ಆ ನಂಬಿಕೆಗೆ ನೀವು ಶರಣಾಗುವಂತೆ ಮಾಡುತ್ತದೆ" ಎಂದಿದ್ದಾರೆ.

'ಮಹಾವತಾರ್ ನರಸಿಂಹ' ಸಿನಿಮಾ ನೋಡಿರುವ ಮುಸ್ಲಿಮರು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ವೀಡಿಯೋಗಳು ವೈರಲ್ ಆಗುತ್ತಿದೆ. ಕೆಲವರು ತಮ್ಮ ಮುಸಲ್ಮಾನ್ ಸ್ನೇಹಿತರ ಜೊತೆ ಹೋಗಿ ಸಿನಿಮಾ ನೋಡಿದ್ದಾಗಿ ಅವರ ಪ್ರತಿಕ್ರಿಯೆ ಕಂಡು ಬೆರಗಾಗಿರುವುದಾಗಿ ಪೋಸ್ಟ್ ಮಾಡುತ್ತಿದ್ದಾರೆ. ಸಿನಿಮಾ ದೊಡ್ಡದಾಗಿ ಪ್ರೇಕ್ಷಕರನ್ನು ತಲುಪುತ್ತಿದೆ. 3ನೇ ವಾರವೂ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬಂದಿದೆ. ಹಿಂದಿ ವರ್ಷನ್ ಮಾತ್ರವೇ 107 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ.

ಈ ಸಿನಿಮಾ ಸಕ್ಸಸ್ ಮತ್ತಷ್ಟು ಆನಿಮೇಷನ್ ಸಿನಿಮಾಗಳ ನಿರ್ಮಾಣಕ್ಕೆ ಸ್ಫೂರ್ತಿ ತುಂಬಿದೆ. ಈಗಾಗಲೇ ಕ್ಲೀಮ್ ಪ್ರೊಡಕ್ಷನ್ಸ್ ಜೊತೆ ಸೇರಿ 7 ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಿಸಿದೆ. ಮುಂದಿನ ವರ್ಷಗಳಲ್ಲಿ ಒಂದೊಂದೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ವಿಷ್ಣುವಿನ ಅವತಾರಗಳ ಕಥೆಗಳು ಈ ಪಟ್ಟಿಯಲ್ಲಿದೆ. ಸಿನಿರಸಿಕರು ಕೂಡ ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
‘Mahavatar Narasimha’, the animated retelling of Vishnu’s Narasimha avatar, has grossed ₹175 crore in 15 days and is drawing praise from Muslim audiences for its message of universal faith.
Read more about: hombale films hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X