ಸಂಜಯ್ ಕಪೂರ್ ಅನೈತಿಕ ಸಂಬಂಧ ; ಎಲ್ಲವೂ ಗೊತ್ತಿದ್ದು ಸುಮ್ಮನೆ ಇದ್ದಿದ್ದೇಕೆ ಪತ್ನಿ..?
ಇಂದು ಖುಷಿ ಖುಷಿಯಾಗಿ ನಿಂತು ಹಸೆಮಣೆ ಏರಿ ಮದುವೆಯಾದವರು ದಿನ ಕಳೆಯುವಷ್ಟರಲ್ಲಿ ಕೋರ್ಟ್ ಮೆಟ್ಟಿಲೇರುವ ಮಟ್ಟಿಗೆ ಮದುವೆ, ದಾಂಪತ್ಯ ಅನ್ನೋದು ಕಾಮನ್ನಾಗಿರೋದು ದುರ್ದೈವ. ಅದರಲ್ಲೂ ಸಿನಿಮಾ ಮಂದಿಗೆ ಇದು ಬಟ್ಟೆ ಬದಲಿಸಿದಷ್ಟೇ ಸುಲಭ.
ಆರಂಭದಲ್ಲಿ ಹೃದಯದಾಳದಿಂದ ಶುರುವಾಗಿ ಕಣ್ಣಲ್ಲಿ ಸೇರಿಕೊಳ್ಳುವ ಪ್ರೀತಿ ಆ ನಂತರ ಕಣ್ಣೀರಧಾರೆಗೆ ಕಾರಣವಾದ ಅನೇಕ ಉದಾಹರಣೆಗಳು ಬಣ್ಣದ ಲೋಕದಲ್ಲಿವೆ. ಬೇರೆಯವರ ಮೇಲಿನ ಮೋಹಕ್ಕೋ.. ಹಣದ ದಾಹಕ್ಕೋ.. ಮಕ್ಕಳ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೇ, ವರ್ಷಾನುವರ್ಷಗಳ ದಾಂಪತ್ಯಕ್ಕೆ ಅನೇಕರು ಇಲ್ಲಿ ಎಳ್ಳು ನೀರು ಬಿಟ್ಟಿದ್ದಾರೆ. ಬೇರೆಯವರ ಜೊತೆ ಸುಖವಾದ ಜೀವನವನ್ನೂ ನಡೆಸುತ್ತಿದ್ದಾರೆ.

ಆದರೆ ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್ ಇದಕ್ಕೆ ತದ್ವಿರುದ್ಧ. ಯಾಕೆಂದರೆ.. ತನ್ನ ಗಂಡನ ಕಾಮಪುರಾಣ ಗೊತ್ತಿದ್ದರೂ ಮಹೀಪ್ ತನ್ನ ಗಂಡನ ಜೊತೆ ಒಂದೇ ಸೂರಿನಡಿ ಸಂಸಾರ ನಡೆಸುತ್ತಿದ್ದಾರೆ. ಅಚ್ಚರಿ ಎನಿಸಿದರೂ ಇದು ನಿಜ. ಖುದ್ದು ಮಹೀಪ್ ಕಪೂರ್ ಈ ವಿಚಾರವನ್ನ ಬಹಿರಂಗವಾಗಿ ಹೇಳಿದ್ದಾರೆ
ಹೌದು, ಜೂಮ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಹೀಪ್ ಕಪೂರ್ ತಮ್ಮ ಪತಿ ಸಂಜಯ್ ಕಪೂರ್ ಅವರ ಅಕ್ರಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತನ್ನ ಗಂಡ ಅನೇಕ ಯುವತಿಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು, ಆದರೂ ನಾನು ಎಲ್ಲವೂ ಗೊತ್ತಿದ್ದು ಸುಮ್ಮನಾದೆ ಅಂದಿದ್ದಾರೆ. ಬದುಕಿನ ಅನಿವಾರ್ಯತೆ ಎಲ್ಲವನ್ನೂ ಕಲಿಸುತ್ತೆ ಅಂದಿದ್ದಾರೆ.
ಸಂಜಯ್ ಕಪೂರ್ ಅವರ ಈ ಕಾಮದಾಹದ ಕಥೆ ಗೊತ್ತಾದಾಗ ಎಲ್ಲರಂತೆ ನಾನು ವಿಚ್ಛೇದನ ಪಡೆಯಲು ನಿರ್ಧಾರ ಮಾಡಿದ್ದೆ, ಮಗಳು ಶನಾಯಾ ಜೊತೆ ಮನೆಯಾಚೆ ಹೋಗಬೇಕೆಂದುಕೊಂಡಿದ್ದೇ ಆದರೆ ಆಗಷ್ಟೇ ಮಗ ಜಹಾನ್ ಕಪೂರ್ ಜನಿಸಿದ್ದ. ಈ ಕಾರಣಕ್ಕೆ ಹೆಣ್ಣಾಗಿ.. ತಾಯಿಯಾಗಿ.. ನನ್ನ ಕಷ್ಟ ಮತ್ತು ದು:ಖಗಳನ್ನ ಮರೆಯಬೇಕಾಯಿತು ಎಂದಿದ್ದಾರೆ. ಮಕ್ಕಳಿಂದ ತಂದೆಯ ಪ್ರೀತಿಯನ್ನ ಕಸಿದುಕೊಳ್ಳುವ ಬದಲು ನೋವನ್ನ ನುಂಗಿ ಅವರ ಜೊತೆಯಲ್ಲಿ ಇರುವ ನಿರ್ಧಾರವನ್ನ ಮಾಡಿದೆ ಎಂದಿದ್ದಾರೆ.

ಇಷ್ಟೇ ಅಲ್ಲ.. ಪ್ರಪಂಚದಲ್ಲಿ ಯಾರು ಪರ್ಫೆಕ್ಟ್ ಅಲ್ಲ ಎಲ್ಲರಲ್ಲಿಯೂ ಲೋಪ-ದೋಷಗಳು ಇದ್ದೇ ಇರುತ್ತವೆ. ಆ ಲೋಪ ದೋಷಗಳನ್ನ ತಿದ್ದಿ ತೀಡಿ ಬದುಕುವುದೇ ಜೀವನ ಎಂದು ಮಹೀಪ್ ಕಪೂರ್ ಹೇಳಿದ್ದಾರೆ. ದೂರದಿಂದ ವ್ಯಕ್ತಿಯ ವ್ಯಕ್ತಿತ್ವ ಅಳೆಯುವುದು ಸುಲಭ ಆದರೆ ಅವರ ಸ್ಥಾನದಲ್ಲಿ ನಿಂತು ಯೋಚನೆ ಮಾಡಿದಾಗ ವಾಸ್ತವದ ಅರಿವು ಆಗುತ್ತೆ ಎಂದು ಹೇಳಿರುವ ಮಹೀಪ್, ಒಂದು ವೇಳೆ ಅವತ್ತು ಆತುರಕ್ಕೆ ಬಿದ್ದು ನಾನು ಸಂಜಯ್ ಕಪೂರ್ ಅವರಿಂದ ದೂರವಾಗಿದ್ದರೆ ಅದು ನನ್ನ ಬದುಕಿನ ಬಹುದೊಡ್ಡ ತಪ್ಪಾಗುತ್ತಿತ್ತು ಎಂದು ಕೂಡ ಹೇಳಿದ್ದಾರೆ ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್
ಇನ್ನೂ ಇದೇ ಸಂದರ್ಶನದಲ್ಲಿ ಮಹೀಪ್ ಕಪೂರ್ ಪಕ್ಕ ಇದ್ದ ಚಂಕಿ ಪಾಂಡೆ ಪತ್ನಿ ಮತ್ತು ಅನನ್ಯಾ ಪಾಂಡೆ ತಾಯಿ ಕೂಡ ಮಹೀಪ್ ಕಪೂರ್ ಅವರ ಈ ಮಾತನ್ನ ಸಮರ್ಥಿಸಿಕೊಂಡಿದ್ದಾರೆ. ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತೆ ಆ ಅಭಿಪ್ರಾಯವನ್ನ ಗೌರವಿಸಬೇಕೆ ಹೊರತು ಅವರ ಬಗ್ಗೆ ಅಸಹ್ಯ ಪಡಬಾರದು ಎಂದಿದ್ದಾರೆ.

ಸದ್ಯಕ್ಕೆ ಸಂಜಯ್ ಕಪೂರ್ ಬಗ್ಗೆ ಅವರ ಪತ್ನಿ ಆಡಿದ ಈ ಮಾತುಗಳ ಬಗ್ಗೆ ಬಾಲಿವುಡ್‌ನಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಅನೇಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಸಂಜಯ್ ಕಪೂರ್ ವ್ಯಕ್ತಿತ್ವದ ಬಗ್ಗೆ ಚರ್ಚೆ ಮಾಡುತ್ತಿದ್ದರೆ ಇನ್ನೂ ಕೆಲವರು ಮಹೀಪ್ ಕಪೂರ್ ಅವರ ನಿರ್ಧಾರ ಸರಿನಾ.. ತಪ್ಪಾ ಅನ್ನುವ ಚರ್ಚೆ ಮಾಡುತ್ತಿದ್ದರೆ. ಇಷ್ಟು ವರ್ಷ ಎಲ್ಲವನ್ನೂ ಸಹಿಸಿಕೊಂಡು ಸಂಸಾರ ನಡೆಸಿದ ಮೇಲೆ ಈಗ ಬಂದು ಮಾತನಾಡಿ ಗಂಡನ ಮರ್ಯಾದೆಯನ್ನ ಸಾರ್ವಜನಿಕವಾಗಿ ತಗೆಯುವ ಅವಶ್ಯಕತೆಯಾದರೂ ಏನಿತ್ತು ಎಂದು ಕೂಡ ಕೆಲವರು ತಮ್ಮ ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ


Click it and Unblock the Notifications











