For Quick Alerts
  ALLOW NOTIFICATIONS  
  For Daily Alerts

  ಮಹತ್ವಾಕಾಂಕ್ಷೆಯ 'ರಾಮಾಯಣ' ಸಿನಿಮಾದಿಂದ ಹಿಂದೆ ಸರಿದ ಹೃತಿಕ್ ಜಾಗಕ್ಕೆ ಸೌತ್ ಸ್ಟಾರ್ ಎಂಟ್ರಿ?

  |

  ರಾಮಾಯಣ ಕುರಿತು ಎರಡು ಸಿನಿಮಾಗಳು ತಯಾರಾಗುತ್ತಿವೆ. ಈ ಎರಡು ಸಿನಿಮಾಗಳು ಸಹ ಭಾರಿನಿರೀಕ್ಷೆಯನ್ನು ಹುಟ್ಟುಹಾಕಿವೆ. ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಮತ್ತೊಂದೆಡೆ ಹೃತಿಕ್ ರೋಷನ್ ರಾಮನಾಗಿ ಕಾಣಿಸಿಕೊಳ್ಳುತ್ತಿರುವ ರಾಮಾಯಣ ಯಾವಾಗ ಸೆಟ್ಟೇರಲಿದೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

  ಆದರೀಗ ಕೇಳಿಬಂದ ಸುದ್ದಿಯ ಪ್ರಕಾರ ನಟ ಹೃತಿಕ್ ರೋಷನ್ ರಾಮಾಯಣ ಸಿನಿಮಾದಿಂದ ಹಿಂದೆ ಸರಿದಿದ್ದಾರಂತೆ. ಹೃತಿಕ್ ರಾಮನಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದ 3ಡಿ ರಾಮಾಯಣ ಅನೇಕ ಸಮಯದಿಂದ ಭಾರಿ ಸದ್ದು ಮಾಡುತ್ತಿದೆ. ಆದರೀಗ ಹೃತಿಕ್ ಬಹುನಿರೀಕ್ಷೆಯ ಸಿನಿಮಾದಿಂದ ಹಿಂದೆ ಸರಿದಿರುವುದು ಅಚ್ಚರಿ ಮೂಡಿಸಿದೆ.

  ವಿಜಯ್ ಸೇತುಪತಿ ಪಾತ್ರಕ್ಕಾಗಿ ಹೃತಿಕ್ ರೋಷನ್ ಭರ್ಜರಿ ತಯಾರಿವಿಜಯ್ ಸೇತುಪತಿ ಪಾತ್ರಕ್ಕಾಗಿ ಹೃತಿಕ್ ರೋಷನ್ ಭರ್ಜರಿ ತಯಾರಿ

  ಈ ಮೊದಲು ಹೃತಿಕ್ ರಾಮ ಪಾತ್ರದಿಂದ ರಾವಣನ ಪಾತ್ರಕ್ಕೆ ಶಿಫ್ಟ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಹೃತಿಕ್ ಸಿನಿಮಾದ ಭಾಗವಾಗಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

  ಮಧು ಮಂತೇನಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಮಾಯಣ ಚಿತ್ರಕ್ಕೀಗ ರಾಮನ ಆಯ್ಕೆ ನಡೆಯುತ್ತಿದೆ. ಮೂಲಗಳ ಪ್ರಕಾರ ರಾಮನ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟ ಮಹೇಶ್ ಬಾಬು ಅವರನ್ನು ಸಂಪರ್ಕ ಮಾಡಿದ್ದಾರಂತೆ. ಮಹೇಶ್ ಬಾಬು ಕಡೆಯಿಂದ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಹೇಶ್ ಬಾಬು ಗ್ರೀನ್ ಸಿಗ್ನಲ್ ನೀಡುತ್ತಾರಾ ಎಂದು ಸಿನಿಮಾತಂಡ ಕಾಯುತ್ತಿದೆಯಂತೆ.

  ಈ ಮೊದಲು ರಾಮನ ಪಾತ್ರಕ್ಕೆ ಪ್ರಭಾಸ್ ಅವರನ್ನು ಸಹ ಸಂಪರ್ಕ ಮಾಡಿದ್ದರು ಎನ್ನುವ ಸುದ್ದಿ ಇದೆ. ಆದರೆ ಪ್ರಭಾಸ್ ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ನಟಿಸುತ್ತಿದ್ದಾರೆ.

  ಅಮೆರಿಕದಲ್ಲಿ ಒಂದು ದಿನ ಮುಂಚಿತವಾಗಿ ರಿಲೀಸಾಗ್ತಿದೆ ಯುವರತ್ನ ಸಿನಿಮಾ | Yuvarathnaa | Filmibeat Kannada

  ಸುಮಾರು 500 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಚಿತ್ರಕ್ಕೆ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರವನ್ನು ಎರಡು ಭಾಗದಲ್ಲಿ ತೆರೆಗೆ ತರಲು ಸಿನಿಮಾತಂಡ ಪ್ಲಾನ್ ಮಾಡಿದೆ. ಚಿತ್ರದಲ್ಲಿ ಸೀತೆಯಾಗಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ರಾಮ ಯಾರಾಗ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

  English summary
  Telugu Actor Mahesh Babu to Play Lord Rama in 3D ramayana After hrithik roshan left the part.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X