Alia Bhatt Marriage: ಆಲಿಯಾ-ರಣ್‌ಬೀರ್ ಮದುವೆ ಬಗ್ಗೆ ಮಾಹಿತಿ ನೀಡಿದ ಆಲಿಯಾ ತಂದೆ ಮಹೇಶ್!
ಆಲಿಯಾ ಮತ್ತು ರಣ್‌ಬೀರ್ ಕಪೂರ್ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತೆ. ಈ ತಾರಾ ಜೋಡಿ ಮದುವೆ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹಾಗೇ ಕುಟುಂಬದವರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲಾ. ಆದರೆ ಬಾಲಿವುಡ್ ಅಂಗಳದಿಂದಲೇ ಇವರಿಬ್ಬರ ಮದುವೆ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ. ಕಳೆದ ಕೆಲವು ತಿಂಗಳು ಗಳಿಂದ ಇವರಿಬ್ಬರ ಮದುವೆ ಇದೇ ವರ್ಷ ನಡೆಯುತ್ತೆ. ಅದರಲ್ಲೂ ಎಪ್ರಿಲ್‌ನಲ್ಲೇ ಮದುವೆ ಜರುಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಳೆದ ಹಲವು ವರ್ಷಗಳಿಂದ ಆಲಿಯಾ ಮತ್ತು ರಣ್‌ಬೀರ್ ಪ್ರೀತಿಯಲ್ಲಿ ಇದ್ದಾರೆ. ಪದೇ ಪದೆ ಅಲ್ಲಿ ಇಲ್ಲಿ ಓಡಾಡೋದು, ವಿದೇಶಗಳಿಗೆ ಪ್ರಯಾಣ ಕೂಡ ಒಟ್ಟಿಗೆ ಮಾಡಿದ್ದು ಉಂಟು. ಹಾಗೇ ಇವರಿಬ್ಬರ ಆತ್ಮೀಯತೆ ಕಂಡು ಬಾಲಿವುಡ್ ಈ ಇಬ್ಬರ ಪ್ರೀತಿ ಪ್ರೇಮದ ಬಗ್ಗೆ ಬಹಿರಂಗ ಪಡಿಸಿತ್ತು. ಅದಾದ ನಂತರ ಇವರ ಸೀಕ್ರೆಟ್ ಲವ್ ಎಲ್ಲೆಡೆ ವೈರಲ್ ಆಯ್ತು. ಹಾಗೇ ಅನೇಕ ಭಾರಿ ಇವರು ತಮ್ಮ ಪ್ರೀತಿಯ ಬಗ್ಗೆನೂ ಮಾತನಾಡಿಕೊಂಡಿದ್ದಾರೆ.
ಇದೀಗ ಎಲ್ಲೆಡೆ ಈ ಜೋಡಿ ಸುದ್ದಿ ಇಲ್ಲದೆ ಗುಟ್ಟಾಗಿ ಮದುವೆ ತಯಾರಿ ನಡೆಸುತ್ತಿದೆ ಎನ್ನಲಾಗುತ್ತಿದೆ. ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇದಕ್ಕಾಗಿ ಈ ಜೋಡಿ ಈಗಾಗಲೇ ತಯಾರಿ ಮಾಡುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಈ ಮದುವೆ ಗುಸು ಗುಸು ಬಗ್ಗೆ ಇದೀಗ ಆಲಿಯಾ ಭಟ್ ತಂದೆ ಮಹೇಶ್ ಭಟ್ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಆಲಿಯಾ ಮತ್ತು ರಣಬೀರ್ ಏಪ್ರಿಲ್‌ನಲ್ಲಿ ಮದುವೆಯಾಗುತ್ತಾರೆ ಎಂಬ ವದಂತಿಗಳು ನಿಜನಾ ಎಂದು ಆಲಿಯಾ ತಂದೆಯನ್ನು ಕೇಳಿದಾಗ, ಅವರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. "ಮದುವೆ ವದಂತಿಗಳು ಬಹಳ ಸಮಯದಿಂದ ನಡೆಯುತ್ತಿದೆ. ನಾವು ಇನ್ನೂ ಮದುವೆಗೆ ಸಿದ್ಧವಾಗಿಲ್ಲ. ಹಾಗಿದ್ದಾಗ ಇಷ್ಟು ಬೇಗ ಮದುವೆ ಹೇಗೆ ನಡೆಯಲು ಸಾಧ್ಯ? ಎಂದು ಉತ್ತರಿಸಿದ್ದಾರೆ. ಒಂದು ವೇಳೆ ಈಗ ಹರಿದಾಡುತ್ತಿರುವ ವದಂತಿ ನಿಜವಾದರೇ ಮೊದಲು ಶಾಕ್ ಆಗೋದು ನನಗೆ. ಯಾಕೆಂದರೆ ಮದುವೆ ಬಗ್ಗೆ ಯಾವುದೇ ತಯಾರಿ ಇನ್ನು ನಡೆದಿಲ್ಲಾ. ಆಲಿಯಾ ಮತ್ತು ರಣ್‌ಬೀರ್ ಇಬ್ಬರು ಮದುವೆ ಆಗುತ್ತಾರೆ. ಆದರೆ ಯಾವತ್ತು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ." ಎಂದಿದ್ದಾರೆ.

ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ರಣ್‍ಬೀರ್ ಹಾಗೂ ಆಲಿಯಾ ಭಟ್ ಜೋಡಿ ಕೂಡ ಒಂದು. ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಚಿತ್ರೀಕರಣದ ವೇಳೆ ಇಬ್ಬರು ಡೇಟಿಂಗ್ ಆರಂಭಿಸಿದರು. ಆರಂಭದಲ್ಲಿ ತಮ್ಮ ರಿಲೆಷನ್ ಶಿಪ್ ಬಗ್ಗೆ ಎಲ್ಲೂ ಬಾಯಿ ಬಿಡದ ಈ ಜೋಡಿ ನಂತರದ ದಿನಗಳಲ್ಲಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸಿದರು. ಸದ್ಯ ರಣ್‍ಬೀರ್ ಹಾಗೂ ಆಲಿಯಾ ಮದುವೆ ಯಾವಾಗ ಆಗುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇದೀಗ ಆಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಮದುವೆ ಈ ವರ್ಷವೇ ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿದೆ.


Click it and Unblock the Notifications











